ಮುಂಡಗೋಡ:ನಗರದಿಂದ ಹುಬ್ಬಳ್ಳಿಗೆ ತೆರಳುವ ಮಾರ್ಗದ ದೈವಜ್ಞ ಕಲ್ಯಾಣ ಮಂಟಪದ ರಸ್ತೆಯಿಂದ ಹಿಡಿದು ಅರಿಶಿಣಗೆರಿವರೆಗಿನ ರಾಜ್ಯ ಹೆದ್ದಾರಿ 69 ಅಪಾಯಕಾರಿ ರಸ್ತೆ ಗುಂಡಿಗಳಿಂದ ತೀವ್ರ ರೀತಿಯಲ್ಲಿ ಹಾಳಾಗಿದ್ದು,ವಾಹನ ಸವಾರರು ಜೀವ ಕೈಯಲ್ಲಿ ಹಿಡಿದು ಸಂಚರಿಸುವ ದುಸ್ಥಿತಿ ಬಂದೊದಗಿದೆ. ಬಾಚಣಕಿ ಜಲಾಶಯ ಬಳಿ ಇರುವ ತೋಟಗಾರಿಕೆ ಇಲಾಖೆ ಕ್ರಾಸ್ ಸಮೀಪ ಕೆಲವೇ ತಿಂಗಳ ಹಿಂದೆ ನಗರದ ಆಭರಣ ವರ್ತಕರೊಬ್ಬರು ಬೈಕ್ ಸ್ಕಿಡ್ ಆಗಿ ಬಿದ್ದು ಸಾವನ್ನಪ್ಪಿದ್ದರು,ಅದರಲ್ಲೂ ಬಾಚಣಕಿ ಗ್ರಾಮದ ಬಳಿಯ ಸೇತುವೆ ಕಳಪೆ ಕಾಮಗಾರಿಯಿಂದ ಕೂಡಿದ್ದಲ್ಲದೆ,ಸೇತುವೆಯ ಮೇಲೆ ದೊಡ್ಡ ದೊಡ್ಡ ಹೊಂಡಗಳು ಬಿದ್ದು ರಾತ್ರಿ ವೇಳೆ ಸಂಚರಿಸುವ ವಾಹನ ಗಳಿಗೆ ಉಪದ್ರವಕಾರಿಯಾಗಿದೆ ಇಷ್ಟಾದರೂ ಲೋಕೊಪಯೋಗಿ ಇಲಾಖೆ ರಸ್ತೆ ಗುಂಡಿ ಮುಚ್ಚಿ ಪರಿಸ್ಥಿತಿ ಸರಿ ಮಾಡುವ ಗೋಜಿಗೂ ಹೋಗದೆ, ಇನ್ನೊಬ್ಬರ ಬಲಿಗಾಗಿ ಕಾದು ಕುಂತತಿದೆ ಎಂದು ವಾಹನ ಸವಾರರು ಇಲಾಖೆಯ ನಿರ್ಲಕ್ಷ್ಯತನಕ್ಕೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.