ನಾಗಾವಿ ನಾಡು ಚಿತ್ತಾಪುರ ಕ್ಷೇತ್ರದ ಯುವಕರಿಂದ ಜೀವ್ನಾ ಅಂದ್ರೆ ಇಷ್ಟೇನಾ…?ಎಂಬ ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಕಿರುಚಿತ್ರ ಇದೇ ತಿಂಗಳು ಅಂದ್ರೆ 30-09-2023 ರಂದು ಉತ್ತರ ಕರ್ನಾಟಕದ ನಡೆದಾಡುವ ದೇವರು ಎಂದೇ ಖ್ಯಾತಿ ಪಡೆದಿರುವ ಶ್ರೀ ಮಲ್ಲಿಕಾರ್ಜುನ ಮುತ್ಯಾ ಮಹಲ್ ರೋಜಾರವರ ಅಮೃತ ಹಸ್ತದಿಂದ Nanna Kanasina UK ಎಂಬ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗುತ್ತಿದೆ ನಮ್ಮ ಉತ್ತರ ಕರ್ನಾಟಕದ ಯುವಕರು ಒಂದು ದೊಡ್ಡ ವಿನೂತನ ಪ್ರಯತ್ನಕ್ಕೆ ಕೈ ಹಾಕಿದ್ದಾರೆ ಅವರಿಗೆ ನಮ್ಮ ಕರುನಾಡ ಜನತೆ ಆಶಿರ್ವದಿಸಿ ಅವರನ್ನ ಬೆಳೆಸಬೇಕು.ನಮ್ಮ ಕಲ್ಯಾಣ ಕರ್ನಾಟಕ ಭಾಗದ ಯುವಕರು ಸೇರಿ ಸಮಾಜಕ್ಕೆ ಒಳ್ಳೆಯ ಸಂದೇಶ ಕೊಡಲು ಸಿದ್ದರಾಗಿದ್ದಾರೆ ನಿಜಕ್ಕೂ ಒಳ್ಳೆಯ ಬೆಳವಣಿಗೆ ಅಂತಾನೆ ಹೇಳಬಹುದು ಯಾಕೆಂದರೆ ನಮ್ಮ ಭಾಗಕ್ಕೂ ಸಿನಿಮಾ ರಂಗಕ್ಕೂ ಅಜಗಜಾಂತರ ದೂರ ಇದೆ ಅಂತ ಅನ್ಕೊಂಡಿದಾರೆ ಆದರೆ ಸಿನಿಮಾ ರಂಗ ಇವಾಗ ಹಳ್ಳಿಗಳ ಪ್ರತಿಭೆಗಳನ್ನು ಎತ್ತಿ ಮೆರೆಸುತ್ತಿದೆ ಚಿತ್ತಾಪುರ ತಾಲೂಕಿನ ನಾಲವಾರ ಸಮೀಪದ ಕೊಲ್ಲೂರು ಗ್ರಾಮದ ಯುವ ಪ್ರತಿಭೆ ರಾಜೇಂದ್ರ ಕೊಲ್ಲೂರು ಅವರು ನಿರ್ಮಾಪಕರಾಗಿ ಹಾಗೂ ನಾಯಕ ನಟರಾಗಿ ಅಭಿನಯಿಸಿದ ಮೊದಲ ಕಿರುಚಿತ್ರ ಇದಾಗಿದ್ದು,ಇವರ ಜೋಡಿಯಾಗಿ ನಾಯಕಿ ನಟಿಯಾಗಿರುವ ಯಾದಗಿರಿ ಹುಡುಗಿ ಲಕ್ಷ್ಮಿರವರು ಸಖತ್ ಅಭಿನಯದ ಮೂಲಕ ಜನರ ಮುಂದೆ ಬರಲಿದ್ದಾರೆ,ಯರಗೋಳ ಸಮೀಪದ ಮಲ್ಕಪ್ಪನಹಳ್ಳಿಯ ಯುವ ಪ್ರತಿಭೆ ಭೀಮರಾಯ ಮಲ್ಲಾರೆಡ್ಡಿಯವರು ಈ ಕಿರುಚಿತ್ರವನ್ನು ಡೈರೆಕ್ಷನ್, ಸಂಭಾಷಣೆ ಜೊತೆಗೆ ವಿಭಿನ್ನ ಪಾತ್ರದಲ್ಲಿ ನಟಿಸಿದ್ದಾರೆ,ಈ ಕಿರುಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ಉತ್ತರ ಕರ್ನಾಟಕದ ಪ್ರಸಿದ್ದ ಹಾಸ್ಯ ಕಲಾವಿದರು, ನಿರೂಪಕರು ಹಾಗೂ ಉತ್ತಮ ವಾಗ್ಮಿ ಯಾಗಿರುವ ನಮ್ಮ ರಾಯಚೂರಿನವರಾದ ಶ್ರೀ ದೇವರಾಜ್ ಯಲಿ ಅವರು ನಟಿಸಿ ಈ ಚಿತ್ರಕ್ಕೆ ಮೆರಗು ತಂದುಕೊಟ್ಟು ಈ ತಂಡಕ್ಕೆ ಬೆನ್ನೆಲುಬಾಗಿ ನಿಂತಿದ್ದಾರೆ.ದೇವರಾಜ ಚಿಗರಿ ಇಬ್ರಾಹಿಂಪೂರ, ಮಹಾದೇವ ನಾಲವಾರ,ಲಕ್ಷ್ಮೀಕಾಂತ ಅಂಬಿಗೇರ್ ನಾಲವಾರ,ಜಗನ್ನಾಥ ಸುಗಂಧಿ,ಚಂದಾಸ್ ಸನ್ನತಿ, ವಿಜಯ ದೂಗನೂರ ಅರಕೇರಾ ಬಿ ಹೀಗೆ ಅನೇಕ ಕಲಾವಿದರು ಈ ಕಿರುಚಿತ್ರದಲ್ಲಿ ಮಿಂಚಿದ್ದಾರೆ. ಈ ಕಿರುಚಿತ್ರವನ್ನು ನಮ್ಮಭಾಗದ ಪ್ರತಿಯೊಬ್ಬರು ನೋಡಬೇಕಾಗಿದೆ ಅದರ ಜೊತೆಗೆ ಬೇರೆಯವರಿಗೂ ತಿಳಿಸಿ ಈ ಹಳ್ಳಿ ಪ್ರತಿಭೆಗಳನ್ನು ಉನ್ನತ ಸ್ಥಾನಕ್ಕೆ ಬೆಳಸಬೇಕಾಗಿದೆ.
-ಕರುನಾಡ ಕಂದ
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
ಕರುನಾಡಕಂದ ಸುದ್ದಿಪತ್ರಿಕೆ ಮತ್ತು ಆನ್‌ಲೈನ್ ತಾಣದ "ಕರುನಾಡ ಕಂದ ಜನಜಾಗೃತಿ ವೇದಿಕೆಯ ವಿಶೇಷ ಪುಟಕ್ಕೆ ಭೇಟಿ ನೀಡಿ