ಮುಂಡಗೋಡ:ನಗರದ ತಾಲೂಕ ಕ್ರೀಡಾಂಗಣ ದಲ್ಲಿ ಪ್ರತಿ ವರ್ಷ ಶಾಲಾ ಕ್ರೀಡಾಕೂಟಗಳು ಶಾಲಾ ಮಟ್ಟ,ತಾಲೂಕ,ಜಿಲ್ಲಾ,ವಿಭಾಗ ಮಟ್ಟದಲ್ಲಿ ಮತ್ತು ದಸರಾ ಕ್ರೀಡಾಕೂಟದ ವಿಭಾಗ ಮಟ್ಟದಲ್ಲಿ ನಡೆಯುತ್ತದೆ,ಆದರೆ ಕ್ರೀಡಾಂಗಣದಲ್ಲಿ ಮೂಲಭೂತ ಸೌಕರ್ಯವಾದ ಶೌಚಾಲಯ ವ್ಯವಸ್ಥೆ ಇಲ್ಲದಿರುವುದು ನಿಜಕ್ಕೂ ಕ್ರೀಡಾಪಟುಗಳಿಗೆ ಹಾಗೂ ಮಕ್ಕಳನ್ನು ಕರೆದು ಕೊಂಡು ಬರುವ ಶಿಕ್ಷಕರಿಗೆ ಹಾಗೂ ಪೋಷಕರಿಗೆ ತೀವ್ರ ಕಿರಿಕಿರಿಯಾಗಿದೆ ಆಟಗಾರರು ಬಹಿರ್ದೆಸೆಗೆ ತೆರಳಬೇಕು ಎಂದರೆ ಪಟ್ಟಣ ಪಂಚಾಯ್ತಿ ಕಚೇರಿ ಬಳಿ ಇರುವ ಶೌಚಾಲಯಕ್ಕೆ ಹೋಗಬೇಕು,ಅದು ಸುಮಾರು ಅರ್ಧ ಕಿಲೋ ಮೀಟರ್ ಇದೆ ಇದರಿಂದ ಮಕ್ಕಳಿಗೆ ತೀವ್ರ ಮುಜುಗರವಾಗುತ್ತದೆ ಹಾಗೂ ಸ್ವಾತಂತ್ರ್ಯೋತ್ಸವ ಹಾಗೂ ರಾಷ್ಟ್ರೀಯ ಹಬ್ಬಗಳಂದು ಕ್ರೀಡಾಂಗಣಕ್ಕೆ ಬರುವ ಅಧಿಕಾರಿಗಳು ಹಾಗೂ ರಾಜಕಾರಣಿಗಳು ಮತ್ತು ಶಿಕ್ಷಕರು,ಪೊಲೀಸರು ಹಾಗೂ ಎಲ್ಲರಿಗೂ ಇಂತಹ ಸಮಯದಲ್ಲಿ ಶೌಚಾಲಯ ಇಲ್ಲದೆ ತೊಂದರೆ ಆಗಿದೆ.
ಶೌಚಾಲಯ ಇದ್ದರೂ ಬಳಕೆಗೆ ನೀಡುತ್ತಿಲ್ಲ:
ತಾಲೂಕ ಕ್ರೀಡಾಂಗಣದ ಜಿಮ್ ಕೆಳಗೆ ಇರುವ ಕೊಠಡಿಗಳಲ್ಲಿ ಸುಸಜ್ಜಿತ ಶೌಚಾಲಯ ಇದ್ದರೂ ಅದಕ್ಕೆ ಒಂದು ವಾಟರ್ ಟ್ಯಾಂಕ್ ಕನೆಕ್ಷನ್ ಮಾಡಿಸಿ ಅದನ್ನು ಬಳಕೆಗೆ ನೀಡಿ ಎಂದರೂ ಕೂಡಾ ಕ್ರೀಡಾಂಗಣ ಅಧಿಕಾರಿಗಳು ನೀಡುತ್ತಿಲ್ಲ ಎಂದು ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಹಾಗೂ ಪ್ರತಿನಿತ್ಯ ಬೆಳಿಗ್ಗೆ ಕ್ರೀಡಾಂಗಣಕ್ಕೆ ತರಬೇತಿಗೆ ಬರುವ ರನ್ನಿಂಗ್,ಕ್ರಿಕೆಟ್,ಆಟಗಾರರು ಹಾಗೂ ವಾಯುವಿಹಾರ ಮಾಡುವ ಹಿರಿಯ ನಾಗರಿಕರು ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ಒತ್ತಾಯ ಮಾಡುತ್ತಿದ್ದಾರೆ.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.