ಹುನಗುಂದ: ಕನ್ನಡದ ಹಿರಿಯ ಸಿನಿಮಾ ನಟ ಶಿವರಾಜಕುಮಾರ ದಂಪತಿ ಸಣ್ಣ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ದಿಮೆಗಳ ಸಚಿವ ವಿಜಯಾನಂದ ಕಾಶಪ್ಪನವರ ಅವರ ಇಳಕಲ್ಲಿನ ಎಸ್.ಆರ್. ಕೆ. ಫಾರ್ಮ್ ಹೌಸ್ ಗೆ ಭೇಟಿ ನೀಡಿದರು.
ಐಹೊಳೆಯ ಕಾರ್ಯಕ್ರಮವೊಂದಕ್ಕೆ ಆಗಮಿಸಿದ ಸಂದರ್ಭದಲ್ಲಿ ಬಂದಿದ್ದರು. ಇವರ ಜೊತೆ ಪತ್ನಿ ಗೀತಾ ಶಿವರಾಜಕುಮಾರ ಕೂಡ ಹಾಜರಿದ್ದರು. ಈರ್ವರನ್ನೂ ಸಚಿವ ಕುಟುಂಬ ಉಪಚರಿಸಿ ನಂತರ ಗೌರವಿಸಿದರು. ಸಚಿವರ ಪತ್ನಿ ವೀಣಾ ಕಾಶಪ್ಪನವರ, ಮಗಳು ಸಮೀಕ್ಷಾ ಕಾಶಪ್ಪನವರ ಮತ್ತು ಸಹೋದರ ಬಸವರಾಜ ಶಿರೂರ ಉಪಸ್ಥಿತರಿದ್ದರು.
- ಕರುನಾಡ ಕಂದ ಸುದ್ದಿ




















