ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕು ವರ್ತಕರ ಸಹಕಾರ ಸಂಘದ ವತಿಯಿಂದ ಈ ವರ್ಷದ 12ನೇ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಭಾವಸಾರ ಭವನ ಕಲ್ಯಾಣ ಮಂಟಪದಲ್ಲಿ ನಡೆಯಿತು. ನಿರೂಪಣೆಯನ್ನು ಪಲ್ಲವಿ ಅವರು ನೆರವೇರಿಸಿದರು. ಮೊದಲನೆಯದಾಗಿ ಶಾಲೋಕ್, ಆನಂದ್, ಗೌರಿ ಪ್ರಾರ್ಥಿಸಿದರು.
ಸಮಾರಂಭವನ್ನು ಎಲ್ಲಾ ನಿರ್ದೇಶಕರು ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು. ಗೋವಿಂದರಾಜು ಅವರು ಅಧ್ಯಕ್ಷತೆಯನ್ನು ವಹಿಸಿದ್ದರು.
ಅಧ್ಯಕ್ಷೀಯ ಭಾಷಣವನ್ನು ಮಾಡಿದ ಇವರು ಸಮಾರಂಭವನ್ನು ಉದ್ದೇಶಿಸಿ ಸಂಘವು 12 ವರ್ಷಗಳಿಂದ ತನ್ನ ಕಾರ್ಯಗಳನ್ನು ಅಚ್ಚುಕಟ್ಟಾಗಿ ನಡೆಸಿಕೊಂಡು ಬರುತ್ತಿದೆ ,ಆಡಳಿತ ಮಂಡಳಿಯ ನಿರ್ದೇಶಕರಿಗೂ ,ಎಲ್ಲಾ ಸದಸ್ಯರಿಗೂ ನನ್ನ ಹೃದಯಪೂರ್ವಕ ವಂದನೆಗಳು.
ಸಂಘವು 7,77,145 ಗಳಷ್ಟು ಲಾಭವನ್ನು ಗಳಿಸಿದೆ ಎಂದರು.
ಸಂಘದ ಕಾರ್ಯಚಟುವಟಿಕೆಗಳ ಅಭಿವೃದ್ಧಿ ಆಡಳಿತ ನಿರ್ವಹಣೆಯ ಬಗ್ಗೆ ಕಾಲಕಾಲಕ್ಕೆ ಸೂಕ್ತ ಸಲಹೆ ಮಾರ್ಗದರ್ಶನ ನೀಡುತ್ತಿರುವ ಎಲ್ಲರಿಗೂ ಕೃತಜ್ಞತೆಯನ್ನು ಸಲ್ಲಿಸುತ್ತೇನೆ ಎಂದರು.
ನಂಜನಗೂಡಿನ ನಂಜುಂಡೇಶ್ವರನು ಸನ್ಮಂಗಳವನ್ನು ಉಂಟು ಮಾಡಲಿ ಎಂದರು. ಪ್ರತಿವರ್ಷದಂತೆ ಎಲ್ಲಾ ಸದಸ್ಯರು ನಿರ್ದೇಶಕರು ಸಂಘದ ಅಭಿವೃದ್ಧಿಗಾಗಿ ಸಹಕರಿಸಬೇಕೆಂದರು.
ಸಂಘದ ಸದಸ್ಯರ ಮಕ್ಕಳಿಗೆ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದವರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಪ್ರಾರ್ಥನೆ ಮಾಡಿದ ಮುದ್ದು ಬಾಲಕನನ್ನು ಗೌರವಿಸಲಾಯಿತು.
ಸಮಾರಂಭದಲ್ಲಿ ಉಪಾಧ್ಯಕ್ಷರಾದ ವೆಂಕಟೇಶ್ ಎಲ್ಲಾ ನಿರ್ದೇಶಕರು ಸರ್ವ ಸದಸ್ಯರು ಹಾಜರಿದ್ದರು.




















