ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಜನಪದ ಸಾಹಿತ್ಯ, ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಬಹುದೊಡ್ಡಜವಾಬ್ದಾರಿ ಯುವಶಕ್ತಿಯ ಮೇಲಿದೆ : ಡಾ. ಜೀವನ್ ಸಾಬ್ ವಾಲಿಕಾರ್ ಅಭಿಮತ.

ಕೊಪ್ಪಳ : 2026-27ನೇ ಸಾಲಿನ ಸಹಪಠ್ಯಚಟುವಟಿಕೆಗಳ ಉಧ್ಘಾಟನಾ ಸಮಾರಂಭ, ಮತ್ತು ಪದವಿ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭ.

ಕಾಲೇಜು ಶಿಕ್ಷಣ ಇಲಾಖೆ, ಸರಕಾರಿ ಪ್ರಥಮ ದರ್ಜೆ ಕಾಲೇಜು ಕೊಪ್ಪಳದಲ್ಲಿ 2026-27ನೇ ಶೈಕ್ಷಣಿಕ ಸಾಲಿನ, ಸಹ ಪಠ್ಯ ಚಟುವಟಿಕೆಗಳ ಉದ್ಘಾಟನೆ, ಮತ್ತು ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭ ಕಾರ್ಯಕ್ರಮ ಜರುಗಿತು.
ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ, ಖ್ಯಾತ ಜಾನಪದ ಕಲಾವಿದರು, ಕರ್ನಾಟಕ ಸರಕಾರದ ಜಾನಪದ ಅಕಾಡೆಮಿಯ ಸದಸ್ಯರು ಆಗಿರುವ ಡಾ. ಜೀವನ್ ಸಾಬ್ ವಾಲಿಕಾರ್ ಅವರು
ಭಾಗವಹಿಸಿ, ಸಮಾರಂಭನ್ನು ಉದ್ದೇಶಿಸಿ, ಮಾತನಾಡುತ್ತಾ ನಮ್ಮ ಜನಪದರು ಯಾವ ವಿಶ್ವವಿದ್ಯಾಲಯಗಳಿಗೂ ಹೋಗಿ ಅಭ್ಯಾಸ ಮಾಡಿದವರಲ್ಲ, ಆದರೆ ಒಳ್ಳೆಯ ನೀತಿ, ಸಂಸ್ಕಾರ, ವಿಚಾರಗಳನ್ನು ಬಿತ್ತಿ, ನಮ್ಮ ನಾಡು ಜಗತ್ತಿನಲ್ಲೇ ಹೆಸರುವಾಸಿಯಾಗುವಂತೆ, ಗೀಗೀಪದ, ಸೋಬಾನೆ ಪದ, ಲಾವಣಿ, ಜನಪದ ಗೀತೆ, ಕಥೆ, ಸಣ್ಣಾಟ, ದೊಡ್ಡಾಟದಂತಹ ಕಲೆಗಳ ಮೂಲಕ ನಮ್ಮ ಸಂಸ್ಕೃತಿ ಯ ಬೇರುಗಳನ್ನು ಗಟ್ಟಿಗೊಳಿಸಿದ್ದಾರೆ, ಆದರೆ ಆಧುನಿಕ ಪೀಳಿಗೆ ಅದನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳದೇ ಇರುವುದು ಬೇಸರ ತರುತ್ತದೆ, ಅದನ್ನು ಉಳಿಸುವ, ಬೆಳೆಸುವ ಶಕ್ತಿ ನಿಮ್ಮಂತಹ ಯುವಪೀಳಿಗೆಯ ಮೇಲಿದೆ, ಮತ್ತು ಅದು ನಿಮಗೆ ಮಾತ್ರ ಸಾಧ್ಯ, ಅಂತಹ ಕಾರ್ಯ ನಿಮ್ಮಿಂದ ನೆರವೇರಲಿ ಎಂದು ಅನೇಕ ನೀತಿಯುಕ್ತ
ಉದಾಹರಣೆಗಳ ಮೂಲಕ ಹೇಳಿದರು.
ಸಭೆಯ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ವೈ. ಬಿ. ಅಂಗಡಿ ಯವರು,
ವಹಿಸಿ ಅಧ್ಯಕ್ಷೀಯ ನುಡಿಗಳನ್ನಾಡಿದರು.
ವಿದ್ಯಾರ್ಥಿ ಸರ್ವೇಶ ಕುಕನೂರು ಅವರ ಪ್ರಾರ್ಥನೆ ಯೊಂದಿಗೆ ಕಾರ್ಯಕ್ರಮ ಆರಂಭವಾಯಿತು.
ವೇದಿಕೆಯಲ್ಲಿ, ಕಲಾ ವಿಭಾಗದ ಹಿರಿಯ ಪ್ರಾಧ್ಯಾಪಕರಾದ ಪ್ರೊ. ಮೃತ್ಯುಂಜಯ ಹಿರೇಮಠ, ಇತಿಹಾಸ ವಿಭಾಗದ ಮುಖ್ಯಸ್ಥರಾದ ಡಾ. ಚೂಡಾಮಣಿ, ಅರ್ಥ ಶಾಸ್ತ್ರ ವಿಭಾಗದ ಡಾ. ಗಿರಿಜಾ ತುರಮರಿ, ಹಾಗೂ ಗ್ರಂಥಪಾಲಕರಾದ ಪ್ರಕಾಶಗೌಡ ಎಸ್. ಯು. ಉಪಸ್ಥಿತರಿದ್ದರು.
ಕನ್ನಡ ವಿಭಾಗದ ಮುಖ್ಯಸ್ಥರು, ಸಾಂಸ್ಕೃತಿಕ ವಿಭಾಗದ ಸಂಚಾಲಕರೂ ಆದ ಪ್ರೊ. ಯಮನೂರಪ್ಪ, ಟಿ. ಅವರು, ಪ್ರಾಸ್ತಾವಿಕ ಮಾತುಗಳನ್ನಾಡಿ, ಕೇವಲ ಇಪ್ಪ ತ್ತು ವರ್ಷಗಳ ಹಿಂದೆ, ಆರಂಭವಾದ ಈ ಕಾಲೇಜು ಇಂದು ರಾಜ್ಯದಲ್ಲೇ ಮಾದರಿ ಕಾಲೇಜುಗಳಲ್ಲಿ ಒಂದಾಗಿದೆ, ಇದಕ್ಕೆಲ್ಲ ಎಲ್ಲಾ ಅಧ್ಯಾಪಕರ ಗುಣಮಟ್ಟ ದ ಶಿಕ್ಷಣ ನೀಡುವಿಕೆಯೇ ಕಾರಣ ಎಂದು ಹೇಳಲು ಹೆಮ್ಮೆ ಎನಿಸುತ್ತದೆ, ಎಂದರು.
ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಶ್ರೀಮತಿ ಸುಧಾ ಹೆಗಡೆ ಅವರು ವೇದಿಕೆಯಲ್ಲಿದ್ದ ಎಲ್ಲರನ್ನೂ ವಿದ್ಯಾರ್ಥಿಗಳಿಂದ ಹೂ ಗುಚ್ಛ ಕೊಡುವ ಮೂಲಕ ಸ್ವಾಗತಿಸಿದರು.
ಕನ್ನಡ ಅತಿಥಿ ಉಪನ್ಯಾಸಕರಾದ ಸೋಮೇಶ ಉಪ್ಪಾರ,
ಅತಿಥಿಗಳಾಗಿ ಆಗಮಿಸಿದ್ದ
ಖ್ಯಾತ ಜಾನಪದ ಕಲಾವಿದರಾದ ಡಾ. ಜೀವನ್ ಸಾಬ್ ವಾಲಿಕಾರ್, ಬಿನ್ನಾಳ ಅವರನ್ನು ಪರಿಚಯಿಸಿದರು.
ಕಾರ್ಯಕ್ರಮವನ್ನು ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಪಕರಾದ ಬಸವರಾಜ ಡಿ.ಅವರು ಅಚ್ಚು ಕಟ್ಟಾಗಿ, ನಿರ್ವಹಿಸಿದರು, ಕೊನೆಯಲ್ಲಿ ಕನ್ನಡ ವಿಭಾಗದ ಡಾ. ಹನುಮಂತಪ್ಪ ಸಿ. ಬಿ. ಅವರ ವಂದನಾರ್ಪಣೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.
ಭೋಜನದ ಬಳಿಕ ಹೊಸದಾಗಿ ಪ್ರವೇಶ ಪಡೆದ, ಹಾಗೂ ಈಗಾಗಲೇ ಮೂರು, ಮತ್ತು ಐದನೇ ಸೆಮಿಸ್ಟರ್ ತರಗತಿಗಳಲ್ಲಿ ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿ/ವಿದ್ಯಾರ್ಥಿನಿಯರಿಂದ ಹಾಡು, ನೃತ್ಯ ಗಳಂತಹ ಮನಂರಂಜನೀಯ ಕಾರ್ಯಕ್ರಮಗಳು ಜರುಗಿದವು.
ಕಾಲೇಜಿನ ಎಲ್ಲಾ ಬೋಧಕ ವರ್ಗ, ಮತ್ತು ಬೋಧಕೇತರ ಸಿಬ್ಬಂದಿ, ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.

ಸಾಂಸ್ಕೃತಿಕ ಕಾರ್ಯಕ್ರಮ ವನ್ನು ಡಾ. ಮಹಾಂತೇಶ ನೆಲಾಗಣಿ, ಅವರು ನಿರೂಪಿಸಿದರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!