ಮೈಸೂರು ಜಿಲ್ಲೆಯ ನಂಜನಗೂಡಿನ ತೇರಾ ಪಂತ್ ಸಭಾಭವನ ಕಾಮಾಕ್ಷಿ ಬಾಯಿ ಕಲ್ಯಾಣ ಮಂಟಪದ ಹತ್ತಿರ ಪೂಜ್ಯ ಆಚಾರ್ಯ ಶ್ರೀ ಮಹಾ ಶ್ರಮಣ್ ಜಿ ಸಂಘಟನೆಯ ಧರ್ಮಸಂಘದ ಭಾಗವಾಗಿ ಒಳ್ಳೆಯ ಉತ್ಸವದೊಂದಿಗೆ ಉತ್ತಮ ಚಟುವಟಿಕೆಗಳನ್ನು ನಡೆಸುವ ಸಂಘಟನೆಯ ಮೂಲಕ ಸ್ವಯಂ ಪ್ರೇರಣೆಯಿಂದ ರಕ್ತದಾನ ಮಾಡಿ ಜೀವ ಉಳಿಸಿ, ಸಂತೋಷದಿಂದ ರಕ್ತದಾನ ಮಾಡೋಣ ಮತ್ತೊಬ್ಬರು ಸಂತೋಷವಾಗಿ ಬಾಳಲು ಅನುವು ಮಾಡಿಕೊಡೋಣ ಎಂಬ ಧ್ಯೇಯದೊಂದಿಗೆ ರಕ್ತದಾನ ಶಿಬಿರ ತೇರಾ ಪಂತ್ ಯುವಕ ಪರಿಷತ್, ಬಿಜೆಪಿ ಯುವ ಮೋರ್ಚಾ ಸಹಯೋಗದೊಂದಿಗೆ ರಕ್ತದಾನ ಶಿಬಿರ ಕಾರ್ಯವನ್ನು ನಡೆಸಲಾಯಿತು.
ತೇರಾ ಪಂತ್ ಯುವಕ ಪರಿಷತ್ ಅಧ್ಯಕ್ಷರಾದ ಕುಲದೀಪ್ಕ್ ಬೂಹ್ರಾ, ಉಪಾಧ್ಯಕ್ಷರಾದ ಚೇತನ್ ಜೈನ್, ಸಹಯೋಗಿಗಳಾದ ಅಖ್ಲೇಶ್ ಮೆಹತಾ ಆಕಾಶ್ ಜೈನ್ ಫಾರಸ್ ಜೈನ್ , ನಗರ ಅಧ್ಯಕ್ಷರಾದ ಮನೋಜ್ ಗ್ರಾಮಾಂತರ ಅಧ್ಯಕ್ಷರಾದ ಸಿದ್ದರಾಜು, ಕುಮಾರ್ ಉಪಸ್ಥಿತರಿದ್ದು, ವೈದ್ಯಾಧಿಕಾರಿಗಳು, ದಾದಿಯರು, ಪ್ರಯೋಗ ತಜ್ಞರು ಹಾಜರಿದ್ದರು.
ಬೆಳಗಿನ ಅವಧಿಯಲ್ಲಿ 20 ಮಂದಿ ರಕ್ತದಾನಿಗಳು ರಕ್ತದಾನ ಮಾಡಿದ್ದು ವಿಶೇಷವಾಗಿತ್ತು. ಸಂಜೆವರೆಗೆ ಹೆಚ್ಚು ರಕ್ತದಾನಿಗಳು ರಕ್ತದಾನ ಮಾಡಿದರು.




















