ವಿಜಯಪುರ: ಬಸವನ ಬಾಗೇವಾಡಿ ತಾಲ್ಲೂಕಿನ ಉಕ್ಕಲಿ ಗ್ರಾಮದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಗ್ರಾಮ ಘಟಕ ಹಾಗೂ ಯುವ ಮಿತ್ರರ ಸಂಯುಕ್ತಾಶ್ರಯದಲ್ಲಿ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರ ಅವರ ಸಹಯೋಗದಲ್ಲಿ ನಡೆದ ಸ್ವಯಂ ಪ್ರೇರಿತ ರಕ್ತದಾನ ಶಿಬಿರದಲ್ಲಿ ದಿವ್ಯ ಸಾನಿಧ್ಯವನ್ನು ವಹಿಸಿದ ಶ್ರೀ ಅಭಿನವ ಸಂಗನಬಸವ ಶಿವಾಚಾರ್ಯ ಮಹಾಸ್ವಾಮಿಗಳು ಹಿರೇಮಠ ಮನಗೂಳಿ ಅವರು ಮಾತನಾಡಿ ರಕ್ತದಾನ ಶಿಬಿರ ಅಮೂಲ್ಯವಾದದ್ದು ಜಗತ್ತು ಎಷ್ಟೇ ಮುಂದುವರೆದರೂ ರಕ್ತವನ್ನು ಕೃತಕವಾಗಿ ತಯಾರಿಸಲು ಸಾಧ್ಯವಿಲ್ಲ ಆದ ಕಾರಣ ರಕ್ತದಾನವೆನ್ನುವುದು ಒಂದು ಜೀವ ಉಳಿಸುವ ಕಾರ್ಯವಾಗಿದೆ ಎಂದು ಹೇಳಿದರು.
ಈ ಶಿಬಿರ ಕಾರ್ಯಕ್ರಮದಲ್ಲಿ ಗ್ರಾಮಸ್ಥರಾದ ಬಸಪ್ಪ ದೊಡಮನಿ,ಸೋಮು ಸಜ್ಜನ,ಗುಂಡು ಶಿಂಧೆ, ರಬ್ಬಾನಿ ಇನಾಮದಾರ,ಪ್ರಶಾಂತ ಬಡಿಗೇರ, ವಿಶ್ವನಾಥ ತಡಲಗಿ,ರಾಹುಲ ಕಲಗೊಂಡ, ಇಮ್ತಿಯಾಜ ಪಟೇಲ,ಮೈಬು ಕಲಾದಗಿ,ನಾಗು ಯಲಗಟ್ಟಿ,ಯಾಸಿನ ಕರೋಶಿ,ಡಾ.ಬಸವರಾಜ ಕಮದಾಳ,ಡಾ.ಶಿವಾನಂದ ಗುಂಡೊಳ್ಳಿ,ಸಂತೋಷ ಕಳಸಗೊಂಡ,ಸಂತೋಷ ಗಣಾಚಾರಿ,ವಿಶ್ವ ಹಿರೊಡಗಿ,ಸುನೀಲ ಶೇಳಕೆ ಹಾಗೂ ಗ್ರಾಮದ ಹಿರಿಯರು,ಯುವ ಮಿತ್ರರು,ಆಶಾ ಕಾರ್ಯಕರ್ತೆಯರು,ಸಿಬ್ಬಂದಿಗಳು ಉಪಸ್ಥಿತರಿದ್ದರು.ಶಿಬಿರದಲ್ಲಿ 30ಕ್ಕೂ ಹೆಚ್ಚು ಜನ ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡಿದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.