ಕಾರಟಗಿ: ಎಫ್‌ಪಿಒಗಳ ಮೂಲಕ ರೈತರು ಆರ್ಥಿಕವಾಗಿ ಸದೃಢರಾಗಲು ಸಾಧ್ಯವಿದ್ದು, ರೈತ ಉತ್ಪಾದಕ ಕಂಪನಿಗಳು ಸರ್ಕಾರದ ನೆರವು ಪಡೆದುಕೊಂಡು ಆರ್ಥಿಕವಾಗಿ ಬಲಗೊಳ್ಳಬೇಕು ಎಂದು ಜಿಲ್ಲಾ ಪಂಚಾಯತ್ ಸಿಇಒ ಫೌಜಿಯಾ ತರುನಂ ಸಲಹೆ ನೀಡಿದರು.
ಕಾರಟಗಿ ತಾಲೂಕು ಬೂದಗುಂಪ ಗ್ರಾಮದಲ್ಲಿನ ಅಖಿಲ ಕರ್ನಾಟಕ ರಾಜ್ಯ ಅನ್ನದಾತ ರೈತ ಸಂಘದ ಪದಾಧಿಕಾರಿಗಳ ನೇತೃತ್ವದ ರೈತ ಜೀವ ಫಾರ್ಮರ್ ಪ್ರೋಡ್ಯೂಸರ್ ಕಂಪನಿಯ ಕಚೇರಿಗೆ ಶುಕ್ರವಾರ ಭೇಟಿ ನೀಡಿ, ರೈತರೊಂದಿಗೆ ಸಂವಾದ ನಡೆಸಿದರು.
ಈ ಭಾಗದ ರೈತರು ಕೇವಲ ಭತ್ತ ಬೆಳೆಯುವದನ್ನು ಬಿಟ್ಟು, ತೋಟಗಾರಿಗೆ ಬೆಳೆಗಳ ಕಡೆಯೂ ಹೆಚ್ಚು ಗಮನ ನೀಡಬೇಕಿದೆ. ಇತ್ತೀಚೆಗೆ ಭತ್ತ ಬೆಳೆಯಲು ಉತ್ಪಾದನಾ ವೆಚ್ಚ ಹೆಚ್ಚಾಗಿ, ಲಾಭದ ಪ್ರಮಾಣ ತೀರಾ ಕಡಿಮೆ ಆಗಿದೆ. ಈ ಕಾರಣಕ್ಕೆ ಭತ್ತ ಬೆಳೆಯುವ ಜೊತೆ ಜೊತೆಗೆ ಆರಂಭದಲ್ಲಿ ಅಲ್ಪ ಪ್ರಮಾಣದಲ್ಲಾದರೂ ತೋಟಗಾರಿಕೆ ಬೆಳೆ ಕಡೆಗೆ ಗಮನ ನೀಡಬೇಕು ಎಂದು ಸಲಹೆ ನೀಡಿದರು.
ಈ ಬಗ್ಗೆ ರೈತರಿಗೆ ಸೂಕ್ತ ಸಲಹೆ ಮತ್ತು ತರಬೇತಿ ಕೊಡಿಸುವ ನಿಟ್ಟಿನಲ್ಲಿ ಕೊಪ್ಪಳ ಜಿಲ್ಲಾಡಳಿತ ಸಿದ್ದವಿದೆ. ಕೊಪ್ಪಳ ಜಿಲ್ಲೆಯಲ್ಲಿನ ಎಲ್ಲ ಎಫ್‌ಪಿಒಗಳ ರೈತರು ಮತ್ತು ಇತರೇ ರೈತರನ್ನು ಒಳಗೊಂಡು ಪ್ರತಿ ತಿಂಗಳಿಗೆ ಕನಿಷ್ಠ ಒಂದು ತರಬೇತಿ ಕಾರ್ಯಾಗಾರ ಆಯೋಜನೆ ಮಾಡುವ ಕೆಲಸವಾಗಬೇಕಿದೆ. ಈ ನಿಟ್ಟಿನಲ್ಲಿ ತೋಟಗಾರಿಕೆ ಮತ್ತು ಕೃಷಿ ಇಲಾಖೆ ಅಧಿಕಾರಿಗಳು ಕೆಲಸ ಮಾಡಬೇಕಿದೆ. ಇನ್ನು ರೈತ ಜೀವ ಎಫ್‌ಪಿಒ ನಿರ್ದೇಶಕರು ಮತ್ತು ರೈತರ ವಿವಿಧ ಬೇಡಿಕೆ ಈಡೇರಿಸುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತವಾಗುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ರೈತ ಜೀವ ಎಫ್‌ಪಿಒ ನಿರ್ದೇಶಕ ಶರಣಗೌಡ ಕೇಸರಹಟ್ಟಿ ಮಾತನಾಡಿ, ನಮ್ಮ ಕಂಪನಿಯಲ್ಲಿ ಕೃಷಿ, ತೋಟಗಾರಿಕೆ ಬೆಳೆ ಬೆಳೆಯುವ ರೈತರ ಜೊತೆಗೆ ಮೀನುಗಾರಿಕೆ ಮಾಡುವ ಕಾರ್ಮಿಕರೂ ಇದ್ದು, ಕೆಲ ಕೆರೆಗಳನ್ನ ನಮಗೆ ಬಿಟ್ಟು ಕೊಡಬೇಕು. ಸುಮಾರು ೧೮ ಜಿಲ್ಲೆಯಲ್ಲಿ ನಮ್ಮ ರೈತ ಸಂಘಟನೆ ಇದ್ದು, ಸಂಘಟನೆ ಸದಸ್ಯರೆಲ್ಲರೂ ಸೇರಿ ಎಫ್‌ಪಿಒ ರಚಿಸಿಕೊಡು ಆರ್ಥಿಕವಾಗಿ ಸಬಗೊಳ್ಳುವಂತೆ ತರಬೇತಿ ನೀಡುತ್ತಿದ್ದೇವೆ. ಎಲ್ಲ ಕಡೆಯೂ ನಮ್ಮ ಎಫ್‌ಪಿಒಗಳಿಗೆ ಸರ್ಕಾರಿ ಅಧಿಕಾರಿಗಳ ಸಲಹೆ ಸಹಕಾರ ಅಗತ್ಯ ಎಂದು ಮನವಿ ಮಾಡಿದರು.
ನಿರ್ದೇಶಕ ಶರಣಪ್ಪ ಕೆಂಡದ ಮಾತನಾಡಿ, ರೈತ ಜೀವ ಎಫ್‌ಪಿಒ ತನ್ನದೇ ಬ್ರಾö್ಯಂಡ್ ನಡಿ ಅಕ್ಕಿ ಮಾರಾಟಕ್ಕೆ ಯೋಜನೆ ರೂಪಿಸಿದ್ದು, ಕೊಪ್ಪಳ ಜಿಲ್ಲಾಡಳಿತದಿಂದ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುವ ಮೂಲಕ ರೈತರಿಗೆ ಅನುಕೂಲ ಮಾಡಬೇಕು ಎಂದು ಮನವಿ ಮಾಡಿದರು.
ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಕೃಷ್ಣ ಉಕ್ಕುಂದ, ಕೃಷಿ ಇಲಾಖೆ ಸಹಾಯ ನಿರ್ದೇಶಕ ಸಂತೋಷ ಬೆಟ್ಟದಕಲ್ಲು, ಕಾರಟಗಿ ತಾಪಂ ಎಡಿ ವನಜಾ, ತೋಟಗಾರಿಕೆ ಇಲಾಖೆ ಎಸ್‌ಎಡಿಎಚ್ ರತ್ನ ಪ್ರೀಯಾ, ಎಎಚ್‌ಒ ಜಗದ್ದೀಶ, ರೈತ ಜೀವ ಎಫ್‌ಪಿಒ ನಿರ್ದೇಶಕ ಯಂಕಣ್ಣ, ಸಿಫಿನ್ ಎಂಡಿ ಶಿವಕುಮಾರ ಎನ್. ಸೇರಿ ಇತರರು ಇದ್ದರು. ಕಂಪನಿ ಸಿಇಒ ಶರಣಬಸವ ಹುಲಿಹೈದರ ನಿರ್ವಹಿಸಿದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.