ಯಾದಗಿರಿ ಜಿಲ್ಲೆಯ ಶಹಾಪುರ ನಗರದ ಚರಬಸವೇಶ್ವರ ಕಲ್ಯಾಣಿ ಮಂಟಪದಲ್ಲಿ ನಡೆದ ಕೃಷ್ಣ ಪಟ್ಟಣ ಬ್ಯಾಂಕ್ ನ 27 ನೇ ವಾರ್ಷಿಕ ಸಭೆಯಲ್ಲಿ ವರದಿ ಸಲ್ಲಿಸುತ್ತಿರುವಾಗ ಬ್ಯಾಂಕಿನಲ್ಲಿ ಆದ ಅವ್ಯವಹಾರ ಆರೋಪದ ಕುರಿತು ಸ್ಥಳೀಯ ನ್ಯಾಯಾಲಯದಲ್ಲಿ ದಾವೆ ಹೂಡಲಾಗಿದೆ ಎಂದು ಕೃಷ್ಣ ಪಟ್ಟಣ ಬ್ಯಾಂಕ್ ಅಧ್ಯಕ್ಷ ಬಸವರಾಜ ಹಿರೇಮಠ ತಿಳಿಸಿದರು.
ಇದೇ ಸಂದರ್ಭದಲ್ಲಿ ಅಧ್ಯಕ್ಷರು ಸಭೆಯಲ್ಲಿ ಬ್ಯಾಂಕಿನ ಆರ್ಥಿಕ ವ್ಯವಸ್ಥೆಯು ಚೆನ್ನಾಗಿ ನಡೆಯುತ್ತದೆ ಎಂದು ಮಾತನಾಡುತ್ತಿದ್ದಾಗ. ಬ್ಯಾಂಕಿನ ಶೇರ್ ಸದಸ್ಯರಾದ ಚನ್ನಬಸ್ಸು ವಕೀಲ ವನದುರ್ಗ ಅವರು ಯಾವ ರೀತಿಯ ಪ್ರಗತಿ ಪಥದಲ್ಲಿದೆ ಇದೇ ಎಂದು ಕೇಳಿದರು ಈ ವರುಷದಲ್ಲಿ ಬ್ಯಾಂಕ್ (1,27,22,104,71,) 1 ಕೋಟಿ 27 ಲಕ್ಷ 22 ಸಾವಿರದ 104 ರೂ 71 ಪೈಸೆ ಹಾನಿ ಆಗಿದೆ ಆದರೆ ತಾವುಗಳು ಬ್ಯಾಂಕ್ ನ ಸದಸ್ಯರಿಗೆ ತಪ್ಪು ಮಾಹಿತಿ ನೀಡುತ್ತಿದ್ದೀರಿ ಎಂದು ಗಂಭೀರವಾಗಿ ಆರೋಪಿಸಿದರು ಸಭೆಯಲ್ಲಿ ಕೆಲ ಕಾಲ ಕೋಲಾಹಲ ಉಂಟಾಯಿತು.
1 ಕೋಟಿ 27 ಲಕ್ಷ ಬ್ಯಾಂಕ್ ಹಾನಿಯಾಗಿದೆ ಎಂದು ಗೊತ್ತಿದ್ದರೂ ಸಹ ಬ್ಯಾಂಕಿನ ಸಿಬ್ಬಂದಿಗಳಿಗೆ ಬೋನಸ್ ನೀಡಿರುವುದು ಎಷ್ಟು ಮಟ್ಟಿಗೆ ಸರಿ ಎಂದು ಖಾರವಾಗಿ ಪ್ರಶ್ನೆ ಮಾಡಿದರು ಅಧ್ಯಕ್ಷರು ಸರಿಯಾಗಿ ಮಾಹಿತಿ ನೀಡುತ್ತಿಲ್ಲ ಬ್ಯಾಂಕಿನ ಆಡಳಿತ ಮಂಡಳಿಯವರು ಸರಾ ಸರಿ 6.16 ಕೋಟಿ ರೂ ಅವ್ಯವಹಾರ ಮಾಡಿದ್ದು ಅಲ್ಲದೆ 2 ವರ್ಷಗಳಿಂದ ಓಡಿ ಹಣ ಬ್ಯಾಂಕಿನ ಸದಸ್ಯರಿಗೆ ಜಮಾವಣೆ ಮಾಡಿಲ್ಲ ಯಾಕೆ ಎಂದು ಕೇಳಿದರು.
ಬ್ಯಾಂಕಿನ ಎಲ್ಲಾ ಸದಸ್ಯರು ಸೇರಿ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟ ಮಾಡುತ್ತೇವೆ ಎಂದು ಚನ್ನಬಸ್ಸು ವನದುರ್ಗ ಅವರು ಎಚ್ಚರಿಕೆ ನೀಡಿದರು ಇದೇ ಸಂದರ್ಭದಲ್ಲಿ ಬ್ಯಾಂಕಿನ ಸದಸ್ಯರುಗಳು ಚಂದ್ರಶೇಖರ ಲಿಂಗದಳ್ಳಿ, ಬಸವರಾಜ ವಿಭೂತಿಹಳ್ಳಿ,ಹೈಯಾಳಪ್ಪ ಹಯ್ಯಾಳಾಕರ್ ಭಾಗವಹಿಸಿದ್ದರು.
ವರದಿ-ರಾಜಶೇಖರ ಮಾಲಿ ಪಾಟೀಲ್
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.