ವಿಜಯನಗರ ಜಿಲ್ಲೆ ಕೊಟ್ಟೂರು ತಾಲೂಕಿನ ಕಾಳಾಪುರ ಗ್ರಾಮ ಪಂಚಾಯತಿಯ ಎರಡನೇ ಅವಧಿ ಅಧ್ಯಕ್ಷ ಹಾಗು ಉಪಾಧ್ಯಕ್ಷರ ಚುನಾವಣೆಯನ್ನು ಚುನಾವಣಾ ಅಧಿಕಾರಿಯಾದ ಜಗದೀಶ ದಿಗಡೂರ್ ಸಮಾಜ ಕಲ್ಯಾಣ ಇಲಾಖೆ ಕೂಡ್ಲಿಗಿ ಇವರ ನೇತೃತ್ವದಲ್ಲಿ ಚುನಾವಣೆ ನಡೆಸಲಾಯಿತು.
ಈ ಗ್ರಾಮ ಪಂಚಾಯತಿಯ ಒಟ್ಟು 14 ಜನ ಸದಸ್ಯರಿದ್ದು ಈ ಎರಡನೇ ಅವಧಿ ಚುನಾವಣೆಯಲ್ಲಿ 11 ಜನ ಸದಸ್ಯರು ಮಾತ್ರ ಹಾಜರಿದ್ದರು.
ಈ ಚುನಾವಣೆಯಲ್ಲಿ ನೂತನ ಅಧ್ಯಕ್ಷರಾಗಿ ಬುಳ್ಳವರ್ ಸುರೇಶ ಮತ್ತು
ಉಪಾಧ್ಯಕ್ಷರಾಗಿ ಟಿ.ಕೊಟ್ರಮ್ಮ ಗಂಡ ಚೌಡಪ್ಪ, ಅವಿರೋಧವಾಗಿ ಆಯ್ಕೆಯಾದರು.
ಈ ಸಂಧರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷರಾದ ಮಲ್ಲನಾಯಕನಹಳ್ಳಿ ದೊಡ್ಡರಾಮಣ್ಣ ಹಾಗೂ ನಾಗರಕಟ್ಟಿ ಬಣಕಾರ ಕೊಟ್ರೇಶಪ್ಪರವರು ನೂತನ ಅದ್ಯಕ್ಷರಿಗೆ ಹಾಗೂ ಉಪಾಧ್ಯಕ್ಷರಿಗೆ ಸನ್ಮಾನ ಮಾಡುವುದರ ಮೂಲಕ ಅಭಿನಂದನೆ ಸಲ್ಲಿಸಿದರು.
ನಂತರ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷರಾದ ಬುಳ್ಳವರ್ ಸುರೇಶ್ ರವರು ಗ್ರಾಮ ಪಂಚಾಯಿತಿ ಎಲ್ಲಾ ಸದಸ್ಯರಿಗೆ ಹಾಗೂ ಗ್ರಾಮದ ಮುಖಂಡರುಗಳಿಗೆ ಅಭಿನಂದನೆ ಸಲ್ಲಿಸಿದರು.
ಈ ಸಂಧರ್ಭದಲ್ಲಿ ಗ್ರಾಮ ಪಂಚಾಯತಿ ಅಭಿವೃಧ್ದಿ ಅಧಿಕಾರಿಗಳಾದ ಲತಾಬಾಯಿ ಗ್ರಾಮ ಪಂಚಾಯತಿ ಸಿಬ್ಬಂದಿ ಉಜ್ಜಿನಿ ಉಪ ವಿಭಾಗ ಪೋಲಿಸ್ ಠಾಣೆ ಪಿ ಎಸ್ ಐ,ಮಲಿಕ್ ಸಾಹೇಬ್ ಪೋಲಿಸ್ ಸಿಬ್ಬಂದಿ ಹಾಗೂ ಮುಖಂಡರುಗಳಾದ ವಡ್ಡರಹಳ್ಳಿ ಕಲ್ಲೇಶಿ,ಒಣ್ಣಿಕೇರಿ ಮಂಜುನಾಥ,ವಿ.ಲೋಕಪ್ಪ,ಬೀಡಗುಡ್ಡದ ತಿಮ್ಮಣ್ಣ, ಎಂ.ಉಜ್ಜಿನಪ್ಪ,ಬಂಗಾರಿ ವೀರೇಶಿ,ಎಸ್.ಟಿ.ಡಿ. ತಿಮ್ಮಣ್ಣ,ಡಾಕ್ಟರ್ ವೆಂಕಟೇಶಿ,ಬಿ ರೇವಣಸಿದ್ದಪ್ಪ, ಶೆಟ್ಟಿ ಪ್ರಕಾಶ,ಬೋರ ಮಂಜಣ್ಣ,ಬೀಡಗುಡ್ಡದ ಹುಲಗಪ್ಪ,ದುರ್ಗಾ ದಾಸ್,ಪರುಶುರಾಮ ಉಪಸ್ಥಿತರಿದ್ದರು.
ವರದಿ-ಬಿ.ಮಾರುತಿ
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.