ಚಾಮರಾಜನಗರ ಹನೂರು ತಾಲ್ಲೂಕಿನ ಮಣಗಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೇರಿದ ಬೈರನತ್ತ ಗ್ರಾಮದಲ್ಲಿ ವಿಶ್ವಕರ್ಮ ದೇವರ ಭಾವಚಿತ್ರಕ್ಕೆ ವಿಶ್ವಕರ್ಮ ಜನಾಂಗದ ಮುಖಂಡರು ಮಹಿಳೆಯರು ಹಾಗೂ ಯುವಕರು ಪುಷ್ಪಾರ್ಚನೆ ನೆರವೇರಿಸಿ ಸಿಹಿ ಹಂಚಿ ಸಂಭ್ರಮಿಸಿದರು.ವಿಶ್ವಕರ್ಮ ನಿಗಮ ಮಂಡಳಿ ನಾಮ ನಿರ್ದೇಶಕ ಶ್ರೀನಿವಾಸ್ ರವರು ಮಾತನಾಡಿ ಅಮರ ಶಿಲ್ಪಿ ಜಕಣಾಚಾರಿ ಜಯಂತೋತ್ಸವನ್ನು ಮಾಜಿ ಮುಖ್ಯಮಂತ್ರಿ ಶ್ರೀ ಯಡಿಯೂರಪ್ಪನವರು ಅಧಿಕಾರ ಅವಧಿಯಲ್ಲಿ ಜಾರಿಗೆ ತಂದಿದ್ದರು ಸಿದ್ದರಾಮಯ್ಯನವರು ಮುಖ್ಯಮಂತ್ರಿ ಅಧಿಕಾರ ಅವಧಿಯಲ್ಲಿ ಆಗಿದ್ದ ಸಂದರ್ಭದಲ್ಲಿ ವಿಶ್ವಕರ್ಮ ನಿಗಮ ಮಂಡಳಿಯನ್ನು ಸ್ಥಾಪಿಸಿಕೊಟ್ಟಿದ್ದರು.ಪ್ರಧಾನಿ ನರೇಂದ್ರ ಮೋದಿಯವರು ನಮ್ಮ ದೇಶದಲ್ಲಿರುವ ವಿಶ್ವಕರ್ಮ ಜನಾಂಗದ ಕುಲ ಕಸುಬುಗಳಿಗೋಸ್ಕರ ವಿಶ್ವಕರ್ಮ ಯೋಜನೆ ಅಡಿಯಲ್ಲಿ ಒಂದು ಲಕ್ಷದವರೆಗೆ 30 ಪೈಸಾ ಬಡ್ಡಿ ದರದಲ್ಲಿ ನಮ್ಮ ಸಮುದಾಯ ಜನರ ಏಳಿಗೆಗಾಗಿ ಕಲ್ಪಿಸಿಕೊಟ್ಟಿದರು ಮತ್ತು ಇನ್ನೂ ಅನೇಕ ಸೌಲಭ್ಯಗಳನ್ನು ಕಲ್ಪಿಸಿ ಕೊಟ್ಟಿದ್ದರು ನಮ್ಮ ಸಮುದಾಯಗಳ ಸಾಮಾಜಿಕ, ಆರ್ಥಿಕ,ಶೈಕ್ಷಣಿಕ ಹಾಗೂ ಇನ್ನಿತರ ಸೌಲಭ್ಯಗಳನ್ನು ಕೊಡಿಸುವಲ್ಲಿ ಹಾಗೂ ನಮ್ಮ ಸಮುದಾಯದವರು ಮುಖ್ಯ ವಾಹಿನಿಗೆ ತರಲಿಕ್ಕೆ ಕರ್ನಾಟಕ ವಿಶ್ವಕರ್ಮ ಮಹಾಸಭಾ ಅಧ್ಯಕ್ಷರ ಕೆಪಿ ನಂಜುಂಡಿ ಅವರ ಪಾತ್ರ ಬಹಳ ಮುಖ್ಯವಾಗಿದ್ದು ಪ್ರತಿಯೊಂದು ಹಳ್ಳಿ ಹಳ್ಳಿಯಿಂದ ನಮ್ಮ ಸಮಾಜದ ಸಂಘಟನೆ ಹೆಚ್ಚು ಹೊತ್ತು ನೀಡುತ್ತಿದ್ದಾರೆ ನಮ್ಮ ಜನ ಕಷ್ಟ ಸುಖ ದುಃಖಗಳಿಗೆ ಭಾಗಿಯಾಗುತ್ತಿದ್ದಾರೆ ನಮ್ಮ ಮಕ್ಕಳ ವಿದ್ಯಾಭ್ಯಾಸ ಹೆಚ್ಚು ಹೊತ್ತು ನೀಡಿದ್ದಾರೆ ಎಂದರು ಇದೇ ಸಂದರ್ಭದಲ್ಲಿ ವಿಶ್ವಕರ್ಮ ಜನಾಂಗದ ಚಾಮರಾಜನಗರ ಜಿಲ್ಲೆ ಪ್ರಧಾನ ಕಾರ್ಯದರ್ಶಿ ಬೈರನತ್ತ ರಾಜಪ್ಪ ಮಣ ಗಳ್ಳಿ,ಗ್ರಾಮ ಪಂಚಾಯಿತಿ ಸದಸ್ಯರಾದ ಲತಾ ರಾಜಪ್ಪ ಚಾರಿ,ವಿಶ್ವಕರ್ಮ ಜನಾಂಗದ ಮುಖಂಡರುಗಳಾದ ಸಿದ್ದಾಚಾರಿ,ರಾಜಪ್ಪ ಚಾರಿ,ಮಹದೇವಪ್ಪ ಚಾರಿ,ಮಲ್ಲಪ್ಪ,ಸಿದ್ದಮಲ್ಲಪ್ಪ ಮಹಿಳೆಯರು ಯುವಕರು ಹಾಗೂ ಇನ್ನಿತರರು ಹಾಜರಿದ್ದರು.
ವರದಿ:ಉಸ್ಮಾನ್ ಖಾನ್
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.