ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಬಿಸಿಲು ನಾಡಿನ ಮಲೆನಾಡು ಸಂಡೂರಿನಲ್ಲಿ ಚಾರಣ

ಕೊಪ್ಪಳ : ಸಂಡೂರು ಕರ್ನಾಟಕದ ಬಳ್ಳಾರಿ ಜಿಲ್ಲೆಯ ಒಂದು ಪ್ರಮುಖ ನಿಸರ್ಗ ಮತ್ತು ಐತಿಹಾಸಿಕ ಪಟ್ಟಣವಾಗಿದೆ. ಸುತ್ತಲೂ ಹಸಿರು ಬೆಟ್ಟಗಳು ಮತ್ತು ಕಣಿವೆಗಳಿಂದ ಆವೃತವಾಗಿರುವ ಈ ಪ್ರದೇಶವನ್ನು “ಬಿಸಿಲು ಸೀಮೆಯ ಮಲೆನಾಡು” ಎಂದೇ ಕರೆಯಲಾಗುತ್ತದೆ.
ಸಂಡೂರು ಕುರಿತು ಕೆಲವು ಪ್ರಮುಖ ಮಾಹಿತಿವೆಂದರೆ . ಇತಿಹಾಸ ಹಿನ್ನೆಲೆಯನ್ನು ನೋಡಿದಾಗ ಸ್ವಾತಂತ್ರ್ಯ ಪೂರ್ವದಲ್ಲಿ ಸಂಡೂರು ಮರಾಠರ ಘೋರ್ಪಡೆ ರಾಜಮನೆತನದ ಆಡಳಿತಕ್ಕೆ ಒಳಪಟ್ಟಿದ್ದ ಒಂದು ಸಂಸ್ಥಾನವಾಗಿತ್ತು.

ಭೂ ಹೋರಾಟ: 1973ರಲ್ಲಿ ಇಲ್ಲಿ ನಡೆದ 13 ಸಾವಿರ ಎಕರೆ ಭೂಮಿಗಾಗಿ ನಡೆದ ರೈತ ಹೋರಾಟ.
ಈ ಹೋರಾಟದಲ್ಲಿ ಜಾರ್ಜ್ ಫರ್ನಾಂಡೀಸ್ ಭಾಗಿಯಾಗಿದ್ದಾರೆ.
ಸಂಡೂರಿನಲ್ಲಿ ಭೌಗೋಳಿಕತೆ ಮತ್ತು ನೈಸರ್ಗಿಕ ಸಂಪತ್ತು ಖನಿಜ ಸಂಪತ್ತು ಹೇರಳವಾಗಿದೆ. ಸಂಡೂರು ಕಬ್ಬಿಣ ಮತ್ತು ಮ್ಯಾಂಗನೀಸ್ ಅದಿರು ನಿಕ್ಷೇಪಗಳಿಗೆ ಹೆಸರುವಾಸಿಯಾಗಿದೆ.
ಸಂಡೂರು ನಿಸರ್ಗ ಸೌಂದರ್ಯವು ಮಳೆಗಾಲದ ಸಮಯದಲ್ಲಿ ವಿಶೇಷವಾಗಿ ಸೆಪ್ಟೆಂಬರ್ ತಿಂಗಳಲ್ಲಿ ಇಲ್ಲಿನ ಬೆಟ್ಟಗಳು ಹಸಿರು ಹೊದ್ದು ಕಂಗೊಳಿಸುತ್ತವೆ.
1934ರಲ್ಲಿ ಸಂಡೂರಿಗೆ ಭೇಟಿ ನೀಡಿದ್ದ ಮಹಾತ್ಮಾ ಗಾಂಧೀಜಿಯವರು ಇಲ್ಲಿನ ಸೌಂದರ್ಯಕ್ಕೆ ಮನಸೋತು “ಸೀ ಸಂಡೂರು ಇನ್ ಸೆಪ್ಟೆಂಬರ್” (ಸೆಪ್ಟೆಂಬರ್‌ನಲ್ಲಿ ಸಂಡೂರನ್ನು ನೋಡಿ) ಎಂದು ಉದ್ಘರಿಸಿದ್ದರು.
ಇಲ್ಲಿನ ಮಾನಸ ಸರೋವರವು ಪ್ರಕೃತಿ ಪ್ರಿಯರನ್ನು ಸೆಳೆಯುತ್ತದೆ..
ಇಲ್ಲಿ ಪ್ರಮುಖ ಪ್ರವಾಸಿ ಮತ್ತು ಧಾರ್ಮಿಕ ಸ್ಥಳಗಳು ಇವೆ. ಇಲ್ಲಿ ಕುಮಾರಸ್ವಾಮಿ ದೇವಸ್ಥಾನ ಇದೆ. ಈ ದೇವಸ್ಥಾನವು ಸುಮಾರು 1200 ವರ್ಷಗಳ ಭವ್ಯ ಇತಿಹಾಸವನ್ನು ಹೊಂದಿದೆ.
ಈ ಬೆಟ್ಟಗಳು ಸಮುದ್ರ ಮಟ್ಟದಿಂದ 3256 ಅಡಿ ಎತ್ತರದಲ್ಲಿದ್ದು, ಇಲ್ಲಿ ಕುಮಾರ ರಾಮ ನಿರ್ಮಿಸಿದ ಕೋಟೆಯ ಅವಶೇಷಗಳು ಹಾಗೂ ರಾಮದೇವ ದೇವಸ್ಥಾನವೂ ಇದೆ. ಇಲ್ಲಿ ಉನ್ನತ ಶಿಕ್ಷಣಕ್ಕಾಗಿ ಸ್ನಾತಕೋತ್ತರ ಕೇಂದ್ರ ಇದೆ. ಇಂತಹ ಅದ್ಭುತವಾದ ಸ್ಥಳಕ್ಕೆ ಕೊಪ್ಪಳ- ಭಾಗ್ಯನಗರ ಅಡವಿ ಆಂಜಿನೇಯ ದೇವಸ್ಥಾನ ಹತ್ತಿರ ಆಂಜನೇಯ ಬಡಾವಣೆಯ ವಾಕಿಂಗ್ ಗೆಳೆಯರ ಬಳಗದಿಂದ ಸಂಡೂರಿಗೆ ಭಾನುವಾರದಂದು ಚಾರಣವನ್ನು ಹಮ್ಮಿಕೊಳ್ಳಗಿತ್ತು.
ಈ ಚಾರಣದಲ್ಲಿ ವಾಕಿಂಗ್ ಗೆಳೆಯರ ಬಳಗದ ಗೋಣೆಪ್ಪ ವಾಣಿ, ಸಂತೋಷ ದರ್ನ, ಶಿವಾನಂದ, ಯಮುನ ನಾಯಕ, ವಿದ್ಯಾಧರ, ಯೋಗೇಂದ್ರನಾಥ ಅಲವಂಡಿ ಹಾಗೂ ನರಸಿಂಹ ಪಾಲ್ಗೊಂಡಿದ್ದರು.
ಇಂತಹ ಉತ್ತಮವಾದ ಪರಿಸರ ಹೊಂದಿರುವ ಸ್ಥಳಕ್ಕೆ ನೀವು ಒಮ್ಮೆ ಭೇಟಿ ನೀಡಿ.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!