ಬೀದರ್:ಸಿಎಂ ಕಪ್ 2023-24 ನೇ
ಸಾಲಿನ ವಿಭಾಗ ಮಟ್ಟದ ಬಾಕ್ಸಿಂಗ್ ಸ್ಪರ್ಧೆಯನ್ನು ಆಯೋಜಿಸಲಾಯಿತು.
ಆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ನಾಗರಾಜ್ ವರ್ಮಾ ರವರು ಗಳಿಸಿರುತ್ತಾರೆ (ವ್ಹೇಟ್ ಕೆಟಗಿರಿ 71ಕೆಜಿ ಟು 75 ಕೆಜಿ).
ಇವರು ರಾಜ್ಯಮಟ್ಟದ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಮೈಸೂರಿನಲ್ಲಿ ಭಾಗವಹಿಸಲಿದ್ದಾರೆ ಎಂದು ರಾಜಶೇಖರ್ ಕುಂಚೇರವರು ಜಿಲ್ಲಾ ತರಬೇತಿದಾರರು ಮಾಹಿತಿ ನೀಡಿದ್ದಾರೆ.
ನಾಗರಾಜ ವರ್ಮಾರವರು ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ರುದನೂರು ಗ್ರಾಮದ ನಿವಾಸಿ ಆಗಿರುತ್ತಾರೆ ಈ ಸಂದರ್ಭದಲ್ಲಿ ಜಿಲ್ಲಾಡಳಿತ ಜಿಲ್ಲಾ ಪಂಚಾಯತ್ ಬೀದರ್ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.
ವರದಿ:ಸಾಗರ್ ಪಡಸಲೆ
