ದೇಶದ ಭದ್ರತೆಯ ಬುನಾದಿಯ ಹಿಂಸೆಯನ್ನು
ತೊರೆದು ಅಹಿಂಸೆಯ ಮಾರ್ಗ ತೋರಿಸಿದರು
ನಾಡಿನ ಏಳಿಗೆಗಾಗಿ ಸತತ ಸ್ವತಂತ್ರದ ಚಳುವಳಿಯ
ಸತ್ಯದ ಹೋರಾಟಕ್ಕೆ ಸರಳ ಸಜ್ಜನಿಕೆಯ ಶ್ರೀಮಂತರು
ಕಾನೂನಿನ ಮೂಲಕ ಇಡೀ ದೇಶ ಗೆದ್ದರು ತಾತ//
ಹಗಲಿರಳು ಎನ್ನದೆ ತಮ್ಮ ಪ್ರಾಣದ ಹಂಗುತೊರೆದು ದುಡಿದರು ದೇಶದಲ್ಲಿನ ಶತ್ರುಗಳಿಗೆ ಮಣ್ಣುತಿನಿಸಿದರು
ಸತತ ಶತ್ರುಗಳಿಗೆ ಸಿಂಹಸ್ವಪ್ನವಾಗಿ ಕಾಡಿದ ರಾಷ್ಟ್ರಪಿತರು
ತಮ್ಮಗೆ ಬಾಪುಜಿ ಎನ್ನುವ ಹೆಸರಿನ ದೇಶ ಪ್ರೇಮಿಯಾದರು ಶಾಂತಿ ಸಮಾಧಾನದ ತ್ಯಾಗದವರು ಖಾದಿಭಂಡಾರಿ ತಾತ//
ಕೆಂಪು ಕೋತಿಗಳ ಮನಸು ಗೆದ್ದು
ಶಾಂತಿ ಸಮಾಧಾನದ ಅಜ್ಜನಾದರೂ
ಮುದ್ದು ಕಂದಮ್ಮಗಳಿಗೆ ಪ್ರೀತಿಯ ತಾತನಾಗಿದ್ದರು ಯುವಕರಿಗೆ ಶಾಂತಿಯ ಸಮಾಧಾನದ ದೂತರು
ಒಂದಲ್ಲ ಎರಡು ಕಪಾಳ ಮೋಕ್ಷ ಕಂಡವರು ತಾತ//
ಕೋಟಿ ಕೋಟಿ ಕಣ್ಣೀರು ವರಿಸಿದ
ದೇಶದ ಧೀಮಂತ ನಾಯಕರು
ಮೈಯಲ್ಲಿ ಶಾಂತಿಯರಕ್ಷಣಾ ಸಂಕೇತವಾದ
ಬಿಳಿಯಬಟ್ಟೆ ತೊಟ್ಟು ಕೈಯಲ್ಲಿ ಕೋಲೊಂದು
ಹಿಡಿದು ನಡೆದರು ಉಪ್ಪಿನ ಸತ್ಯಾಗ್ರಾದ ರೂವಾರಿ ತಾತರು//
ಗಂಟಾಗೋಷವಾಗಿ ಜಯಕಾರದೊಂದಿಗೆ
ಮಾಡು ಇಲ್ಲವೇ ಮಡಿ ಎನ್ನುವ ಸಂದೇಶಗೆ
ಭಾರತ ಮಾತೆಯಗೆ ಜಯವಾಗಲಿ ಎಂದು ಬಯಸಿದವರು ದೇಶ ತೊರೆದು ನಡೆಯಿರಿ ಎನ್ನುತ್ತಾ ಹಿಡಿದರು ಕೋಲು
ಹಳ್ಳಿಯೂ ದಿಲ್ಲಿಯಾಗಿ ಕನಸು ಕಂಡರು ತಾತರು//
-ಮಹಾಂತೇಶ ಖೈನೂರ