ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ರಾಮಪುರ ಗ್ರಾಮದ ಮಹದೇಶ್ವರ ಕಲ್ಯಾಣ ಮಂಟಪದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಗ್ರಾಮಾಭಿವದ್ಧಿ ಟ್ರಸ್ಟ್ ಹಾಗೂ ಪ್ರಗತಿ ಬಂಧು ಸ್ವಸಹಾಯ ಸಂಘಗಳ ವತಿಯಿಂದ ಆಯೋಜಿಸಲಾಗಿದ್ದ ಸಾಮೂಹಿಕ ಸತ್ಯನಾರಾಯಣ ಪೂಜಾ ಕಾರ್ಯಕ್ರಮವನ್ನು ಶಾಸಕ ಎಂ.ಆರ್ ಮಂಜುನಾಥ್ ರವರು ದೀಪ ಬೆಳಗಿಸುವುದರ ಮೂಲಕ ಭಾಗವಹಿಸಿದರು.
ನಂತರ ಮಾತನಾಡಿದ ಶಾಸಕ ಎಂ.ಆರ್.ಮಂಜುನಾಥ್ ಈ ಭಾಗದ ಹೆಣ್ಣುಮಕ್ಕಳು ತುಂಬಾ ಶ್ರಮ ಜೀವಿಗಳಾಗಿದ್ದೀರಿ ಮತ್ತು ದಿನನಿತ್ಯ ಕೂಲಿ ಕೆಲಸವನ್ನು ಮಾಡುತ್ತಾ ತಮ್ಮ ಮಕ್ಕಳ ವಿಧ್ಯಾಭ್ಯಾಸ ಮಾಡಿಸಲು ಇಲ್ಲಿನ ಹೆಣ್ಣು ಮಕ್ಕಳು ಬಹಳ ಕಷ್ಟವನ್ನು ಅನುಭವಿಸುತ್ತಿದ್ದಾರೆ ನಾನು ತಿಳಿದಿರುವ ಮಟ್ಟಿಗೆ ಈ ಬಾಗದ ಜನರು ಹಲವಾರು ಸಮಸ್ಯೆ ಗಳನ್ನು ಹಿಂದಿನ ದಿನಗಳಿಂದಲೂ ಸಹ ಮಳೆಯಾಗುತ್ತಿಲ್ಲ ಆದ್ದರಿಂದ ಇಲ್ಲಿನ ಜನಸಾಮಾನ್ಯರು ಅತೀ ಹೆಚ್ಚು ತೊಂದರೆಗಳನ್ನು ಅನುಭವಿಸುತ್ತಿದ್ದೀರಿ, ಇದೆಲ್ಲದಕ್ಕೂ ಒಂದು ಶಾಶ್ವತ ಪರಿಹಾರವನ್ನು ನೀಡುವುದೇ ನನ್ನ ಉದ್ದೇಶ ಎಂದರು.
ಅದೇ ರೀತಿ ಅಂತರ ರಾಜ್ಯದ ರಸ್ತೆಗಳ ಅಭಿವೃದ್ಧಿ ಪಡಿಸಿ ಆ ಭಾಗದಿಂದ ಈ ಭಾಗಕ್ಕೆ ಹೆಚ್ಚು ಒಡನಾಟ ಹೊಂದಲು ಸುಗಮವಾಗುವ ನಿಟ್ಟಿನಲ್ಲಿ ರಸ್ತೆಗಳು ಅಭಿವೃಧ್ದಿಯಾದರೆ ಮಾತ್ರ ಈ ಕೇತ್ರ ಅಭಿವೃದ್ಧಿ ಹೊಂದಲು ಸಾಧ್ಯ ಇದಕ್ಕೆ ಹೆಚ್ಚು ಒತ್ತು ಕೊಟ್ಟು ಕೆಲಸವನ್ನು ಮಾಡುವ ನಿಟ್ಟಿನಲ್ಲಿ ಕಾರ್ಯಕ್ರಮವನ್ನು ರೂಪಿಸಿಕೊಂಡಿದ್ದೇನೆ.
ಅದಲ್ಲದೆ ಸ್ವಸಹಾಯ ಸಂಘಗಳ ಮೂಲಕ ಸಾಲವನ್ನು ಪಡೆದುಕೊಂಡು ಅದನ್ನು ಕೂಲಿ ಮಾಡಿ ತೀರಿಸುವುದು ಎಷ್ಟು ಕಷ್ಟ ಎಂಬುದು ನನಗೆ ತಿಳಿದಿದೆ ಇದೆಲ್ಲವನ್ನೂ ಹೋಗಲಾಡಿಸಲು ನಿಮಗೆ ಆರ್ಥಿಕವಾಗಿ ನಿಮ್ಮ ಬದುಕನ್ನು ಕಟ್ಟಿಕೊಳ್ಳಲು ಉದ್ಯೋಗವನ್ನು ಕಲ್ಪಿಸುವುದರಿಂದ ನಿಮ್ಮ ಬದುಕನ್ನು ಕಟ್ಟಿಕೊಳ್ಳಲು ಸುಗಮವಾಗುತ್ತೆ ಎಂಬುದು ನನ್ನ ಉದ್ದೇಶವಾಗಿದೆ.
ಈ ಭಾಗದ ಜನರು ತಮ್ಮ ಜೀವನವನ್ನು ಕಟ್ಟಿಕೊಳ್ಳಲು ಜನರು ಬೇರೆ ಕಡೆಗೆ ವಲಸೆ ಹೋಗುತ್ತಿರುವುದನ್ನು ಕಾಣಬುದಾಗಿದೆ,ವಲಸೆ ಹೋದರು ನೆಮ್ಮದಿಯ ಜೀವನವನ್ನೂ ಕಟ್ಟಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂಬುದನ್ನು ತಿಸಿದರು ಅದೇ ರೀತಿ ಹನೂರು ಕ್ಷೇತ್ರ ಬೌಗೋಳಿಕವಾಗಿ ಅತಿ ಹೆಚ್ಚು ವಿಸ್ತೀರ್ಣ ಹೊಂದಿ ರುವಂತಹ ಕ್ಷೇತ್ರವಾಗಿದೆ.
ಇಲ್ಲಿಯ ಜನಸಾಮಾನ್ಯರಿಗೆ ಸರ್ಕಾರದ ಸವಲತ್ತುಗಳು ಸರಿಯಾದ ರೀತಿಯಲ್ಲಿ ತಲುಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಸಂಘದ ಜಿಲ್ಲಾ ನಿರ್ದೇಶಕರಾದ ಲತಾ ಬಂಗೇರ,ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ರಾಜೇಂದ್ರ,ಎಸ್.ಬಿ.ಐ ಬ್ಯಾಂಕ್ ಮ್ಯಾನೇಜರ್ ಅಜಿತ್,ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಅಧ್ಯಕ್ಷ ಮುತ್ತುರಾಜು ಹಾಗೂ ಗ್ರಾಮ ಪಂಚಾಯಿತಿ ಅಧ್ಯಕ್ಷ ರವಿ ಹಾಗೂ ಜೆಡಿಎಸ್ ಮುಖಂಡರುಗಳು ಉಪಸ್ಥಿತರಿದ್ದರು.
ವರದಿ:ಉಸ್ಮಾನ್ ಖಾನ್
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.