ಮುಂಡಗೋಡ:ಶಿರಸಿಯ 1 ನೆಯ ಅಧಿಕ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಮುಂಡಗೋಡ ತಾಲೂಕಿನ ಟಿಬೆಟಿಯನ್ ಕ್ಯಾಂಪ್ ನಲ್ಲಿನ ಮನೆಯೊಂದರಲ್ಲಿ ಮಾರಕಾಸ್ತ್ರ ಗಳ ಸಮೇತ ಮನೆಗೆ ನುಗ್ಗಿ ದರೋಡೆ ಮಾಡಿದ್ದ ನಾಲ್ಕು ಜನ ಅಪರಾಧಿಗಳಿಗೆ 10 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ತಲಾ 15 ಸಾವಿರ ರೂಪಾಯಿ ಜುಲ್ಮಾನೆ ವಿಧಿಸಿ ತೀರ್ಪು ನೀಡಿದೆ.
ಏನಿದು ಪ್ರಕರಣ?
2019 ರ ಜನವರಿಯಲ್ಲಿ ಕ್ಯಾಂಪ್ ನಂಬರ್ ಒಂದರ ಜಾoಜ ಚುಪ್ ತೆಂಜಿಂಗ್ ಎಂಬುವವರ ಮನೆಗೆ ಮಾರಕಾಸ್ತ್ರಗಳಿಂದ ನುಗ್ಗಿದ ನಾಲ್ವರ ತಂಡ ಜಾoಜ ಚುಪ್ ತೆಂಜಿಂಗ್ ಅವರ ಕೈ ಬೆರಳಿಗೆ ಚಾಕು ಇರಿದು, 6 ಲಕ್ಷ ನಗದು,ಐಫೋನ್,ಸಿಸಿ ಟಿವಿ ಪ್ರೊಜೆಕ್ಟರ್,ಬಂಗಾರದ ಆಭರಣ ಹಾಗೂ ಸಿಸಿ ಟಿವಿಯ ಡಿವಿಆರ್ ಕಿತ್ತುಕೊಂಡು ಪರಾರಿಯಾಗಿದ್ದರು ಮುಂಡಗೋಡ ನಗರದಲ್ಲಿ ಭಾರಿ ಸಂಚಲನ ಮೂಡಿಸಿದ್ದ ಈ ದರೋಡೆ ಪ್ರಕರಣ
ಪೊಲೀಸ್ ಇಲಾಖೆಗೆ ಸವಾಲಾಗಿತ್ತು,ಆದರೂ ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಆರೋಪಿಗಳನ್ನು ಬಂದಿಸಿ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು ಶಿರಸಿಯ 1 ನೆಯ ಅಧಿಕ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ನ್ಯಾಯಾಧೀಶರು ಕಿರಣ್ ಕಿಣಿ ಅವರು ತೀರ್ಪು ನೀಡಿದ್ದಾರೆ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿ ರಾಜೇಶ್ ಮಳಗಿಕರ್ ವಾದ ಮಂಡಿಸಿದ್ದರು.