ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಹುನಗುಂದದಲ್ಲಿ ಅ.6ರಿಂದ 18ರವರೆಗೆ ಹಿಮಾಲಯನ್ ಧ್ಯಾನ ಯೋಗ

ಹುನಗುಂದ: ಬಸವ ಕೇಂದ್ರ, ಹುನಗುಂದ ಹಾಗೂ ಅಕ್ಕನ ಬಳಗದ ಸಹಯೋಗದಲ್ಲಿ ಹಿಮಾಲಯನ್ ಧ್ಯಾನ ಯೋಗ ಕಾರ್ಯಕ್ರಮವನ್ನು ಅಕ್ಟೋಬರ್ 6 ರಿಂದ 18 ರವರೆಗೆ ಹುನಗುಂದದ ಬಸವ ಮಂಟಪದಲ್ಲಿ ಆಯೋಜಿಸಲಾಗಿದೆ.
ಪ್ರತಿದಿನ ಬೆಳಿಗ್ಗೆ 5.30ರಿಂದ 6.30ರವರೆಗೆ ಯೋಗಾಭ್ಯಾಸ ನಡೆಯಲಿದ್ದು, ಉಸಿರಾಟದ ಕ್ರಮ, ವಿವಿಧ ಆಸನಗಳು, ಸೂರ್ಯ ನಮಸ್ಕಾರ, ಪ್ರಾಣಾಯಾಮ ಹಾಗೂ ಧ್ಯಾನದ ವಿಧಿಗಳನ್ನು ಕಲಿಸಲಾಗುತ್ತದೆ. ಇದರೊಂದಿಗೆ ಸಾಮೂಹಿಕ ಭಜನೆ ಮತ್ತು ಆಧ್ಯಾತ್ಮಿಕ ಪ್ರವಚನ ಕಾರ್ಯಕ್ರಮವೂ ನಡೆಯಲಿದೆ.
ಕಾರ್ಯಕ್ರಮಕ್ಕೆ ಚಿತ್ತರಗಿ ವಿಜಯಮಹಾಂತೇಶ್ವರ ಸಂಸ್ಥಾನಮಠ, ಹುನಗುಂದದ ಪೂಜ್ಯ ಶ್ರೀ ಮ.ನಿ.ಪ್ರ. ಡಾ. ಗುರುಮಹಾಂತ ಸ್ವಾಮೀಜಿ ಅವರ ದಿವ್ಯ ಸಾನಿಧ್ಯ ಇರಲಿದೆ. ನಿಸರ್ಗಧಾಮ ವಿಜಯಮಹಾಂತ ತೀರ್ಥ, ಶಿರೂರಿನ ಪೂಜ್ಯ ಶ್ರೀ ಮ.ನಿ.ಪ್ರ. ಡಾ. ಬಸವಲಿಂಗ ಮಹಾಸ್ವಾಮೀಜಿ ಅಧ್ಯಕ್ಷತೆ ವಹಿಸಲಿದ್ದಾರೆ.
ಹಿಮಾಲಯದಲ್ಲಿ ಆರು ವರ್ಷಗಳ ಕಾಲ ಯೋಗ ಸಾಧನೆ ಮಾಡಿರುವ ಪರಮಪೂಜ್ಯ ಶ್ರೀ ನಿರಂಜನ ಸ್ವಾಮೀಜಿ ಅವರು ಯೋಗ ಹಾಗೂ ಧ್ಯಾನದ ಕುರಿತು ಮಾರ್ಗದರ್ಶನ ಮತ್ತು ಪ್ರವಚನ ನೀಡಲಿದ್ದಾರೆ.
ಹುನಗುಂದ ನಗರದ ಸಮಸ್ತ ಸದ್ಭಕ್ತರು ಈ ಕಾರ್ಯಕ್ರಮದ ಸದುಪಯೋಗ ಪಡೆದುಕೊಂಡು ಆಧ್ಯಾತ್ಮಿಕ ಹಾಗೂ ಆರೋಗ್ಯಕರ ಜೀವನದತ್ತ ಹೆಜ್ಜೆ ಇಡಬೇಕೆಂದು ಬಸವ ಕೇಂದ್ರ ಮತ್ತು ಅಕ್ಕನ ಬಳಗದ ಪದಾಧಿಕಾರಿಗಳು ಮನವಿ ಮಾಡಿದ್ದಾರೆ.

ಸ್ಥಳ: ಬಸವ ಮಂಟಪ, ಹುನಗುಂದ
ದಿನಾಂಕ: 06-10-2026 ರಿಂದ 18-10-2026
ಸಮಯ: ಪ್ರತಿದಿನ ಬೆಳಿಗ್ಗೆ 5.30ರಿಂದ
ಸೂಚನೆ: ಎಲ್ಲರೂ ನಿಗದಿತ ಸಮಯಕ್ಕಿಂತ 5 ನಿಮಿಷ ಮುಂಚಿತವಾಗಿ ಆಗಮಿಸಬೇಕಾಗಿ ವಿನಂತಿಸಲಾಗಿದೆ.

“ಶರಣರ ಬರವಿಗೆ ಪ್ರಾಣ ಜೀವಾಳವಯ್ಯ”
“ಸೋಹಂ ಎಂದೆನಿಸದೇ ದಾಸೋಹಂ ಎಂದೆನಿಸಯ್ಯ”
ಅಧ್ಯಕ್ಷರು ಹಾಗೂ ಸದಸ್ಯರು
ಬಸವ ಕೇಂದ್ರ, ಹುನಗುಂದ
ಅಧ್ಯಕ್ಷರು ಹಾಗೂ ಸದಸ್ಯರು
ಅಕ್ಕನ ಬಳಗ, ಹುನಗುಂದ
ಇವರು ಮಾಹಿತಿಗಾಗಿ ಸಂಪರ್ಕಿಸಲು ಕೋರಿದ್ದಾರೆ.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!