ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ಹೋಬಳಿಯ ರಾರಾವಿ ಗ್ರಾಮದ (SWS) ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷರಾಗಿ ನಿರ್ಮಲಾ ಗಂಡ ಹೆಚ್.ನಾಗರಾಜ್ ಮತ್ತು ಸದಸ್ಯರುಗಳನ್ನು ಆಯ್ಕೆ ಮಾಡಾಲಾಯಿತು. ಪ್ರತಿ ಶಾಲೆ ಸರ್ವತೋಮುಖ ಅಭಿವೃದ್ಧಿ ಕಾಣಬೇಕಾದರ ಶಿಕ್ಷಕರು,ಮಕ್ಕಳ ಪ್ರಯತ್ನದ ಜತೆಗೆ ಎಸ್‌ಡಿಎಂಸಿ ಸಹಕಾರ ಬಹುಮುಖ್ಯವಾಗುತ್ತದೆ. ಸ್ಥಳೀಯವಾಗಿ ಶಾಲೆಗೆ ಅಗತ್ಯವಾಗಿರುವ ಬೇಕು ಬೇಡಗಳನ್ನು ಒದಗಿಸಿ,ಸಮಪರ್ಕವಾಗಿ ನಿರ್ವಹಿಸುವ ಹೊಣೆ ನಿಮ್ಮ ಮೇಲಿದೆ ಎಂದು ಎಸ್‌ಡಿಎಂಸಿ ಪದಾಧಿಕಾರಿಗಳ ಜವಾಬ್ದಾರಿಯನ್ನು ನೆನಪಿಸಿದರು.
ಸಿಆರ್‌ಪಿ ರಾಜಶೇಖರ ಮಾತನಾಡಿ,ಎಸ್‌ಡಿಎಂಸಿ ಸಹಕಾರದಿಂದ ಶಾಲೆಗಳು ಪ್ರಗತಿ ಕಾಣಲಿವೆ ಶಾಲಾ ಸಮುದಾಯವನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಜಾಣ್ಮೆ ಮುಖ್ಯಶಿಕ್ಷಕರಿಗೆ ಇರಬೇಕು ಎಂದರು ಬಳಿಕ ಸಂಪನ್ಮೂಲ ವ್ಯಕ್ತಿಗಳು ಎಸ್‌ಡಿಎಂಸಿ ಕಾರ್ಯಗಳು,ರಚನೆ ಹಾಗೂ ರೂಪುರೇಷೆಯನ್ನು ಕುರಿತು ಮಧ್ಯಾಹ್ನದ ಅವಧಿಯಲ್ಲಿ ಮನಮುಟ್ಟುವಂತೆ ತಿಳಿಸಿದರು.
ಇದೇ ವೇಳೆ SDMC ರಚನೆಯ ನೋಡೆಲ್ ಅಧಿಕಾರಿ ಗಜೇಂದ್ರ,ನಾಡಂಗಾ ಕ್ಲಸ್ಟರ್ CRP ರಾಮಚಂದ್ರ,ಮುಖ್ಯಶಿಕ್ಷಕರು ಮತ್ತು ಸಿಆರ್‌ಪಿ ಗಳಾದ ರಾಜಶೇಖರ,ಎಸ್‌ಡಿಎಂಸಿ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಹಾಜರಿದ್ದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.