ಗದಗ ಜಿಲ್ಲೆಯ ಗ್ರಾಮ ಡಿಜಿ ವಿಕಸನ ಕಾರ್ಯಕ್ರಮದ ಜಿಲ್ಲಾ ಹಂತದ ಸ್ಟಿರಿಂಗ್ ಕಮಿಟಿ ಸಭೆ ಹಾಗೂ ಲ್ಯಾಪಟಾಪ್ ವಿತರಣೆ ಕಾರ್ಯಕ್ರಮ ನೆರವೇರಿತು.
ದಿ 18/10/2023 ರಂದು ಮಾನ್ಯ ಜಿಲ್ಲಾಧಿಕಾರಿಗಳ ಕೋರ್ಟ್ ಹಾಲ್ ನಲ್ಲಿ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ,ಶಿಕ್ಷಣ ಫೌಂಡೇಶನ್ ಹಾಗೂ ಡೆಲ್ ಸಂಸ್ಥೆಯ ಸಹಭಾಗಿತ್ವದಲ್ಲಿ ಗದಗ ಜಿಲ್ಲೆಯಲ್ಲಿ 59 ಗ್ರಂಥಾಲಯಗಳಲ್ಲಿ ನಡೆಯುತ್ತಿರುವ ಗ್ರಾಮ ಡಿಜಿ ವಿಕಸನ ಕಾರ್ಯಕ್ರಮದ ಜಿಲ್ಲಾ ಹಂತದ ಸ್ಟಿರಿಂಗ್ ಕಮೀಟಿ ಸಭೆಯನ್ನು ಮಾನ್ಯ ಶ್ರೀ ಡಿ.ಎಸ್.ಮುಂಡರಗಿ ಉಪ ಕಾರ್ಯದರ್ಶಿಗಳು ಜಿಲ್ಲಾ ಪಂಚಾಯತ್ ಗದಗ ಇವರ ಉಪಸ್ಥಿತಿಯಲ್ಲಿ ಆಯೋಜನೆ ಮಾಡಿ ಆಯ್ದ ಗ್ರಂಥಾಲಯಗಳಿಗೆ ಗ್ರಾಮ ಡಿಜಿ ವಿಕಸನ ಕಾರ್ಯಕ್ರಮದ ಅಡಿಯಲ್ಲಿ ಲ್ಯಾಪ್ ಟಾಪ್ ವಿತರಣೆ ಮಾಡಲಾಯಿತು ಸಭೆಯಲ್ಲಿ ಜಿಲ್ಲಾ ಕೆಂದ್ರ ಗ್ರಂಥಾಲಯ ಮುಖ್ಯ ಅಧಿಕಾರಿಗಳಾದ ಶ್ರೀ ಮತಿ ವೆಂಕಟೇಶ್ವರಿ ಜಿ ಎಸ್ ಅವರು ಸ್ಟಿರಿಂಗ್ ಕಮೀಟಿಯ ರಚನೆಯ ಉದ್ದೇಶ ಹಾಗೂ ಕಾರ್ಯಗಳ ಕುರಿತು ಮಾಹಿತಿ ಹಂಚಿಕೊಂಡರು. ಗ್ರಾಮ ಡಿಜಿ ವಿಕಸನ ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕವಾಗಿ ಸುರೇಶ ಗುಡದಾರ (ಶಿಕ್ಷಣ ಫೌಂಡೇಶನ್ ಜೊನಲ್ ಮ್ಯಾನೇಜರ್ ಮಾತನಾಡಿದರು ಗದಗ ಜಿಲ್ಲೆಯ ಗ್ರಾಮ ಡಿಜಿ ವಿಕಸನ ಕಾರ್ಯಕ್ರಮ ಜಿಲ್ಲಾ ಸಂಯೋಜಕರಾದ ಶ್ರೀ ಯಲ್ಲಪ್ಪ ಸಾಳುಂಕೆ ಇವರು ಶಿಕ್ಷಣ ಫೌಂಡೇಶನ್ ಹಿನ್ನೆಲೆ ಗ್ರಾಮ ಡಿಜಿ ವಿಕಸನ ಕಾರ್ಯಕ್ರಮದ ಜಿಲ್ಲೆಯ ಗ್ರಂಥಾಲಯಗಳ ಪ್ರಗತಿಯ,ಅಂಕಿ ಅಂಶಗಳ ಕುರಿತು ಮಾಹಿತಿ ಹಂಚಿಕೊಂಡರು.ಈ ಸಭೆಯಲ್ಲಿ ಜಿಲ್ಲಾ ಪಂಚಾಯತಿಯ ಯೋಜನಾ ನಿರ್ದೇಶಕರು ಶಿಕ್ಷಣ ಇಲಾಖೆಯ ಅಧಿಕಾರಿಗಳು,ಆಯ್ದ ಗ್ರಂಥಾಲಯಗಳ ಪಿಡಿಓರವರು 50ಗ್ರಂಥಾಲಯ ಮೇಲ್ವಿಚಾರಕರು ಪ್ರೇರಣಾ ಕಾರ್ಯಕ್ರಮದ ಜಿಲ್ಲಾ ತಿಮ್ಮೇಶ್ ಹಾಗೂ ಗ್ರಾಮ ಡಿಜಿ ವಿಕಸನ ಕಾರ್ಯಕ್ರಮದ ತಾಲೂಕ ಸಂಯೋಜಕರಾದ ಚೇತನ್ ರವರು ಭಾಗವಹಿಸಿದ್ದರು.
ವರದಿ-ನಾಗರಾಜ ಪ್ರಚಂಡಿ
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.