ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕ.ಸಾ.ಪ. ಚುನಾವಣಾ ಕಣಕ್ಕೆ ಅಭ್ಯರ್ಥಿಯಾಗಿ ಅಮರೇಶ್ ಮೈಲಾಪುರ ಆಯ್ಕೆ

ಕೊಪ್ಪಳ ನಗರದ ನೌಕರರ ಸಾಂಸ್ಕೃತಿಕ ಭವನದಲ್ಲಿ ಜರುಗಿದ ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣಾ ಅಭ್ಯರ್ಥಿ ಆಯ್ಕೆ ಸಭೆಯಲ್ಲಿ ಸರ್ವಾನುಮತದಿಂದ ಶಿಕ್ಷಕ ಮತ್ತು ಸಂಘಟಕರು ಆಗಿರುವ ಅಮರೇಶ ಮೈಲಾಪುರ ಇವರನ್ನು ಆಯ್ಕೆ ಮಾಡಲಾಯಿತು.
ಈ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ನಿಕಟ ಪೂರ್ವ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ರವಿತೇಜ ಅಬ್ಬಿಗೇರಿ ಅವರು ಮಾತನಾಡಿ, ನಾನು ಏಳು ತಾಲೂಕಿನ ಆಜೀವ ಸದಸ್ಯರಲ್ಲಿ ಮನವಿಯನ್ನು ಮಾಡಿಕೊಳ್ಳುತ್ತೇನೆ, ಕನ್ನಡ ಸಾಹಿತ್ಯ ಪರಿಷತ್ತಿಗೆ ಕ್ರಿಯಾಶೀಲತೆಯನ್ನು ತಂದುಕೊಡಲು ಅಮರೇಶ ಮೈಲಾಪುರರವರನ್ನು ಗೆಲ್ಲಿಸುವ ಮೂಲಕ ಕೊಪ್ಪಳ ಜಿಲ್ಲೆಯಲ್ಲಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳನ್ನು ಗರಿಗೆದುರುವಂತೆ ಮಾಡಬೇಕಾಗಿದೆ. ಕಾರಣ ಅಮರೇಶ ಮೈಲಾಪುರ ಅವರನ್ನು ಸರ್ವ ಆಜೀವ ಸದಸ್ಯರು ಅವರನ್ನು ಬಹುಮತದಿಂದ ಆಯ್ಕೆ ಮಾಡಬೇಕಾಗಿ ವಿನಂತಿ ಮಾಡಿಕೊಂಡರು.
ಇದೇ ಸಂದರ್ಭದಲ್ಲಿ ಪ್ರಾಸ್ತಾವಿಕ ನುಡಿಗಳನ್ನು ಹೇಳಿದ ವಿಭಾಗಿಯ ಕಾನೂನು ಅಧಿಕಾರಿ. ಬಿ. ಎಸ್. ಪಾಟೀಲ್ ಅವರು ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ ಇತ್ತೀಚೆಗೆ ಸಾಹಿತಿಗಳನ್ನು ಗುರುತಿಸುವ ಕೆಲಸ ಕ್ಷೀಣಿಸುತ್ತಿದೆ ಮರಳಿ ಕನ್ನಡ ಸಾಹಿತ್ಯ ಪರಿಷತ್ತಿಗೆ ಹೊಸ ಕಾಯಕಲ್ಪವನ್ನು ತರುವ ನಿಟ್ಟಿನಲ್ಲಿ ನಾವು ನೀವು ಕ್ರಿಯಾಶೀಲ ವ್ಯಕ್ತಿ ಅಮರೇಶ ಮೈಲಾಪುರ ಅವರನ್ನು ಅಭ್ಯರ್ಥಿಯನ್ನಾಗಿ ಮಾಡಿ, ಗೆಲ್ಲಿಸಿಕೊಂಡು ಬರೋಣ, ಜೊತೆಗೆ ರಾಜ್ಯ ಕ.ಸಾ.ಪ ಅಭ್ಯರ್ಥಿಯಾದ ಡಾ. ಸಿ. ಸೋಮಶೇಖರ ಅವರ ಗೆಲುವಿಗಾಗಿಯೂ ಆಜೀವ ಸದಸ್ಯರೆಲ್ಲರೂ ಒಗ್ಗಟ್ಟಿನಿಂದ ಚುನಾವಣೆಯಲ್ಲಿ ಸಾಹಿತ್ಯ ಸಾಂಸ್ಕೃತಿಕ ಕಾಳಜಿಯನ್ನು ಹೊಂದಿರುವ ಅಮರೇಶ ಅವರನ್ನು ಬಹುಮತದಿಂದ ಗೆಲ್ಲಿಸಿಕೊಂಡು ಬರೋಣ, ಅದಕ್ಕೆ ತಮ್ಮೆಲ್ಲರ ಸಹಕಾರ ಅತ್ಯಗತ್ಯ ಎಂದು ಮಾತನಾಡಿದರು.
ಇದೆ ಸಭೆಯಲ್ಲಿ ಹಿರಿಯ ಚಿಂತಕ ಡಿ.ವಿ. ಬಡಿಗೇರ. ವೀರಣ್ಣ.ನಿಂಗೋಜಿ. ರಾಮ ಮೂರ್ತಿ ನವಲಿ, ಶ್ರೀಮತಿ ಸಾವಿತ್ರಿ ಮುಜುಮುದಾರ, ಶಿವಮೂರ್ತಿ ಇಟಗಿ, ವಿರೂಪಾಕ್ಷೇಶ್ವರ ಸ್ವಾಮಿ, ಈರಣ್ಣ ಹುರಕಡ್ಲಿ, ಮೋಹನಲಾಲ ಜೈನ್ ಮಾತನಾಡಿದರು.
ಜೊತೆಗೆ ನಿಯೋಜಿತ ಕನ್ನಡ ಸಾಹಿತ್ಯ ಪರಿಷತ್ತಿನ ಅಭ್ಯರ್ಥಿಯಾಗಿ ಆಯ್ಕೆಯಾದ ಅಮರೇಶ ಮೈಲಾಪುರ ಮಾತನಾಡಿ ನನ್ನ ಗೆಲುವಿಗೆ ಕೊಪ್ಪಳ, ಯಲಬುರ್ಗಾ, ಕುಷ್ಟಗಿ, ಕುಕನೂರು, ಕನಕಗಿರಿ, ಕಾರಟಗಿ, ಗಂಗಾವತಿ ತಾಲೂಕಿನ, ಆಜೀವ ಸದಸ್ಯರಾದ ತಾವು ನನ್ನನ್ನು ಆಶೀರ್ವಾದ ಮಾಡಿ ಗೆಲ್ಲಿಸಿರಿ. ನಿಮ್ಮ ನಿರೀಕ್ಷೆಗೂ ಮೀರಿ ಕನ್ನಡ ನಾಡು, ನುಡಿ, ಭಾಷೆ ಮತ್ತು ಸಾಹಿತ್ಯ ಪರಿಷತ್ತನ್ನು ಜನಪರವಾದ ಸಾಹಿತ್ಯ ಪರಿಷತ್ತನ್ನಾಗಿ ಪ್ರತಿಯೊಂದು ತಾಲೂಕಿನಲ್ಲಿ ಸದಾ ಚಟುವಟಿಕೆಗಳು ನಡೆಯುವಂತೆ ಕಾರ್ಯಕ್ರಮಗಳನ್ನು ಆಯೋಜನೆ ಮಾಡುತ್ತೇನೆ. ಇದಕ್ಕೆಲ್ಲ ತಮ್ಮ ಆಶೀರ್ವಾದ ಬಹು ಮುಖ್ಯವೆಂದು, ಪ್ರತಿಯೊಬ್ಬ ಆ ಜೀವ ಸದಸ್ಯರ ಸಹಕಾರವನ್ನು ಕೋರಿದರು. ವೇದಿಕೆಯ ಮೇಲೆ ಬಿ.ಜಿ.ಕರಿಗಾರ, ಜಿ.ಎಸ್.ಗೌಡರ, ಮಂಜುನಾಥ ಅಂಗಡಿ, ಮಹಾಂತೇಶ ನೆಲಾಗಣಿ, ಅಶೋಕ ಕುಲಕರ್ಣಿ, ಎಂ.ಎನ್.ಜನಾದ್ರಿ, ಎನ್.ಎ. ಕೆಂಚರಡ್ಡಿ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ನಿಯೋಜಿತ ಅಭ್ಯರ್ಥಿ ಅಮರೇಶ ಮೈಲಾಪುರ ಅವರನ್ನು ಸಿರಿಗನ್ನಡ ವೇದಿಕೆ ಮೂಲಕ ಸತ್ಕರಿಸಲಾಯಿತು.
ಕಾರ್ಯಕ್ರಮದ ನಿರೂಪಣೆಯನ್ನು ಯುವ ಕವಿ ಮಹೇಶ ಬಳ್ಳಾರಿ ಮತ್ತು ಜಿ.ಎಸ್. ಗೋನಾಳ್ ನೆರವೇರಿಸಿದರು. ವಂದನಾರ್ಪಣೆಯನ್ನು ರಾಷ್ಟ್ರ ಪ್ರಶಸ್ತಿ ಶಿಕ್ಷಕ ಎ.ಪಿ. ಅಂಗಡಿಯವರು ಕೋರಿದರು.

  • ಕರುನಾಡ ಕಂದ ಸುದ್ದಿ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!