ಯಾದಗಿರಿ ಜಿಲ್ಲೆಯ ಸುರಪುರ ಅಖಿಲ ಭಾರತ ಕೃಷಿ ಕೂಲಿಕಾರರ ಸಂಘ ಎ.ಐ.ಎ.ಡಬ್ಲೂ.ಯು ಸಂಯೋಜಿತ ಗ್ರಾಮ ಘಟಕ ಏವೂರು ಇವರ ವತಿಯಿಂದ ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು,ಜಿಲ್ಲಾ ಪಂಚಾಯಿತಿ ಕಾರ್ಯಾಲಯ ಯಾದಗಿರಿ ಹಾಗೂ ಮಾನ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ತಾಲೂಕ ಪಂಚಾಯಿತಿ ಕಾರ್ಯಾಲಯ ಸುರಪುರ,ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಏವೂರು ಇವರ ಮುಖಾಂತರ ಉದ್ಯೋಗ ಖಾತ್ರಿ ಬಾಕಿ ಕೂಲಿಗಾಗಿ ಬರಗಾಲ ನಿಮಿತ್ತ 200 ದಿನಗಳ ಕೆಲಸ ಮತ್ತು 600 ರೂ ಪ್ರತಿ ದಿನ ಕೂಲಿಗಾಗಿ ಒತ್ತಾಯಿಸಿ ಧರಣಿ ನಡೆಸಿದರು.
ಮಳೆಯ ಕೊರತೆಯಿಂದ ರಾಷ್ಟ್ರ ಮತ್ತು ರಾಜ್ಯವು ಎಂದೂ ಕಂಡರಿಯದ ಬರಕ್ಕೆ ಸಿಲುಕಿದ್ದು,ಕೃಷಿ ಕೂಲಿಕಾರರು,ಇತರೆ ಗ್ರಾಮೀಣ ದುಡಿಮೆದಾರರು, ಬಡ ರೈತರು,ದಿಕ್ಕು ಪಾಲಾಗುತ್ತಿದ್ದಾರೆ.ಅತ್ತ ಕೇಂದ್ರ ಸರ್ಕಾರ ಉದ್ಯೋಗ ಖಾತ್ರಿಗೆ ನೀಡುತ್ತಿದ್ದ ಅನುದಾನವನ್ನು ನಿರಂತರವಾಗಿ ಕಡಿತ ಮಾಡುತ್ತಾ ಬರುತ್ತಿದೆ ಜೀವನಾವಶ್ಯಕ ವಸ್ತುಗಳ ಬೆಲೆ ಹೆಚ್ಚಾಗಿ ಕೂಲಿಕಾರರಕೊಳ್ಳುವ ಶಕ್ತಿ ತೀವ್ರ ಕುಸಿದಿದೆ. ಪರಿಣಾಮವಾಗಿ ಹಸಿವಿನ ಸಾವುಗಳು, ಆತ್ಮಹತ್ಯೆಯ ಹೆಚ್ಚಾಗುವ ಸನ್ನಿವೇಶ ಸೃಷ್ಠಿಯಾಗುತ್ತಿದೆ.ಇದನ್ನು ತಡೆಯಲು ರಾಜ್ಯ ಸರ್ಕಾರಗಳು ಮುಂದಾಗಬೇಕು ಈ ಹಿನ್ನೆಲೆಯಲ್ಲಿ ಅಖಿಲ ಭಾರತ ಕೃಷಿ ಕೂಲಿಕಾರರ ಸಂಘದ ಕೇಂದ್ರ ಸಮಿತಿಯು ಉದ್ಯೋಗ ಖಾತ್ರಿ ಕಾಯ್ದೆಯ ಬೇಡಿಕೆ ದಿನ ಆಚರಿಸಿ,ಅಕ್ಟೋಬರ್ 11 ರಂದು ಇಡೀ ದೇಶಾದ್ಯಂತ ಈ ಕಾಯ್ದೆಯ ಸಮರ್ಪಕ ಜಾರಿಗಾಗಿ ಹೋರಾಟಗಳನ್ನು ನಡೆಸುತ್ತಿದೆ ಈ ಕೆಳಕಂಡ ಬೇಡಿಕೆಗಳನ್ನು ಬಗೆಹರಿಸಲು ಸಂಘವು ಒತ್ತಾಯಿಸುತ್ತದೆ.
ಪ್ರತಿಭಟನೆಕಾರರ ಬೇಡಿಕೆಗಳು
1)ಬರಕ್ಕೆ ತುತ್ತಾಗಿರುವ ಕೂಲಿಕಾರರಿಗೆ 200 ದಿನಗಳ ಕೆಲಸ ಮತ್ತು 600 ರೂ.ಕೂಲಿ ನೀಡಬೇಕು.
2)ಉಳಿಸಿಕೊಂಡಿರುವ ಬಾಕಿ ಕೂಲಿಯನ್ನು ಇಂದೇ ಪಾವತಿಸಿ ನಾಳೆಯಿಂದ ಕೆಲಸ ನೀಡಬೇಕು.
3)ಗುತ್ತಿಗೆದಾರರಿಂದ ಉದ್ಯೋಗ ಖಾತ್ರಿ ರಕ್ಷಿಸಿ ಯಂತ್ರದ ಹಾವಳಿಯನ್ನು ತಪ್ಪಿಸಬೇಕು. ಕೂಲಿಕಾರರ ಆರ್ಥಿಕ ಸ್ವಾವಲಂಬನೆಗೆ ಒತ್ತು ನೀಡಬೇಕು.
4)ನಗರ ಪ್ರದೇಶಕ್ಕೂ ಉದ್ಯೋಗ ಖಾತ್ರಿ ವಿಸ್ತರಿಸಬೇಕು ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಏವೂರ
ಈ ಪ್ರತಿಭಟನೆ ಸಂದರ್ಭದಲ್ಲಿ ಘಟಕ ಅಧ್ಯಕ್ಷರಾದ ಬಸವರಾಜ್ ದೇಸಾಯಿ,ಶಾಂತಯ್ಯ ಗುತ್ತೇದಾರ್, ಬಂದೇ ನವಾಜ್,ಮೌಲಾಲಿ ಸಾಬ್ ಹಾಗೂ ಏವೂರು ಊರಿನ ಗ್ರಾಮಸ್ಥರು ಮತ್ತು ನಾಗರಿಕರು ಕೂಲಿಕಾರರ ಭಾಗವಹಿಸಿದ್ದರು.
ವರದಿ ರಾಜಶೇಖರ ಮಾಲಿ ಪಾಟೀಲ್