ಯಾದಗಿರಿ:ದೇಶದ ಜನರಲ್ಲಿ ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸುವ ಉದ್ಧೇಶದಿಂದ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಕರೆಯಂತೆ “ಸ್ವಚ್ಛತೆಗಾಗಿ ಶ್ರಮದಾನ” ಕಾರ್ಯಕ್ರಮದ ಅಂಗವಾಗಿ ಮಕ್ಕಳಿಗೆ ಸ್ವಚ್ಛತೆಯ ಕುರಿತು ಅರಿವು ಮೂಡಿಸುವ ವಿನೂತನ ಪ್ರಯೋಗವನ್ನು ನಗರದ ಟ್ವಿಂಕಲ್ ಬೆಲ್ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿತ್ತು.
ಶಾಲೆಯ ಪೂರ್ವ ಪ್ರಾಥಮಿಕ ಹಂತದ ಚಿಣ್ಣರು ಉತ್ಸಾಹದಿಂದ ಈ ಪ್ರಕ್ರಿಯೆಯಲ್ಲಿ ಭಾಗವಹಿಸಿ,ಸ್ವಚ್ಚತೆಯ ಮಹತ್ವವನ್ನು ಅರಿಯುವ ಪ್ರಯತ್ನ ಮಾಡಿದರು.
ಶಾಲೆಯ ಸಂಸ್ಥಾಪಕರಾದ ವೆಂಕಟರೆಡ್ಡಿ ಪಾಟೀಲ ಕುರಿಹಾಳ,ಕಲ್ಯಾಣಿ ಪಾಟೀಲ ಹಾಗೂ ಶಾಲೆಯ ಶಿಕ್ಷಕರು ಪುಟಾಣಿಗಳಿಗೆ ವಿವಿಧ ಚಟುವಟಿಕೆಗಳ ಮೂಲಕ ಪ್ರಾಯೋಗಿಕವಾಗಿ ಸ್ವಚ್ಛತೆಯೇ ಸೇವೆ ಎನ್ನುವ ಪರಿಕಲ್ಪನೆ ಮೂಡಿಸುವಲ್ಲಿ ಯಶಸ್ವಿಯಾದರು.
ವರದಿ-ಶಿವರಾಜ್ ಸಾಹುಕಾರ
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
ಕರುನಾಡಕಂದ ಸುದ್ದಿಪತ್ರಿಕೆ ಮತ್ತು ಆನ್‌ಲೈನ್ ತಾಣದ "ಕರುನಾಡ ಕಂದ ಜನಜಾಗೃತಿ ವೇದಿಕೆಯ ವಿಶೇಷ ಪುಟಕ್ಕೆ ಭೇಟಿ ನೀಡಿ