ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ಪಟ್ಟಣದ ಬಸವೇಶ್ವರ ದೇವಾಲಯ ಇಂಟರ್ನ್ಯಾಷನಲ್ ಸ್ಕೂಲ್ ಆವರಣದಲ್ಲಿ ನಡೆದ ಹಾನಗಲ್ಲ ಶ್ರೀ ಗುರು ಕುಮಾರೇಶ್ವರರ 156 ನೇ ಜಯಂತೋತ್ಸವ ಪ್ರಯುಕ್ತ ಹಮ್ಮಿಕೊಂಡಿದ್ದ ಕುಮಾರೇಶ್ವರರ ಜೀವನ ದರ್ಶನ ಪ್ರವಚನ ಕಾರ್ಯಕ್ರಮದಲ್ಲಿ ನರಸಲಗಿಯ ಯುವ ಕವಿ ಅಸ್ಲಂ ಶೇಖ ಗೆ ಶ್ರೀಶೈಲ ಪೀಠದ ಜಗದ್ಗುರು ಚನ್ನಬಸವ ಸಿದ್ದರಾಮ ಶಿವಾಚಾರ್ಯ ಮಹಾಸ್ವಾಮಿಗಳಿಂದ ಗೌರವಾಶೀರ್ವಾದ ನೀಡಲಾಯಿತು.ಬಸವನ ಬಾಗೇವಾಡಿಯ ವಿರಕ್ತಮಠದ ಮ ನಿ ಪ್ರ ಸಿದ್ಧಲಿಂಗ ಮಹಾಸ್ವಾಮಿಗಳ ಆಶೀರ್ವಾದೊಂದಿಗೆ ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತಿನ ವತಿಯಿಂದ ಆಯೋಸಜಿಲಾದ “ಕುಮಾರಪಾದ ಅಭಿಯಾನ”ದ ಕುಮಾರೇಶ್ವರರ ಕುರಿತ ಕವನ ರಚನೆ ಸ್ಪರ್ಧೆಯಲ್ಲಿ ಭಾಗವಹಿಸಿದ ಅಸ್ಲಂ ಶೇಖ ಹತ್ತು ಅತ್ಯುತ್ತಮ ಕವನ ರಚನಕಾರರಲ್ಲಿ ಒಬ್ಬರಾಗಿ ಪೂಜ್ಯರಿಂದ ಗೌರವಾಶೀರ್ವಾದ ಪಡೆದರು ಈ ಸ್ಪರ್ಧೆಯನ್ನು ಶೇಗುಣಸಿಯ ಶ್ರೀ ಮ ನಿ ಪ್ರ ಮಲ್ಲಿಕಾರ್ಜುನ ಮಹಾಸ್ವಾಮಿಗಳು ಮೌಲ್ಯ ಮಾಪನ ಮಾಡಿದ್ದು ಡಾ || ಮುರುಗೇಶ ಸಂಗಮ ವಿಜಯಪುರ,ಬೋರಮ್ಮ ಪತಂಗಿ ಕೊಲ್ಹಾರ,ಶಾಂತಾ ಚೌರಿ, ಬಸವನಬಾಗೇವಾಡಿ,ಅನ್ನಪೂರ್ಣ ಸಕ್ರೋಜಿ ಪುಣೆ, ಅಸ್ಲಂ ಶೇಖ್ ಸಾ||ನರಸಲಗಿ,ರುದ್ರಮ್ಮ ಈ ಅಮಲ್ಯಾಳ ಸಂಕನಾಳ,ರೇವಣಸಿದ್ಧಯ್ಯ ಎಸ್ ಹಿರೇಮಠ ಗುಲ್ಬರ್ಗ,ಕು ಜಗದೀಶ್ ಬಿರಾದಾರ ಮನಗೂಳಿ,ಸೂಗಮ್ಮ ಡಿ ಪಾಟೀಲ್ ಉತ್ನಾಳ, ಲಕ್ಷ್ಮೀ ಬಿದರಕುಂದಿ ಅಹೇರಿ ಇವರುಗಳು ಅತ್ಯುತ್ತಮ ಕವನ ರಚನಕಾರರೆಂದು ಗುರುತಿಸಲಾಯಿತು. ಕಚುಸಾಪ ಅಧ್ಯಕ್ಷ ಪ್ರಭಾಕರ್ ಖೇಡದ (ನಾಗವಾಡ) ಅಭಿಯಾನವನ್ನು ನಿರ್ವಹಿಸಿದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.