ಬೀದರ್‌ನ ಹೈ.ಕ.ಶಿ ಸಂಸ್ಥೆಯ ಬಿ.ವಿ.ಭೂಮರಡ್ಡಿ ಕಲಾ,ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಹಿಂದಿ ವಿಭಾಗದಿಂದ ಹಿಂದಿ ದಿವಸ್ ಕಾರ್ಯಕ್ರಮ ಜರುಗಿತು.
ಭವ್ಯ ಇತಿಹಾಸ,ಪರಂಪರೆ ಹೊಂದಿದ ಭಾಷೆ ಹಿಂದಿ
ಬೀದರ್:ಹಿಂದಿ ಭಾಷೆಯು ಕೇವಲ ಒಂದು ಭಾಷೆಯಲ್ಲ.ಅದು ತನ್ನದೇ ಆದ ಭವ್ಯ ಇತಿಹಾಸ, ಪರಂಪರೆ ಹೊಂದಿದೆ ಎಂದು ಕರ್ನಾಟಕ ಪದವಿ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಪ್ರೊ, ನೆಹರು ಪವಾರ್ ಹೇಳಿದರು.
ಇಲ್ಲಿಯ ಹೈ.ಕ.ಶಿ ಸಂಸ್ಥೆಯ ಬಿ.ವಿ.ಭೂಮರಡ್ಡಿ ಕಲಾ,ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಹಿಂದಿ ವಿಭಾಗ ಆಯೋಜಿಸಿದ ಹಿಂದಿ ದಿವಸ್ ಕಾರ್ಯಕ್ರಮದಲ್ಲಿ ಮಾತನಾಡಿ ಭಾರತ ದೇಶದ ಪ್ರಮುಖ ಭಾಷೆಗಳಲ್ಲಿ ಒಂದಾದ ಹಿಂದಿ ಭಾಷೆಯನ್ನು ರಾಷ್ಟ್ರದ ಮಾತೃ ಭಾಷೆಯಾಗಿ ಜನ ಬಳಸುತ್ತಾರೆ ಮನುಷ್ಯ ಮನುಷ್ಯರ ನಡುವೆ ಭಾವನೆಗಳನ್ನು ಹಂಚಿಕೊಳ್ಳಲು ಇರುವ ಏಕೈಕ ಮಾರ್ಗ ಎಂದರೆ ಭಾಷೆ,ಹಿಂದಿಯು ಭಾರತದ ಸಮೃದ್ಧ ಭಾಷೆಯಾಗಿದ್ದು,ದೇಶವನ್ನು ಪ್ರಾಂತೀಯತೆಯ ಭಯದಿಂದ ಮುಕ್ತಗೊಳಿಸಿ ಏಕತೆಯನ್ನು ಸಾಧಿಸಲು ಮಹತ್ತರವಾದ ಪಾತ್ರ ನಿರ್ವವಹಿಸುತ್ತದೆ ಎಂದು ನುಡಿದರು.
ಹಿಂದಿ ವಿಭಾಗದ ಮುಖ್ಯಸ್ಥ ಡಾ.ದೀಪಾ ರಾಗಾ ಸ್ವಾಗತಿಸಿ ಪ್ರಾಸ್ತವಿಕ ಮಾತನಾಡಿದರು. ಪ್ರಾಚಾರ್ಯ ಡಾ.(ಮೇಜರ) ಪಿ.ವಿಠಲ್ ರೆಡ್ಡಿ ಹಿಂದಿ ಭಾಷೆಯು ಇಂದು ಭಾರತ ಮಾತ್ರವಲ್ಲ,ಇಡಿ ವಿಶ್ವದಲ್ಲಿಯೆ ತನ್ನ ಛಾಪನ್ನು ಮೂಡಿಸುತ್ತಾ ಭಾರತವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸುತ್ತಿದೆ ಆದ್ದರಿಂದ ಪ್ರತಿಯೊಬ್ಬ ಭಾರತೀಯನು ವ್ಯವಹಾರದ ದೃಷ್ಟಿಯಿಂದಾದರೂ ಹಿಂದಿ ಭಾಷೆಯನ್ನು ಕಲಿಯುವುದು ಅನಿವಾರ್ಯವಾಗಿದೆ ಎಂದು ನುಡಿದರು,ಮಾರುತಿ ಭೀಮಣ್ಣಾ ನಿರೂಪಿಸಿದರು,ನೂರಪಾಶಾ ವಂದಿಸಿದರು.
ವರದಿ:ಸಾಗರ್ ಪಡಸಲೆ ಬೀದರ್
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.