ಅವತ್ತು ಅದು ಮಧ್ಯಾಹ್ನದ ಸಮಯ ಸುಮಾರು ಹನ್ನೆರಡು ಹನ್ನೆರಡುವರೆ ಸಮಯ ಆಗಿರಬಹುದು ನಾನು ಕಲಬುರಗಿಯಲ್ಲಿನ ಮಾರ್ಕೆಟ್ ಹತ್ತಿರದ ಮ್ಯಾಕ್ಸ್ ಮಾಲ್ ಎದುರಿಗೆ ಪುಟ್ಟದಾಗಿ ಮಾಡಿಕೊಂಡ ರೂಮ್ ನಲ್ಲಿ ಮಲಗಿಕೊಂಡು ಗಾಢ ನಿದ್ರೆಯಲ್ಲಿರುವಾಗ ನನ್ನ ಮೊಬೈಲ್ಗೆ ಒಂದು ಕರೆ ಬಂತು ಹಾಗೇ ನಿದ್ದೆಗಣ್ಣಲ್ಲಿ ಬಡಬಡಿಸುತ್ತಾ ಎದ್ದು ಕರೆ ಸ್ವೀಕರಿಸಿ ಮೊಬೈಲ್ ಕಿವಿಗೆ ಹಚ್ಚಿಕೊಳ್ಳುವುದರೊಳಗೆ ಅಪ್ಪಾರಾಯ ಅವರಾ? ಎಂದು ಮೇಡಂ ಕೇಳಿದರು ಹೌದು ಎನ್ನುವಷ್ಟರಲ್ಲಿ ನಿಮ್ಮ ಸರ್ ಗೆ ಹುಷಾರಿಲ್ಲ ಹಾಗಾಗಿ ಬಾಗಲಕೊಟೆಯ ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಿದ್ದಾರೆ ಅಡ್ಮಿಟ್ ಆಗಿ ಎರಡು ದಿನ ಆಯ್ತು ಹಾಗಾಗಿ ನಿಮ್ಮ ಕರೆ ಮಾತ್ರವಲ್ಲ ಯಾರ ಕರೆಯೂ ಸ್ವೀಕರಿಸಿಲ್ಲ ಎಂದು ಹೇಳಿ ಮುಗಿಸಿ ಕರೆ ಕಟ್ ಮಾಡಿದರು ಆ ಕ್ಷಣ ಮನದಲ್ಲಿ ಏನೋ ಅಸಮಾಧಾನ, ಮನಸ್ಸಿನಲ್ಲಿ ಅದೇನೋ ಒಂಥರಾ ದಿಗಿಲು ಕಳೆದೆರಡು ದಿನದ ಹಿಂದೆಯೆ ಮಾತಾಡಿದ್ನಲ್ಲ ಚೆನ್ನಾಗೆ ಮಾತನಾಡಿದ್ರು ಇದಕ್ಕಿದಂತೆ ಅದೇನಾಯ್ತು ಅಂತ ಹಲವು ಯೋಚನೆಗಳು ಮನಸ್ಸಲ್ಲಿ ಬರುತ್ತಿರುವಾಗಲೇ ನಮ್ಮ ಜೇವರ್ಗಿಯ ವರದಿಗಾರರಾದ ಚಂದ್ರಶೇಖರ್ ಸರ್ ಅವರಿಗೆ ಕರೆ ಮಾಡಿದೆ ಕರೆ ಏನೋ ರಿಸೀವ್ ಮಾಡಿದ್ರು ಒಂದೆರಡು ಮಾತನಾಡಿ ಸರ್ ನಾನು ಸ್ವಲ್ಪ ಬ್ಯಿಸಿ ಇದ್ದೀನಿ ಆಮೇಲ್ ಮಾಡ್ತೀನಿ ಅಂತ ಕಾಲ್ ಕಟ್ ಮಾಡಿದ್ರು,ಆವಾಗ್ ನೆನಪಿಗ್ ಬಂದಿದ್ದೆ ನಮ್ಮ ಮಹಾದೇವ್ ಸರ್ ಅವರಿಗೂ ಕೂಡಾ ವಿಷಯ ತಿಳಿಸಿದ್ರಾಯ್ತು ಅಂತ ಅನ್ಕೊಂಡು ಮಹಾದೇವ್ ಸರ್ ಅವರ್ನ ಪೋನ್ ಮಾಡಿ ವಿಷಯ ತಿಳಿಸುತ್ತಿದ್ದಂತೆಯೇ,ಸರ್ ಒಂದಿನ ಬಳಿಗಾರ್ ಸರ್’ನ ಮಾತಾಡಿಸ್ಕೊಂಡ್ ಬರೋಣ ಆರೋಗ್ಯ ವಿಚಾರಿಸ್ಕೊಂಡ್ ಬರೋಣ ಅಂತ ಮಹಾದೇವ್ ಸರ್ ಅಂದಾಗ ಮನಸ್ಸಿಗೆ ಅನಿಸಿದ್ದೆ ಹೌದು ಬಸವರಾಜ ಬಳಿಗಾರ್ ಸರ್ ಅವರು ನನಗೆ ಕನಸಿನ ಭಾರತ ಪತ್ರಿಕೆಯಲ್ಲಿದ್ದಾಗಿನಿಂದಲೂ ಪರಿಚಯ. ನಿಜ ಆದರೆ ಅವರನ್ನ ಭೇಟಿ ಮಾಡೋ ಸಂದರ್ಭ ಒಂದಿನಾನೂ ಬಂದಿರಲಿಲ್ಲ ಹೌದು ಆದಿನ ಈಗ ಕೂಡಿ ಬಂದಿದೆ ಎಂದು ಅನ್ಕೊಂಡವನೇ ಖರೆ ಸರ್ ಒಂದಿನ ಸರ್ ನ ಮೀಟ್ ಮಾಡಿ ಆರೋಗ್ಯ ವಿಚಾರಸ್ಕೊಂಡ್ ಬರೋಣ ಅಂತ ಹೇಳಿ ತೀರ್ಮಾನಿಸಿ ಒಂದ್ ಮಾತು ಚಂದ್ರು ಸರ್ ನೂ ಕೇಳೋಣ ಅನ್ನುವಷ್ಟರಲ್ಲೇ ನೆನೆದವರ ಮನದಲ್ಲಿ ಅನ್ನೋ ಹಾಗೆ ಅವರ ಕರೆ ಬಂದೇ ಬಿಡ್ತು ಕರೆ ಸ್ವೀಕರಿಸಿ ಕಾನ್ ಫ್ರೆಂಸ್ ಕಾಲ್ ಹಾಕಿ ಮೂವರೂ ಮಾತಾಡ್ಕೊಂಡ್ ಒಂದ್ ನಿರ್ಧಾರಕ್ಕೆ ಬಂದಿದ್ವಿ ಅಷ್ಟರಲ್ಲೇ ಚಂದ್ರು ಸರ್ ಬಾಯಿಗ್ ಬಂದ್ ಮಾತೇ ಅದು,ಬಡಿಗೇರ ಸರ್ ನಮ್ಮ ಯಡ್ರಾಮಿ ರಿಪೋರ್ಟರ್ ಸರ್ ಒಬ್ರು ಇದ್ದಾರೆ ಅವರೂನು ಬರ್ತಾರ ಅಂತ ಕೇಳ್ತೀನಿ ಅಂತ ಕಾಲ್ ಮಾಡಿ ಗ್ರೂಪ್ ಕಾಲ್ ಅಲ್ಲಿ ತಗೊಂಡೇ ಬಿಟ್ರು ಆವಾಗ ಹೊಸದಾಗಿ ಪರಿಚಯವಾಗಿದ್ದೇ ನರೇಶ ಸರ್ ಯಡ್ರಾಮಿ ವರದಿಗಾರರು ಕರುನಾಡ ಕಂದ,ಎಲ್ಲರೂ ಸೇರಿ ಮಾತಾಡಿ ಡೇಟ್ ಫಿಕ್ ಮಾಡಿದ್ದೇ ಆಗಸ್ಟ್ ತಿಂಗಳ ಕೊನೆಯ ವಾರ,ಅವತ್ತು ಬಹುಶಃ ಶುಕ್ರವಾರ ಅನಿಸುತ್ತೆ ನನಗಷ್ಟು ನೆನಪಿಲ್ಲ. ಆಗ ಥಟ್ ಅಂತ ತಲ್ಯಾಗ್ ಬಂದಿದ್ ಪ್ರಶ್ನೆನೆ ಅದು. ಏನಂದ್ರೆ,ಸರ್ ಹೆಂಗ್ ಹೋಗೋಣ ಬಸ್ಸಲ್ಲಾ ಟ್ರೇನಲ್ಲಾ ಅಂತ ಚಂದ್ರು ಸರ್ನ ಕೇಳದಾಗ ಚಂದ್ರು ಸರ್ ಹೇಳಿದ ಮಾತೇ ಅದು ನರೇಶ ಸರ್ ಕಾರ್ ತರ್ತೀನಿ ಅಂದಿದ್ದಾರೆ ಅದರಲ್ಲೆ ಎಲ್ಲರೂ ಹೋದರಾಯ್ತು ನೀವು ಮತ್ತೆ ಮಹಾದೇವ ಸರ್ ಜೇವರ್ಗಿತನ ಬರ್ರಿ ಅಲ್ಲಿಂದ ಕಾರ್’ನಲ್ಲಿ ಹೋದ್ರಾಯ್ತು ಅಂತ ಹೇಳುದ್ರು ಸರಿ ಆಯ್ತು ಅಂತ ಅನ್ಕೊಂಡು ಆ ದಿನ ಬೆಳಿಗ್ಗೆ ಬೇಗ ಎದ್ದು ನಾನು ಮತ್ತೆ ಮಹಾದೇವ್ ಸರ್ ಪ್ರಯಾಣ ಬೆಳೆಸಿದ್ದೇ ಜೇವರ್ಗಿ ಕಡೆ,ವಿಜಯಪುರ ಬಸ್ ಹತ್ತಿ ಜೇವರ್ಗಿ ಟಿಕೇಟ್ ತಗೊಂಡು ಕೂತ್ಕೊಂಡು ಚಂದ್ರು ಸರ್ ನ ಕಾಲ್ ಮಾಡಿ ಕೇಳ್ದಾಗ ಅವರು ಹೇಳಿದ್ದೇ ವಿಜಯಪುರ ಕ್ರಾಸ್ ಬಂದು ಪೋನ್ ಮಾಡಿ ಅಂತ! ಸರಿ ಅಂತ ಹೇಳಿ ನಾನೂ ಕೂಡಾ ಫೋನ್ ಕಟ್ ಮಾಡಿ ಹರಟೆ ಹೊಡೀತಾ ಹೊಡೀತಾ ಇರುವಾಗ ಜೇವರ್ಗಿ ಬಂದಿದ್ದೇ ತಿಳೀಲಿಲ್ಲ ಅಷ್ಟರಲ್ಲಿಯೇ ಚಂದ್ರು ಗೌಡ್ರು ಫೋನ್ ಮಾಡಿ ಸರ್ ಎಲ್ಲಿದ್ದೀರಿ ಅಂದಾಗ! ನಾನು ಹಸನಾಪುರ ಹೊಳಿ ದಾಟೀವಿ ಸರ್ರ ಬಂದ್ವಿ ಒಂದ್ ಹತ್ತ ಮಿಂಟ್ ನಾಗ್ ಬರ್ತೀವಿ, ಅನ್ನುವಷ್ಟರಲ್ಲಿ ಅವರು ಮತ್ತೆ ಹೇಳಿದ್ರು ನಾನು ಇಲ್ಲಿಯೇ ವಿಜಾಪುರ ಕ್ರಾಸ್ ನಲ್ಲಿ ನಿಂತಿದ್ದೀನಿ ಇಲ್ಲಿಗೆ ಬರ್ರಿ ಅಂದ್ರು ಸರಿ ಸರ್ ಅಂತ ಅಂತ ಹೇಳಿ ಸ್ವಲ್ಪ ಹೊತ್ತು ಕಳಿಯುವುದರಲ್ಲಿ ಜೇವರ್ಗಿ ಬಸ್ಟ್ಯಾಂಟ್ ಬಂದೇ ಬಿಟ್ತು ಬಸ್ ಇಳಿದು ಹೊರಗಡೆ ಬಂದು ಆಟೋ ಮೊರೆ ಹೋಗಿ ಆಟೋದವನನ್ನ ವಿಜಯಪುರ ಕ್ರಾಸ್ ಎಷ್ಟಪ್ಪ ಅಂದಾಗ ಕುಂದುರ್ರಿ ಅಣ್ಣಾ ತಲಾ ಹತ್ತು ರೂಪಾಯಿ ಅಂತ ಹೇಳಿ ವಿಜಯಪುರ ಕ್ರಾಸ್ ತಲುಪಿಸಿದ ನಂತರ ಗೌಡ್ರಿಗಿ ಫೋನ್ ಮಾಡಿ ಸರ್ರ್ ನಾವ್ ಇಲ್ಲೇ ಬಂದೀವಿ ನೀವೆಲ್ಲಿದ್ದೀರಿ ಅಂದಾಗ ಅವ್ರು ಕೈ ಸನ್ನೆ ಮಾಡಿ ಈ ಕಡೆ ನೋಡಿ ಅಂತ ಕರೆದ್ರು ನಂತರ ಅವರ ಗ್ರಂಥಾಲಯದ ಕಿರುಪರಿಚಯದ ಜೊತೆಗೆ ಅವರ ಸ್ನೇಹಿತರೊಬ್ಬರನ್ನ ಪರಿಚಯಿಸಿ ಲಗೇಜ್ ಇಲ್ಲೇ ಇಡಿ ಬನ್ನಿ ಟೀ ಕುಡಿಯೋಣ ಅಂದ್ರು ಅಷ್ಟರಲ್ಲೇ ಮಹಾದೇವ್ ಸರ್ ಬಾಯಿಂದ್ ಬಂದ ಮಾತೇ ಅದು ಸರ್ರ್ ಇನ್ನೂ ನಾಷ್ಟ ಮಾಡಿಲ್ಲ ನಾವು ನಾಷ್ಟ ಮಾಡಮ್ರಿ ಎಲ್ಲೋರು ಅಂದ್ರು ಅಂದಾಗ ಸರಿ ಅಂತ ಹೇಳಿ ಟಿಫನ್ ಸೆಂಟರ್ ಕಡೆ ಹೋಗಿ ಟಿಫಿನ್ ಆರ್ಡರ್ ಮಾಡದ್ವಿ,ನಾನು ನಮ್ ಕಲಬುರಗಿಯಲ್ಲಿ ಹೆಚ್ಚಿಗ್ ಸೇಲ್ ಆಗೋ ಬೆಳಿಗ್ಗೆ ತಿಂಡಿ ಆಲೂಬಾತ್ ತಗೊಂಡ್ರ ಮಹಾದೇವ್ ಸರ್ ಮತ್ತೆ ಚಂದ್ರು ಸರ್ ತಗೊಂಡಿದ್ದೆ ಸುಸಲಾ(ವಗ್ಗರಣೆ) ಕೆಲವೊಂದ್ ಕಡೆ ವಗ್ಗರಣೆ ಅಂತಾರೆ ಅದನ್ನ. ಎಲ್ಲರೂ ನಾಷ್ಟಾ ಮಾಡಿ ಚಹಾ ಕುಡಿಯೋವಾಗ್ ಆದ್ರೂ ನರೇಶ್ ಸರ್ ನ ಬಿಟ್ಟು ಅದ್ಹೆಂಗ್ ಟೀ ಕುಡಿಯೋದು ನಾಷ್ಟಾನೂ ಬಿಟ್ಟೇ ಮಾಡದ್ವಿ ಟೀ ನೂ ಬಿಟ್ಟೇ ಕುಡುದ್ರ ಹೆಂಗ್ ಸರ್ ಅಂದಾಗ್ ಚಂದ್ರು ಸರ್ ಹೇಳಿದ್ ಮಾತೇ ಅದು ಅವ್ರು ಮನ್ಯಾಗೆ ನಾಷ್ಟ ಮಾಡ್ತೀನಿ ಅಂದಾರ್ರಿ ಸರ್ರ್ ಅದುಕ್ಕೆ ನಾ ನಾವ್ ಮೂಗೋರೆ ಮಾಡೋಣ ಅಂದ ಅಂತ ಅಂದ್ರು ಅಷ್ಟು ಮಾತಾಡ್ಕೊಂತ ಅಲ್ಲಿದ್ದ ವಿಜಯ ಕರ್ನಾಟಕದ ಮುಖಪುಟದ ಮೇಲೆ ಕಣ್ಣಾಡಿಸುತ್ತ ಇರುವಾಗಲೇ ಚಂದ್ರು ಸರ್ ಅಂದಿದ್ದೆ ಸರ್ ಕಾರ್ ಬಂತು ಹೋಗೋಣ ಬನ್ನಿ ಅಂದ್ರು ಎದ್ದು ಕಾರಿನ್ಯಾಗ ಹೋಗಿ ಮುಂದಿನ ಸೀಟಿನ್ಯಾಗ್ ಮಹಾದೇವ್ ಸರ್ ಕುಂತ್ರೆ ನಾನು ಮತ್ತೆ ಚಂದ್ರು ಸರ್ ಹಿಂದಿನ ಸೀಟಿನ್ ಮ್ಯಾಲ್ ಕುಂತ್ವಿ ಕಾರ್ ಓಡುಸ್ತಾ ಮಾತಾಡಿಸಿದ ನರೇಶ ಸರ್ ಕೇಳಿದ್ ಮಾತೇ ಅದು ಸರ್ ಯಾವ್ ರೂಟ್ ಇಂದ ಹೋಗೋಣ?ನಾನು ಲಿಂಗಸೂರು,ಗಂಗಾವತಿ ವಾಯಾ ಅಂತ ಹೇಳಿದ್ರೆ ಚಂದ್ರು ಸರ್ ಅಂದಿದ್ದೆ ಸಿಂದಗಿ,ಇಲಕಲ್ ಮ್ಯಾಗಿಂದ್ ಹೋಗೋಣ್ರಿ ಸಮೀಪ ಆಗುತ್ತ,ಆವಾಗ್ ನರೇಶ ಸರ್ ಹೇಳಿದ ಮಾತೇ ಅದು ಇಲಕಲ್ ಮ್ಯಾಗಿಂದ ರೋಡ್ ಛೊಲೋ ಇಲ್ರಿ ಒಂದ್ಸತಿ ಮ್ಯಾಪ್ ಹಾಕಿ ನೋಡ್ರಿ ಅಂತ ಹೇಳ್ದಾಗ ಮ್ಯಾಪ್ನಲ್ಲಿ ತೋರ್ಸಿದ್ದೆ ಸುರಪುರ, ಲಿಂಗಸೂರ,ತಾವರಗೇರಾ ವಾಯಾ ಕುಷ್ಟಗಿ ದಾರಿ ಸರ್ ಇದು ಸಮೀಪ ಆಗುತ್ತ ಹಿಂಗೆ ನಡಿರ್ರಿ ಅಂತ ಹೇಳುವಷ್ಟರಲ್ಲೇ ಬಿ ಗುಡಿ ಬಂದಿತ್ತು ಹಾಗೇ ಮುಂದೆ ಹೊರಟ್ವಿ ಹೊರಟ್ವಿ ಸುರಪುರ ದಾಟಿ ಒಂದ್ಯಾವ್ದೋ ಪಂಕ್ಚರ್ ದುಕಾನ್ದಾಗ ಹವಾ ಚೆಕ್ ಮಾಡಾಕ್ ನಿಂತ್ವಿ ಅಷ್ಟೇ ಅದಾದಮೇಲೆ ಬಂದಿದ್ದೇ ಕುಷ್ಟಗಿಯ ಬಸ್ ನಿಲ್ದಾಣ ಹತ್ತಿರದ ಅಂಬೇಡ್ಕರ್ ಸರ್ಕಲ್ ಅಂಬೇಡ್ಕರ್ ಸರ್ಕಲ್ ಹತ್ತಿರಕ್ಕೆ ಬಂದು ನಿಂತು ಬಳಿಗಾರ್ ಸರ್ನ ಕಾಲ್ ಮಾಡಿ ಕೇಳ್ದಾಗ ಅವ್ರ ಅಂದಿರೋ ಮಾತೇ ನಾನು ಮ್ಯಾಪ್ ಕಳುಸಿದ್ನಲ್ಲ ಆ ಮ್ಯಾಪ್ ಪ್ರಕಾರ ಬನ್ನಿ ಆಫೀಸ್ ಹತ್ರಕ್ಕೆ ಬರುತ್ತೆ ಅಂದ್ರು ಸರಿ ಸರ್ ಅಂದವರೆ ಇಲ್ಲಿವರಗೂ ಬಂದಿದ್ದೀವಿ ಸರ್ ನ ಸನ್ಮಾನ ಮಾಡದಿದ್ದರೆ ಹೇಗೆ ಅಂತ ಥಟ್ ಅಂತ ತೆಗೆದುಕೊಂಡ ನಿರ್ಧಾರವೇ ಅದು ಸನ್ಮಾನ ಕಾರ್ಯಕ್ರಮ!ಸರಿ ಅಂತ ಹೇಳಿ ನಾನು ಮತ್ತೆ ಚಂದ್ರು ಗೌಡ್ರು ಸೇರಿ ಮಾರ್ಕೆಟ್ ಅಲ್ಲಿ ಒಂದ್ ಶಾಲು ಹಣ್ಣು ಹಂಪಲುಗಳ ಜೊತೆಗೆ ಹಾರ ತಗೊಂಡು ಬಂದು ಕಾರ್ ನಲ್ಲಿ ಕೂತ್ಕೊಂಡು ಹೊರಟಿದ್ದೇ ಆಫೀಸ್ ಕಡೆ ರೂಟ್ ಮ್ಯಾಪ್ ಪ್ರಕಾರ ರೂಟ್ ಮ್ಯಾಪ್ ಅಂದ್ರೆ ನಿಮಗ್ ಗೊತ್ತೆ ಇರುತ್ತಲ್ವ ಟ್ರಾಫಿಕ್ ಅಲ್ಲಿ ರೂಟ್ ಮ್ಯಾಪ್ ಪ್ರಕಾರ ಹೋಗೋವಾಗ ಕೆಲವು ತೊಂದರೆಗಳು ಅನುಭವಿಸೋದು ಆ ಅನುಭವವೇ ನಮಗೂ ಆಗಿದ್ದು ದಾರಿ ಇರೋದ್ ಹಿಂದಿನ ದಾರಿ ಆದ್ರೆ ನಾವ್ ಹೋಗಿದ್ದು ಮುಂದಿನ ದಾರಿ ಹಾಗಂತೂ ಇವ್ರೇನು ಲೂಸ್’ಗಳು ಮ್ಯಾಪ್ ನೋಡಿ ಹೋಗಕ್ಕಾಗಲ್ವಾ ಇವಕ್ಕೆ ಅನ್ಕೋಬೇಡಿ ದಾರಿ ತಪ್ಪಿದ್ದು ಸ್ವಲ್ಪ ಮಾತ್ರ ನೂರು ಮೀಟರ್ ಅಷ್ಟೇ…ಆ ದಾರಿಯಲ್ಲಿ ಇದ್ದಿದ್ದು ಪತ್ರಿಕೆಯ ಹಳೇ ಆಫೀಸ್ ಅಂತೆ ಅಲ್ಲೊಬ್ಬ ಮಾನಿ ಸೈನಿಕ ಅಂಕಲ್ ತಿಳಿಸಿದ್ರು ಅಲ್ಲಿ ಅವ್ರನ್ನ ಕೇಳ್ದಾಗ ಮ್ಯಾಪ್ ಪ್ರಕಾರ ಸರಿಯಾಗಿಯೇ ಬಂದಿದ್ದೀರಿ ಆದ್ರೆ ನಿಮ್ಮ ಆಫೀಸು ಬೇರೆ ಕಡೆ ಶಿಫ್ಟ್ ಮಾಡ್ತಿದ್ದಾರೆ ಒಂದ್ ಸತಿ ಫೋನ್ ಮಾಡಿ ವಿಚಾರಿಸಿ ಅನ್ನುವಷ್ಟರಲ್ಲಿಯೇ ನಮ್ ಗೌಡ್ರು ಕಾಲ್ ಮಾಡಿ ಸರ್ ಲೊಕೇಶನ್ ಏನೋ ಸರಿಯಾಗಿಯೇ ಬಂದಿದ್ದೀವಿ ಆದ್ರೆ ಹಳೇ ಆಫೀಸ್ ಇತ್ತು ಅಂತಲ್ಲ ಅಲ್ಲಿದ್ದೀವಿ ಸರ್ ಅಂದಾಗ ಇರಿ ನಾನು ಅಲ್ಲಿಯೇ ಬರ್ತೀನಿ ಅಂತ ಹೇಳಿ ಬಳಿಗಾರ್ ಸರ್ ಹೇಳ್ದಾಗ ನನ್ನಲ್ಲಿ ಅದೇನೋ ಮನಸಸ್ಸಲ್ಲಿ, ಹುಷಾರಿಲ್ಲ ಅಂತಿದ್ದವರು ಬರ್ತಿದ್ದೀನಿ ಅಂತಿದ್ದಾರಲ್ಲಾ ಅವ್ರಣ್ಣನೋ ಬೇರೆ ಯಾರನ್ನೋ ಕಳಸಿದ್ದಿದ್ರೆ ಆಗ್ತಿತ್ತಪ್ಪಾ ಅಂದುಕೊಳ್ಳುವಷ್ಟರಲ್ಲಿಯೇ ಮಹಾದೇವ್ ಸರ್ ಹೇಳಿದ ಮಾತೇ ಅದು ಸರ್ ಇನ್ನೂ ಸಣ್ಣವ್ರೆ ಹಾರ್ ಅಲ್ರಿ..!ಫೋಟೋದಾಗ್ ದೊಡ್ಡವರ ಕಾಣ್ತಾರ ಅಂದು ಅಲ್ನೋಡಿ ಅಂತ ಆ ಕಡೆ ಕೈ ಮಾಡಿ ತೋರಿಸುತ್ತಿರುವಾಗಲೇ ನೀಲಿ ಅಂಗಿ ಹಾಕ್ಕೊಂಡು CT 125 ಬೈಕ್ ಮೇಲೆ ಬಂದವರೇ ಬನ್ನಿ ಹೋಗೋಣ ಅಂದ್ರು ಸರಿ ಆಯ್ತು ಅಂತ ಹೊರಡೋಣ ಅನ್ನುವಷ್ಟರಲ್ಲಿ ನರೇಶ ಅಣ್ಣಾ ಹೇಳಿದ್ ಮಾತೇ ಕಾರ್ ತಗೊಳ್ರಿ ಅಂತ ಕಾರ್ ಕೀ ಕೈಯಿಗ್ ಕೊಟ್ಟೇ ಬಿಟ್ರು,ಇರ್ಲಿ ಅಣ್ಣಾ ನೀವ್ ಅಲ್ಲಿತಕ ತೋರ್ರೀ ನಾ ಆಮ್ಯಾಲ್ ತೋತೀನಿ ಅಂದೆ! ಇಲ್ಲ ಟೈಯಡ್ ಆಗಿದೆ ನೀವ್ ತಗೊಳ್ಳಿ ಅಂದ್ರು ಆವಾಗ ನನ್ನ ಮನಸ್ಸಲ್ಲಿ ಅನ್ನಿಸಿದ್ದೇ ಅದು ಅವರು ಹೇಳೋದು ನಿಜಾನೇ ಪಾಪ ಅವರೂ ಕೂಡ ಇನ್ನೂರರವತ್ತು ಕಿಲೋಮೀಟರ್ ಕಾರ್ ಓಡಸಿದ್ದಾರೆ ದಣಿದಿದ್ದಾರೆ ಅಂತ ಕಾರ್ ಡೋರ್ ತಗದು ಕಾರ್ ನಲ್ಲಿ ಕೂತ್ಕೊಂಡು ಸ್ಟಾರ್ಟ್ ಮಾಡ್ದೆ ಇನ್ನೇನು ರಿವರ್ಸ ತಗೋಬೇಕು ಅನ್ನುವಷ್ಟರಲ್ಲಿಯೇ ಎರಡು ಸಾರಿ ಕಾರು ಬಂದ್ ಆಗ್ಬೇಕಾ!ಅಷ್ಟಾದ್ರೂ ಪರ್ಫೆಕ್ಟ್ ಕಾರ್ ಓಡಸೋ ನನಗೇ ಸತಾಯಿಸುತ್ತಾ ಇದು ಅಂತ ಮೂರನೇ ಬಾರಿ ಕಾರ್ ಸ್ಟಾರ್ಟ ಮಾಡಿ ಹಂಗೆ ರಿವರ್ಸ್ ಜಗ್ಗಿಸಿ ಮುಂದೆ ಹಿಂದೆ ಮಾಡಿ ಮಹಾದೇವ್ ಸರ್ ಮತ್ತೆ ನರೇಶ ಅಣ್ಣನ್ನ ಕಾರಲ್ಲಿ ಕೂರುಸ್ಕೊಂಡು ಗಾಡೀಲಿ ಮುಂದೆ ಹೋಗ್ತಿರೋ ಸರ್ ಮತ್ತೆ ಗೌಡ್ರನ್ನ ಫಾಲೋ ಮಾಡಿ ಆಫೀಸ್ ಬಂದು ತಲುಪಿಯೇ ಬಿಟ್ವಿ!ಆಫೀಸ್ ನೋಡಿದ್ ತಕ್ಷಣ ನನಗನ್ನಿಸಿದ್ದನ್ನ ಹೇಳಿಯೇ ಬಿಟ್ಟೇ ಸರ್ ನಾವ್ ಅದೆಷ್ಟು ಹುಡುಕಾಡಿದ್ರೂ ಆಫೀಸ್ ಸಿಗ್ತಾನೇ ಇರಲಿಲ್ಲ ನೀವ್ ಬಂದಿದ್ದು ಒಳ್ಳೇದೇ ಆಯ್ತು ಅಂತ ಅಂದೆ ಹಾಗೇ ಮಾತುಕತೆ ಮುಂದುವರೆದು ಆಫೀಸ್ ಅಲ್ಲಿ ಬಂದು ನಿಂತ್ಕೊಂಡಿರಬೇಕಾದ್ರೆ ಬಳಿಗಾರ್ ಸರ್ ಬಾಯಿಂದ ಬಂದ ಮಾತೆ ಅದು ನಿಂತ್ಕೊಂಡೆ ಇದ್ದೀರಲ್ರಿ ಕೂತ್ಕೊಳ್ಳಿ ಆಫೀಸ್ ನಿಮ್ದೆ ಅಂದ್ರು, ಆಯ್ತು ಅಂತ ನಮ್ಮ ಆಫೀಸಿನ ಸಿಬ್ಬಂದಿಯೊಬ್ಬರು ತಂದು ಕೊಟ್ಟ ಚೇರುಗಳ ಮೇಲೆ ಕೂತ್ಕೊಂಡು ಮಾತುಕತೆ ಮುಂದುವರೆಸಿದ್ವಿ ಸರ್ ಇವಾಗ್ ಹೆಂಗಿದ್ದೀರಿ ಆರಾಮ್ ಆಗಿದ್ದೀರಿ ತಾನೆ?! ನಮಗಂತೂ ತುಂಬಾ ಭಯ ಆಗ್ಬಿಟ್ಟಿತ್ತು ಅಂತ ಕೇಳ್ದಾಗ ಸರ್ ಅಂದಿದ್ ಮಾತೇ ಅದು ಹಾಸ್ಪಿಟಲ್ ನಲ್ಲಿ ಐಸಿಯುನಲ್ಲಿ ಆರೋಗ್ಯ ವಿಚಾರಿಸಲು ಬಂದು-ಹೋದವರ ಜೊತೆ ಮಾತಾಡ್ಕೊಂಡ್ ಇದ್ದೆ.ಗಟ್ಟಿ ಇದ್ದಾಗಲೇ ಇಂಥವೆಲ್ಲಾ ಬಂದು ಹೋಗಬೇಕು ಅಷ್ಟೇನು ಸಮಸ್ಯೆ ಇಲ್ಲ ಕೆಲವೊಂದು ಸಣ್ಣಪುಟ್ಟ ತೊಂದರೆಯಿಂದಾಗಿ ಡಯಾಲಾಸಿಸ್ ಮಾಡಿದ್ರು ಅಷ್ಟೇ ಅಂದ್ರು ಡಯಾಲಾಸಿಸ್ ಅಂದ್ರೆ ಕೆಲವೊಬ್ಬರು ತಪ್ಪು ತಿಳ್ಕೊಂಡಿದ್ದಾರೆ ಅದರಿಂದ ಏನೂ ಸಮಸ್ಯೇ ಇಲ್ಲ ಅದೇನೋ ಬೇರೆ ಸಮಸ್ಯೆಯಿಂದ ಡಯಾಲಾಸಿಸ್ ಮಾಡಿದ್ದಾರೆ ಅಂತ ಹೇಳುದ್ರು ನನಗಷ್ಟು ನೆನಪಿಲ್ಲ ಆ ಮಾತು ಸರಿ ಸರ್ ಅಂತ ಹಾಗೇ ಸುಮಾರು ಮೂರು ಗಂಟೆಗಳ ಕಾಲ ಪಂಚಾಯತಿ ಟು ಪಾರ್ಲಿಮೆಂಟ್ ವರೆಗೆ ಮಾತಾಡಿದ್ವಿ ಎಲ್ಲರೂ ನಂತರ ಸರ್ ಮತ್ತೆ ಮೇಡಂ ಅವರನ್ನು ನಾವು ಸನ್ಮಾನ ಮಾಡುದ್ರೆ ನಮಗೂ ಸಹ ಸನ್ಮಾನ ಮಾಡಿ ಎಲ್ಲರಿಗೂ ಅವರಿಗಿಷ್ಟದ ಒಂದೊಂದು ಪುಸ್ತಕ ಉಡುಗೊರೆಯಾಗಿ ಕೊಡುವ ಮೂಲಕ ಬೀಳ್ಕೊಟ್ಟರು.ನನಗಿಷ್ಟದ ‘ಮಾಹಿತಿ ಹಕ್ಕು’ ಪುಸ್ತಕ ಕೊಟ್ರು…
-ಅಪ್ಪಾರಾಯ ಬಡಿಗೇರ,ಕರುನಾಡ ಕಂದ
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.