ಶಾಲೆ ಪ್ರಾರಂಭ ಬಾರವ್ವ
ಗುರುಗಳು ಬಂದಾರ ನೋಡುವ್ವ
ಗಂಟೆ ಬಾರಿಸಿತು ಕೇಳುವ್ವ
ತರಗತಿ ಕರೆಯುತಿದೆ ನೋಡವ್ವ
ದಸರಾ ರಜೆ ಹಬ್ಬದಾಗವ್ವ
ಕಳೆಯಿತು ಮಜದಾಗ ನೋಡುವ್ವ
ಅಕ್ಷರಗಳ ಮರೆಯದೆ ನೀನವ್ವ
ಗುರುಗಳ ಮುಂದೆ ಒಪ್ಪಿಸವ್ವ
ಹೊಸ ಪುಸ್ತಕ ಕೊಡುತಾರವ್ವ
ಪಾಠಗಳ ನೀತಿ ತಿಳಿಬೇಕವ್ವ
ದ್ವಿಭಾಷೆ ಕಲಿಕೆ ಸೊಗಸವ್ವ
ತಪ್ಪದೆ ಶಾಲೆಗೆ ಬಾರವ್ವ
ಬರೆದದ್ದು ಓದಿದ್ದು ತೋರಿಸವ್ವ
ಮಗ್ಗಿಯ ಲೆಕ್ಕವ ಒಪ್ಪಿಸವ್ವ
ಜಾಣೆ ನೀನು ಕಲಿಯಾಕವ್ವ
ತಪ್ಪದೆ ಶಾಲೆಗೆ ಬಾರವ್ವ
ಗದ್ಯ ಪದ್ಯ ಚಂದವ್ವ
ರಾಗದಿ ಹಾಡಿಸುತಾರ ಕೇಳಬೇಕವ್ವ
ವಿಜ್ಞಾನ ಸಮಾಜ ರುಚಿಕಟ್ಟವ್ವ
ತಪ್ಪದೆ ಶಾಲೆಗೆ ಬಾರವ್ವ
✍️ ಕಲ್ಲಪ್ಪ ಕವಳಕೇರಿ, ಮಂಗಳೂರು
ಕೊಪ್ಪಳ ಜಿಲ್ಲೆ.




















