ಚಾಮರಾಜನಗರ ಜಿಲ್ಲೆಯ ಹನೂರು ಸೂಳೇರಿಪಾಳ್ಯ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೂಳೇರಿಪಾಳ್ಯ ಹಾಗೂ ಕಾಂಚಹಳ್ಳಿ ಮದ್ಯೆ ಇರುವ ಸರ್ಕಾರಕ್ಕೆ ಸಂಬಂಧಪಟ್ಟ ಮೈಸೂರ್ ಸೇಲ್ಸ್ ಅಂಡ್ ಇಂಟರ್ನ್ಯಾಷನಲ್ ಸರ್ವಿಸಸ್ ಎಂಬ ಮಧ್ಯ ಮಳಿಗೆಯಲ್ಲಿ ನಿಗದಿತ ಬೆಲೆಗಿಂತ ಹೆಚ್ಚಿನ ಬೆಲೆಗೆ ಸಿಬ್ಬಂದಿ ಮದ್ಯವನ್ನು ಮಾರಾಟ ಮಾಡುತ್ತಿದ್ದು ದೂರು ನೀಡಲು ದೂರವಾಣಿ ಸಂಖ್ಯೆಯ ನಾಮಫಲಕ ಅಳವಡಿಸದೆ ಬಿಲ್ ಕೇಳಿದರೆ ಬಿಲ್ ಖಾಲಿಯಾಗಿದೆ ಎಂದು ಉಡಾಫೆ ಉತ್ತರ ಕೊಡುತ್ತಾ ಮತ್ತು ನಾನು ಈ ಮದ್ಯ ಮಳಿಗೆಗೆ ಸೇರಲು 1 ಲಕ್ಷವನ್ನು ಲಂಚವಾಗಿ ನೀಡಿದ್ದೇನೆ ಆದ್ದರಿಂದ ಬಿಲ್ ನೀಡಲಾಗುವುದಿಲ್ಲ ಎಂದು ಉತ್ತರ ನೀಡುತ್ತಿದ್ದು ಎಲ್ಲಾ ಮದ್ಯದ ಬೆಲೆಯೂ ನಿಗದಿತ ಬೆಲೆಗಿಂತ ಐದುರು ಹಾಗೂ
ಹತ್ತೂರು ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತಿದ್ದು ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಕಾನೂನು ಕ್ರಮ ಕೈಗೊಂಡು ಜನರಿಗೆ ನಿಗದಿತ ಬೆಲೆಯಲ್ಲಿ ಮದ್ಯ ದೊರಕಿಸಿಕೊಡಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ವರದಿ-ಪ್ರದೀಪ್ ಕುಮಾರ್ ಕೆ,ಕಾಂಚಳ್ಳಿ
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.