ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಹಸಿರು ಆರತಿ ಹಳ್ಳಿಯ ಸೊಬಗು, ಕುಂದಾಲಮ್ಮ ದೇವಿ ಜಾತ್ರಾ ಮಹೋತ್ಸವ.

ಕೊರಟಗೆರೆ : ತಾಲ್ಲೂಕಿನ ಚನ್ನರಾಯನದುರ್ಗ ಹೋಬಳಿಯ ಕುರಂಕೋಟೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಹಳ್ಳಿಗಳಿಂದ ಹಸಿರು ಆರತಿ ಕಾರ್ಯಕ್ರಮ ಹಾಗೂ ಕುಂದಾಲಮ್ಮ ದೇವಿ ಜಾತ್ರಾ ಮಹೋತ್ಸವ ಹಳ್ಳಿ ಸೊಬಗಿನೊಂದಿಗೆ ಅದ್ದೂರಿಯಾಗಿ ನೆರವೇರಿತು.
ಕ್ಷೇತ್ರದಲ್ಲಿ ದೇವಾಲಯಗಳ ಜೀರ್ಣೋದ್ಧಾರಕ ಎಂಬ ಬಿರುದು ಪಡೆದಿರುವ ಪಿಎನ್ ಕೆ ಅವರು ಗ್ರಾಮಸ್ಥರ ಪ್ರೀತಿಯ ಆಹ್ವಾನಕ್ಕೆ ಗ್ರಾಮಕ್ಕೆ ಭೇಟಿ ನೀಡಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ತಾಯಿ ಕೃಪೆಯ ಪಾತ್ರರಾದರು.
ಗ್ರಾಮಸ್ಥರನ್ನು ಭೇಟಿ ಮಾಡಿ ಮಾತನಾಡಿದ ಪಿಎನ್ ಕೃಷ್ಣಮೂರ್ತಿ ಅವರು ಕ್ಷೇತ್ರದ ಜನರ ಪ್ರೀತಿಗೆ ಮತ್ತು ನಂಬಿಕೆಗೆ ನಾನು ಚಿರಋಣಿ,
ತಾಯಿಯ ಕೃಪೆ ನಿಮ್ಮೆಲ್ಲಾ ಗ್ರಾಮಸ್ಥರ ಮೇಲಿರಲಿ.
ಕ್ಷೇತ್ರದ ದೇವಾಲಯಗಳು ಮತ್ತು ಶಿಕ್ಷಣಕ್ಕೆ ನನ್ನ ಮೊದಲ ಪ್ರಾಮುಖ್ಯತೆ, ಹಳ್ಳಿಗಳಲ್ಲಿ ಪೌರಾಣಿಕ ನಾಟಕ ಜಾತ್ರೆ ಮತ್ತು ಹಬ್ಬಗಳಲ್ಲಿ ಭಾಗಿಯಾಗುವುದರಿಂದ ನಾವೆಲ್ಲರೂ ಒಂದೇ ಯಾವುದೇ ಬೇಧಭಾವವಿಲ್ಲದೆ ಬೆರೆತು ಸಂತೋಷದಿಂದ ಬದುಕೋಣ ಎಂದು ಹೇಳಿದರು.
ಮೊದಲಾದ್ಯತೆ ಸರ್ಕಾರಿ ಶಾಲಾ ಮಕ್ಕಳಿಗೆ ಸಮವಸ್ತ್ರ ಮತ್ತು ಶಾಲೆಗೆ ಬೇಕಾಗುವ ಕ್ರೀಡಾ ಸಾಮಗ್ರಿಗಳು, ಯುವಕರಿಗೆ ಕ್ರೀಡಾ ಸ್ಪೂರ್ತಿಯಾಗಿ, ಬಡವರ ಅಭಿವೃದ್ಧಿಗೆ ಬೇಕಾಗುವ ಕಾರ್ಯಕ್ರಮಗಳನ್ನು ನೀಡುವುದು ನನ್ನ ಗುರಿ ಎಂದು ಗ್ರಾಮಸ್ಥರ ನಂಬಿಕೆಗೆ ಪಾತ್ರರಾದ ಪಿಎನ್ ಕೆ ಅಭಿಪ್ರಾಯ ಪಟ್ಟರು.
ಜಾತ್ರಾ ಮಹೋತ್ಸವದಲ್ಲಿ ಭಾಗಿಯಾಗಿ ತಾಲೂಕು ಜೆಡಿಎಸ್ ಅಧ್ಯಕ್ಷರಾದ ಕಾಮರಾಜಣ್ಣ, ಸಿದ್ದಗಂಗಯ್ಯ, ಪರಮೇಶ್, ಲಂಬು ರಾಜಣ್ಣ, ಮಾವತ್ತೂರು ಮಂಜುನಾಥ್, ಹಾಗೂ ರಂಗಣ್ಣ ಇನ್ನು ಅನೇಕ ಮುಖಂಡರು ಹಾಗೂ ಪಿ ಎನ್ ಕೆ ಅಭಿಮಾನಿಗಳು ತಾಯಿ ಕೃಪೆಗೆ ಪಾತ್ರರಾದರು.

ಗ್ರಾಮಕ್ಕೆ ಭೇಟಿ ನೀಡಿದ್ದಾಗ ಗ್ರಾಮಸ್ಥರು ರಸ್ತೆ ಚರಂಡಿ ಇಲ್ಲದೆ ಪರದಾಡುವ ಸ್ಥಿತಿಯನ್ನು ಪಿಎನ್‌ ಕೆ ಅವರಿಗೆ ತೋರಿಸಿದರು.

ಅಧಿಕಾರಿಗಳಿಗೆ ಗ್ರಾಮದ ಪರಿಚಯವೇ ಇಲ್ಲ, ಅಭಿವೃದ್ಧಿಯು ಅಧಿಕಾರಿಗಳಿಗೆ ಹೊರತು ಗ್ರಾಮಕ್ಕಲ್ಲ.??

ರಸ್ತೆ ಇಲ್ಲದೆ ಗ್ರಾಮಸ್ಥರ ಪರದಾಟ.

ತಾಲ್ಲೂಕಿನಲ್ಲಿ ಗ್ರಾಮೀಣ ರಸ್ತೆಗಳು ಇಂದಿಗೂ ಸಮಸ್ಯೆಯಾಗಿಯೇ ಉಳಿದಿವೆ. ಸರಕಾರದಿಂದ ಪ್ರತಿ ವರ್ಷ ಹಣ ಮಂಜೂರಾಗುತ್ತಲೇ ಇದ್ದರೂ ಹಳ್ಳಿ ರಸ್ತೆಯ ಸಮಸ್ಯೆಗೆ ಪರಿಹಾರ ಇಲ್ಲದಾಗಿದೆ. ಇದೀಗ ಮಳೆಯಿಂದ ಇನ್ನಷ್ಟು ರಸ್ತೆಗಳು ಹೊಂಡ, ಗುಂಡಿಗಳಿಂದ ತುಂಬಿವೆ.
ರಸ್ತೆಗೆ ಮಣ್ಣು ಹೊರತುಪಡಿಸಿ ಬೇರೆ ಯಾವ ಭಾಗ್ಯವೂ ಸಿಕ್ಕಿಲ್ಲ. ಗ್ರಾಮದಲ್ಲಿ ಮನೆಗಳ ಸಂಖ್ಯೆ ಏರಿಕೆ ಕಂಡಿವೆಯೇ ವಿನಃ ಅದಕ್ಕೆ ಹೊಂದಿಕೊಂಡು ರಸ್ತೆ ನಿರ್ಮಾಣ ಆಗಿಲ್ಲ. ಗ್ರಾಮದ ಸುತ್ತ ಮುತ್ತಲ್ಲೂ ಕೃಷಿ ಅವಲಂಭಿತ ಪ್ರದೇಶ ಇದ್ದರೂ ರಸ್ತೆ ಮಾರ್ಗವು ಇಲ್ಲ.
ಈ ಭಾಗದ ರಾಜಕೀಯ ಮುಖಂಡರ ಕರೆಗೆ ಓಗೊಟ್ಟು ರಸ್ತೆ ನಿರ್ಮಿಸಲಾಗಿದ್ದರೂ ಅದರ ಗುಣಮಟ್ಟದ ಬಗ್ಗೆ ಯಾರೂ ತಲೆ ಕೆಡಿಸಿಕೊಂಡ ಹಾಗೆ ಕಾಣಿಸುತ್ತಿಲ್ಲ. ಬಿದ್ದ ಮಳೆಯಲ್ಲಿಯೇ ಕೆಲವು ರಸ್ತೆಗಳು ಬಣ್ಣ ಬದಲಿಸಿಕೊಂಡು ಮಂಕಾಗಿ ಹೋಗಿವೆ. ಕೆಲವು ಕಡೆ ಜಲ್ಲಿಕಲ್ಲುಗಳು ಬಂಡೆ ಎದ್ದು ಮೇಲೆ ಬಂದಿದ್ದು, ನಡೆದಾಡಲೂ ಸಾಧ್ಯವಾಗದಂತಹ ಪರಿಸ್ಥಿತಿ
ಇದೆ.

ಗ್ರಾಮಸ್ಥರ ಅಸಮಾಧಾನ ಮತ್ತು ಬೇಡಿಕೆ :

ಮಳೆ ಬಂದಾಗ ಮಣ್ಣು ರಸ್ತೆಯಲ್ಲಿ ,ಮಳೆಯ ನೀರು ರಸ್ತೆಯಲ್ಲೇ ಹರಿಯುತ್ತದೆ ಚರಂಡಿಯು ಇಲ್ಲ. ಕೊರಟಗೆರೆಗೆ ಸಂಪರ್ಕಿಸುವ ರಸ್ತೆಯನ್ನು ಅಭಿವೃದ್ಧಿ ಮಾಡಿಕೊಡಬೇಕಾಗಿ ನಮ್ಮ ಶಾಸಕರಲ್ಲಿ ಕೇಳಿಕೊಳ್ಳುತ್ತೇನೆ ನಮ್ಮ ಶಾಸಕರು ಅಭಿವೃದ್ಧಿಯಲ್ಲಿ ಮುಂದೆ ಇದ್ದರೂ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ನಮ್ಮ ಗ್ರಾಮ ಬಲಿಯಾಗಿದೆ ಎಂದು ಗ್ರಾಮದ ಗ್ರಾಮಸ್ತೆ ಮಹಾಲಕ್ಷ್ಮಿ ರಸ್ತೆಯ ಸ್ಥಿತಿಯನ್ನು ತೋರಿಸಿದರು.

ವರದಿ ಪ್ರಸನ್ನ ಕುಮಾರ್. ಎಸ್. ಕೊರಟಗೆರೆ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!