ಮುಂಡಗೋಡ : ಬೆಳಗಾವಿ ವಿಭಾಗ ಮಟ್ಟದ ಕ್ರೀಡಾಕೂಟಕ್ಕೆ ಶಿರಸಿ ಶೈಕ್ಷಣಿಕ ಜಿಲ್ಲಾ 14 ಮತ್ತು 17 ವಯೋಮಾನದ ಒಳಗಿನವರ ಕ್ರಿಕೆಟ್ ತಂಡಕ್ಕೆ ನಡೆದ ಆಯ್ಕೆಯಲ್ಲಿ ಮುಂಡಗೋಡ, ಶಿರಸಿ, ಮಳಗಿ ಯ ಆಟಗಾರರು ಆಯ್ಕೆ ಯಾಗಿದ್ದು, ಬೆಳಗಾವಿಯ ಮೊಡಲಗಿಯಲ್ಲಿ ನಡೆಯುವ ವಿಭಾಗ ಮಟ್ಟದ ಕ್ರಿಕೆಟ್ ಪಂದ್ಯಾವಳಿ ಯಲ್ಲಿ ಪಾಲ್ಗೊಳ್ಳುವ ಅವಕಾಶ ಪಡೆದಿದ್ದು ದಿನಾಂಕ 04/10/2023 ಮತ್ತು 05/10/2023 ರಂದು ಫ್ರೌಢ ಹಾಗೂ ಪ್ರಾಥಮಿಕ ಶಾಲೆಗಳ ಆಟಗಾರರು ಆಡಲಿದ್ದಾರೆ.DDPI ಬಸವರಾಜ್ ಹಾಗೂ ಜಿಲ್ಲಾ ದೈಹಿಕ ಶಿಕ್ಷಣ ಅಧಿಕಾರಿ ಗಳಾದ ಪ್ರಕಾಶ್ ತಾರಿಕೊಪ್ಪಾ ಮತ್ತು ಮುಂಡಗೋಡ ತಾಲೂಕಿನ ದೈಹಿಕ ಶಿಕ್ಷಣ ಅಧಿಕಾರಿ ಹನುಮಂತ ವಡ್ಡರ ಅವರು ತಂಡಕ್ಕೆ ಉತ್ತಮ ಪ್ರದರ್ಶನ ನೀಡುವoತೆ ಶುಭ ಹಾರೈಸಿದ್ದಾರೆ.
