ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಹಕ್ಕು ಪತ್ರ ಸಿಕ್ಕರೂ, ನಿವೇಶನ ಸಿಕ್ಕಿರುವುದಿಲ್ಲ ಶೀಘ್ರವೇ ಕ್ರಮಕ್ಕೆ ಬಿ.ಎಸ್.ಪಿ. ತಾಲೂಕಾ ಅಧ್ಯಕ್ಷ ಶಂಕರ ಫುಲೆ ಆಗ್ರಹ

ಬೀದರ್ ಜಿಲ್ಲೆ ಬಸವಕಲ್ಯಾಣ ತಾಲೂಕಿನ ಕಿಟ್ಟಾ ಗ್ರಾಮದ ಸರ್ವೆ ನಂ. 249ರಲ್ಲಿ ಸುಮಾರು 20 ಬಡ ಕುಟುಂಬಗಳಿಗೆ ನಿವೇಶನಕ್ಕಾಗಿ ಹಕ್ಕುಪತ್ರಗಳನ್ನು ನೀಡಲಾಗಿದ್ದು, ಹಲವು ವರ್ಷಗಳು ಕಳೆದರೂ ಫಲಾನುಭವಿಗಳ ಸಮಸ್ಯೆಗಳಿಗೆ ಸೂಕ್ತ ಪರಿಹಾರ ದೊರೆತಿಲ್ಲ ಎಂದು ಬಹುಜನ ಸಮಾಜ ಪಕ್ಷದ ತಾಲೂಕ ಅಧ್ಯಕ್ಷರಾದ ಶಂಕರ ಫುಲೆ ಅವರು ತಿಳಿಸಿದ್ದಾರೆ.
ಫಲಾನುಭವಿಗಳು ಹಕ್ಕುಪತ್ರಗಳನ್ನು ಪಡೆದು ಹಲವು ವರ್ಷಗಳು ಕಳೆದಿದ್ದರೂ, ನಿವೇಶನದ ಹಕ್ಕು ಹಾಗೂ ಅಗತ್ಯ ಸೌಲಭ್ಯಗಳ ಕುರಿತು ಸಮಸ್ಯೆಗಳು ಮುಂದುವರಿದಿವೆ ಎಂದು ಸಾರ್ವಜನಿಕರು ದೂರಿದ್ದಾರೆ.
ಈ ಸಂಬಂಧ ಫಲಾನುಭವಿಗಳು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ತಹಸೀಲ್ದಾರರ ಕಚೇರಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ, ಸಮಸ್ಯೆಗೆ ಪರಿಹಾರ ದೊರೆತಿಲ್ಲ ಎಂದು ತಿಳಿದುಬಂದಿದೆ.
ಈ ಸಂಧರ್ಭದಲ್ಲಿ ತಾಲೂಕ ಸಂಯೋಜಕ ದತ್ತು ಸುಠಾಣೆ, ಸಂಯೋಜಕ ಮಕ್ಬುಲ ಸಾಬ, ತಾಲೂಕ ಉಪಾಧ್ಯಕ್ಷ ರಮೇಶ ರಾಠೋಡ, ತಾಲೂಕ ಉಪಾಧ್ಯಕ್ಷ ಸಚಿನ ಕಾಂಬಳೆ, ತಾಲೂಕ ಪ್ರಧಾನ ಕಾರ್ಯದರ್ಶಿ ರವಿ ಉದಾತೆ, ತಾಲೂಕ ಕಾರ್ಯದರ್ಶಿ ಮಹಾದೇವ ಗಾಯಕವಾಡ, ನಗರ ಘಟಕ ಸಂಯೋಜಕ ಮಸ್ತಾನ ಸಾಬ, ಗ್ರಾಮ ಘಟಕ ಅಧ್ಯಕ್ಷ ರಾಹುಲ ವಾಗಮಾರೆ, ಹರಕೂಡ ಗ್ರಾಮ ಘಟಕ ಉಪಾಧ್ಯಕ್ಷ ಪ್ರಶಾಂತ ಗುಡ್ಡೆ, ಹಂದ್ರಾಳ (ಆರ್.) ಗ್ರಾಮ ಘಟಕ ಅಧ್ಯಕ್ಷ ಮಾರುತಿ ಮೇಕಲೆ, ಜ್ಞಾನೇಶ್ವರ್ ಖಲ್ಲಾಳೆ ವಕೀಲರು ,ಮಾಜಿ ಗ್ರಾಮ ಪಂಚಾಯತ ಅಧ್ಯಕ್ಷ ಜಾವೀದ ಲದ್ದಾಫ್, ಮಾಜಿ ಗ್ರಾಮ ಪಂಚಾಯತ ಸದಸ್ಯ ರಮೇಶ ಮಂಠಾಳಕರ ಹಾಗೂ ಮಹಿಳೆಯರು ಮುಖಂಡರು ಉಪಸ್ಥಿತರಿದ್ದರು.

ವರದಿ : ಶ್ರೀನಿವಾಸ ಬಿರಾದಾರ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!