ಬಟ್ಟೆ ಇಲ್ಲದಿದ್ದರೂ ಚಿಂತೆ ಇಲ್ಲ
ಖಾಲಿ ಜೇಬಿನ ಸಂತೆಯಲ್ಲಿ
ಚಿಂತಿಸದೆ ಸುಮ್ಮನಿರುವುದೇ
ಹೂವಿನ ವಾಸನೆ ನಿಲ್ಲದಿರುವುದೇ//
ನೋಡಂದ ಗುರು ಬಸವ
ಬದುಕು ಒಂದು ಸಾಗರವ
ಜೀವಿಸುಬೇಕು ತಿಳಿದು ಮಾನವ
ನನ್ನದು ನಾನೆಂದು ಅಹಂಕಾರವ
ಮಾಡದೀರು ಮಹಾಪಾಪವ
ಪಾಪದ ಕಾಲ ಕಳಿಯದೆ
ಪುಣ್ಯದ ಕಾಲಿಗೆ ನೀನು ಚಿಂತಿಸಿದೆ
ಇಂದು ಅಂದು ಮುಂದೆ ತಿಳಿದು
ಬದುಕು ನೀನು ಈ ಮರ್ತ್ಯ ಲೋಕದಲ್ಲಿ//
ಎದ್ದು ಬಿದ್ದು ನಡೆಯುದಕ್ಕೆ ಬುದ್ಧಿ
ಅಹಂಕಾರ ಆಡಂಬರ ಪಡೆಯದೆ
ಸಂತೋಷ ಪಡೆಯುವುದಕ್ಕೆ ಜೀವಿಸುವುದು
ಕೆಳಗೆ ಬೀಳುವುದೇ ಚರಿತ್ರೆ ಬರೆಯಲು//
-ಮಹಾಂತೇಶ ಖೈನೂರ