ಕಾರಟಗಿ :ತಾಲೂಕಿನ ಗುಂಡೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಿಂಗನಾಳ ಗ್ರಾಮದ ಒಂದನೇ ವಾರ್ಡಿನ ಜನರು ಕತ್ತಲಲ್ಲಿ ಪರದಾಡುವಂತಾಗಿದೆ ಎಂದು ನಿಂಗನಗೌಡ ಪೊಲೀಸ್ ಪಾಟೀಲ್, ಯಮನೂರ ಮಡಿವಾಳ, ಬೇಸರ ವ್ಯಕ್ತಪಡಿಸಿದ್ದಾರೆ.
ಗ್ರಾಮದ ಒಂದನೇ ವಾರ್ಡಿನ ದ್ಯಾಮಮ್ಮನಗುಡಿ ಹತ್ತಿರ ಸುಮಾರು ಐದು ತಿಂಗಳಗಳಿಂದ ವಿದ್ಯುತ್ ಬಲ್ಪ್ ಇಲ್ಲದೆ ಸಾರ್ವಜನಿಕರು ಕತ್ತಲಲ್ಲಿ ಓಡಾಡುತ್ತಿದ್ದಾರೆ, ಗ್ರಾಮ ಪಂಚಾಯತಿಯ ಅಧಿಕಾರಿಗಳಿಗೂ ತಿಳಿಸಿದರೂ ನಿರ್ಲಕ್ಷ್ಯ ತೋರಿದ್ದಾರೆ, ಬಿಸಿಲಿನ ತಾಪಮಾನ ಹೆಚ್ಚಾಗಿದ್ದು, ಹಾವು ಚೇಳು ರಾತ್ರಿ ವೇಳೆ ಹೆಚ್ಚಾಗಿ ಬರುತ್ತಿದ್ದು, ಸಾರ್ವಜನಿಕರಿಗೆ ರಾತ್ರಿ ವೇಳೆ ಓಡಾಡಲು ತೊಂದರೆಯಾಗಿದೆ. ಸಿಂಗನಾಳ ಗ್ರಾಮದ ಒಂದನೇ ವಾರ್ಡಿನ ಸಾರ್ವಜನಿಕರು ಗ್ರಾಮ ಪಂಚಾಯಿತಿ ಅಧಿಕಾರಿಗಳ ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿಸಿದರು.




















