ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಬದಲಾವಣೆಗಾಗಿ

ದುಡಿಯಬೇಕು ದೇಶದ ಬದಲಾವಣೆಗಾಗಿ
ದಂಗೆಗಳು ಒಳಿತಲ್ಲ ದೇಶಕ್ಕಾಗಿ
ಕಾನೂನು ನ್ಯಾಯದೇವತೆ ತಿದ್ದುವುದಕ್ಕಾಗಿ
ಮತವೊಂದೇ ಸಾಕು ಬಯಸಿದ ಆಡಳಿತಕ್ಕಾಗಿ

ಸೋಮಾರಿಗಳನು ಎಚ್ಚರಿಸಿ ದುಡಿಮೆಗಾಗಿ
ದುಡಿಯದವರನು ಖಂಡಿಸಿ ಕಾರ್ಯಕ್ಷಮತೆಗಾಗಿ
ಬೆವರು ಸುರಿಸುವವರಿಗೆ ಬೆಂಬಲವಾಗಿ
ಕಂಕಣ ಬದ್ಧರಾಗಬೇಕು ಪರಿವರ್ತನೆಗಾಗಿ

ದುಡ್ಡು ವ್ಯಯಿಸದೆ ಅಜ್ಞಾನಿಗಳಾಗಿ
ಬಳಸಬೇಕು ಎಚ್ಚರದಿಂದ ಸಮರ್ಪಕವಾಗಿ
ನಿಲ್ಲದೆ ಸೋಮಾರಿಗಳ ಪರವಾಗಿ
ಶ್ರಮಿಕರನ್ನೇ ಬೆಳೆಸಬೇಕು ಅಭಿವೃದ್ಧಿಗಾಗಿ

ಅನ್ನ ಹಾಲಿನ ಉತ್ಪಾದನೆಗಾಗಿ
ಹಗಲಿರುಳು ಬೆವರಿಳಿಸಿ ಹಸಿರಿಗಾಗಿ
ಜೀವದಾನ ಮಾಡುವ ರೈತರಿಗಾಗಿ
ನಿಲ್ಲಬೇಕು ನಷ್ಟಭರಿಸಲು ಸಿದ್ಧರಾಗಿ

ಹಚ್ಚಿದ ಬೆಂಕಿಯ ಹಿಂಸೆಯಿಂದಾಗಿ
ಸುಡುವುದು ಆರ್ಥಿಕತೆ ಭಸ್ಮವಾಗಿ
ದುಡಿಮೆಯೊಂದೇ ಅಸ್ತ್ರ ಬದಲಾವಣೆಗಾಗಿ
ದುಡಿಯಲೇಬೇಕು ಸರ್ವರೂ ದೇಶದೇಳ್ಗೆಗಾಗಿ

  • ಕಲ್ಲಪ್ಪ ಕವಳಕೇರಿ, ಮಂಗಳೂರು
    (ಕೊಪ್ಪಳ ಜಿಲ್ಲೆ )
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!