ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಮೈಸೂರು ದಸರಾ ಚಿಗುರು ಕವಿಗೋಷ್ಟಿಗೆ ಅತಿ ಕಿರಿಯ ವಯಸ್ಸಿನ ಬಾಲಕ ತಾನೀಶ್.ಎನ್ ವಿಶೇಷ ಅತಿಥಿಯಾಗಿ ಆಯ್ಕೆ

ಕೋಲಾರ: ವಿಶ್ವವಿಖ್ಯಾತಿ ಪಡೆದಿರುವ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಚಿಗುರು ಕವಿಗೋಷ್ಟಿಗೆ ಮಿನುಗುತಾರೆ ಪುಸ್ತಕದ ಲೇಖಕ, ಅತಿ ಕಿರಿಯ ವಯಸ್ಸಿನ ಬಾಲಕವಿ, ಹೊಯ್ಸಳ ಪ್ರಶಸ್ತಿ ಪುರಸ್ಕೃತ ಸಾಧಕ ತಾನೀಶ್.ಎನ್‌ ಆಯ್ಕೆಯಾಗಿದ್ದಾರೆ.

ಕೋಲಾರ ಜಿಲ್ಲೆ ಮಾಲೂರು ತಾಲ್ಲೂಕು ಲಕ್ಕೂರು ಗ್ರಾಮದ ಯುವಕವಿ, ವಿಶ್ವಮಾನವ ಕುವೆಂಪು ಫೌಂಡೇಶನ್ ರಾಜ್ಯ ಅಧ್ಯಕ್ಷರಾದ ಲಕ್ಕೂರು ಎಂ.ನಾಗರಾಜ್ ಹಾಗೂ ಶ್ವೇತಾಂಜಲಿ ಭರತನಾಟ್ಯ ಶಾಲೆ ಸಂಸ್ಥಾಪಕ ಅಧ್ಯಕ್ಷರಾದ ಶ್ರೀಮತಿ ಶ್ವೇತನಾಗರಾಜ್ ದಂಪತಿಯ ಎಂಟು ವರ್ಷದ ಬಾಲಕ, ಕ್ರೈಸ್ಟ್ ಇಂಟರ್ ನ್ಯಾಷನಲ್ ಶಾಲೆಯ ಮೂರನೇ ತರಗತಿ ವಿದ್ಯಾರ್ಥಿ, ಲಕ್ಕೂರು ಗ್ರಾಮದ ತಾನೀಶ್.ಎನ್ ಇಂದು ವಿಶ್ವವಿಖ್ಯಾತಿಯ ಮೂಲಕ ಹೆಸರು ಗಳಿಸಿದ್ದಾನೆ.

ಮೈಸೂರು ದಸರಾ-2026 ರ ಸಾಂಸ್ಕೃತಿಕ ಆಚರಣೆಗಳಿಗೆ ಸಾಹಿತ್ಯಿಕ ಆಯಾಮವನ್ನು ನೀಡುವ ನಿಟ್ಟಿನಲ್ಲಿ ದಸರಾ ಚಿಗುರು ಕವಿಗೋಷ್ಠಿಯು ಅಕ್ಟೋಬರ್ 15 ರ ಗುರುವಾರ ಸಾಂಸ್ಕೃತಿಕ ನಗರಿ ಮೈಸೂರು ವಿಶ್ವವಿದ್ಯಾಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ, ಮಾನಸಗಂಗೋತ್ರಿ ಆವರಣದಲ್ಲಿರುವ ಬಿ ಎಂ ಶ್ರೀ ಸಭಾಂಗಣದಲ್ಲಿ ನಡೆಯಲಿದೆ. ಈ ಒಂದು ಪ್ರಧಾನ ಚಿಗುರು ಕವಿಗೋಷ್ಟಿಯಲ್ಲಿ ತಾನೀಶ್ .ಎನ್ ವಿಶೇಷ ಅತಿಥಿಯಾಗಿ ವೇದಿಕೆಯ ಮೇಲೆ ಉಪಸ್ಥಿತಿ ಇರಲಿದ್ದಾನೆ‌. ಈ ಕಾರ್ಯಕ್ರಮದ ಉದ್ಘಾಟನೆಯನ್ನು ರಾಜ್ಯದ ಪ್ರಖ್ಯಾತ ಮಕ್ಕಳ ಸಾಹಿತಿ ಪ್ರೊ.ಬಿಳಿಗೆರೆ ಕೃಷ್ಣಮೂರ್ತಿ, ಹಿರಿಯ ಸಾಹಿತಿ ಆಗ್ರಹಾರ ಕೃಷ್ಣಮೂರ್ತಿ, ಮುಖ್ಯ ಅತಿಥಿಯಾಗಿ ಲೇಖಕಿ ಕವಿತಾ ಕುಸುಗಲ್ ವೇದಿಕೆಯ ಮೇಲೆ ಇರಲಿದ್ದಾರೆ.

ಈ ಒಂದು ಚಿಗುರು ಕವಿಗೋಷ್ಟಿಗೆ ವಿಶೇಷ ಅತಿಥಿಯಾಗಿ ಆಯ್ಕೆಯಾಗಿರುವ ಬಾಲಕ ತಾನೀಶ್.ಎನ್ ಮೈಸೂರು ದಸರಾ ಇತಿಹಾಸದಲ್ಲಿಯೇ ಅತಿ ಚಿಕ್ಕವಯಸ್ಸಿನಲ್ಲಿ ಆಯ್ಕೆಯಾಗಿರುವುದು ಗಮನಾರ್ಹ ವಿಷಯವಾಗಿದೆ. ತಾನೀಶ್‌.ಎನ್ ಈಗಾಗಲೇ ಸಾಹಿತ್ಯ ಕ್ಷೇತ್ರದಲ್ಲಿ ಮಿನುಗುತಾರೆ ಚುಟುಕು ಕವನ ಸಂಕಲನದ ಮೂಲಕ ರಾಜ್ಯದಲ್ಲಿ ಸಂಚಲನ ಮೂಢಿಸಿರುವುದು ಚಿಕ್ಕ ವಯಸ್ಸಿನಲ್ಲಿ ಚರಿತ್ರೆಯಾಗಿದೆ. ಸಾಹಿತ್ಯ, ಸಂಗೀತ, ಭರತನಾಟ್ಯ, ಶೈಕ್ಷಣಿಕ ವಿದ್ಯಾಭ್ಯಾಸ ಹಾಗೂ ಇತರೆ ಎಲ್ಲಾ ಕ್ಷೇತ್ರಗಳಲ್ಲಿಯೂ ಅದ್ಬುತ ಸಾಧನೆ ಮೂಲಕ‌ ರಾಜ್ಯದ ಜನಮನ್ನಣೆ ಪಡೆದಿದ್ದಾನೆ.

ದಸರಾ ಕವಿಗೋಷ್ಠಿ ಉಪ ಸಮಿತಿಯ ಉಪ ವಿಶೇಷ ಅಧಿಕಾರಿ ಮತ್ತು ಎಂಸಿಸಿ ಉಪ ಆಯುಕ್ತ ಎಂ. ದಾಸೇಗೌಡ, ದಸರಾ ಕವಿಗೋಷ್ಠಿ ಕಾರ್ಯಾಧ್ಯಕ್ಷ ಎಂ.ನಂಜಯ್ಯ ಹೊಂಗನೂರು, ತ್ರಿವೇಣಿ, ಉಮೇಶ್ ರವರು ತಾನೀಶ್.ಎನ್ ಸಾಧನೆ ಪರಿಗಣಿಸಿ ಅವನನ್ನು ಆಯ್ಕೆ ಮಾಡಿರುವುದು ನಮ್ಮ ಕೋಲಾರ ಜಿಲ್ಲೆಯ ಹೆಮ್ಮೆ.

ಈ ಒಂದು ಮಹತ್ತರ ಆಯ್ಕೆಗೆ ಕ್ರೈಸ್ಟ್ ಇಂಟರ್ ನ್ಯಾಷನಲ್‌‌ ಶಾಲೆಯ ಪ್ರಾಂಶುಪಾಲರಾದ ಫಾದರ್ ವಿಕಾಸ್ ಮಿಚೆಲ್, ತರಗತಿ ಶಿಕ್ಷಕರಾದ ಶ್ರೀಮತಿ ಅರುಣಾ, ಕೋಲಾರ ಜಿಲ್ಲೆ ಹಾಗೂ ಮಾಲೂರು ತಾಲ್ಲೂಕಿನ ಸಾಹಿತ್ಯ ಅಭಿಮಾನಿಗಳು, ತಾನೀಶ್.ಎನ್ ಅಭಿಮಾನಿ‌ ವೃಂದ ಶುಭಾಶಯ ಅರ್ಪಿಸಿದ್ದಾರೆ.

ವರದಿ: ಕೊಡಕ್ಕಲ್ ಶಿವಪ್ರಸಾದ್, ಶಿವಮೊಗ್ಗ/ಮೈಸೂರು

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!