ಬಸವನಬಾಗೇವಾಡಿ:ತಾಲೂಕಿನ ಯರನಾಳ ಗ್ರಾಮದಲ್ಲಿ ನಡೆಯುತ್ತಿರುವ ಬಸವನಬಾಗೇವಾಡಿಯ ಅಕ್ಕ ನಾಗಮ್ಮ ಸರಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯರ ರಾಷ್ಟ್ರೀಯ ಸೇವಾ ರೋಜನೆಯ ವಾರ್ಷಿಕ ವಿಶೇಷ ಶಿಬಿರದ ಉಪನ್ಯಾಸ ಕಾರ್ಯಕ್ರಮದಲ್ಲಿ “ಇಂದಿನ ಜಗತ್ತಿನಲ್ಲಿ ಶಿಕ್ಷಣದ ಮಹತ್ವ ಮತ್ತು ಸಂಸ್ಕೃತಿ” ಎಂಬ ವಿಷಯದ ಮೇಲೆ ಕರುನಾಡು ಸಾಹಿತ್ಯ ಪರಿಷತ್ತಿನ ವಿಜಯಪುರ ಜಿಲ್ಲಾಧ್ಯಕ್ಷ ಅಸ್ಲಂ ಶೇಖ್ ನರಸಲಗಿ ಉಪನ್ಯಾಸ ನೀಡಿದರು.ಶಿಕ್ಷಣವು ಸಾಮಾಜಿಕ ಪಿಡುಗಗಳ ವಿರುದ್ಧ ಹೋರಾಡುವುದನ್ನು ಕಲಿಸಬೇಕು,ಯಾವುದೇ ವ್ಯಕ್ತಿ ಓದಿ ಉನ್ನತ ಹುದ್ದೆ ಗಿಟ್ಟಿಸಿಕೊಂಡರೂ ಅವನು ಭ್ರಷ್ಟನಾದರೆ ಅವನು ಪಡೆದ ಶಿಕ್ಷಣ ವ್ಯರ್ಥ,ಒಬ್ಬ ಯಶಸ್ವಿ ವ್ಯಕ್ತಿಯಾಗಲು ಕಠಿಣ ಪರಿಶ್ರಮದ ಜೊತೆಗೆ ಉತ್ತಮ ಸಂಸ್ಕಾರವೂ ಅಗತ್ಯ,ಸಮಾಜ ಸುಧಾರಣೆ ಶಿಕ್ಷಣದಿಂದ ಮಾತ್ರ ಸಾಧ್ಯ ವಿಜ್ಞಾನಕ್ಕೆ ಹಾನಿಯಾಗದ ಅಥವಾ ಯಾರಿಗೂ ಮಾನಸಿಕವಾಗಿ,ಭೌತಿಕವಾಗಿ ಮತ್ತು ಆರ್ಥಿಕವಾಗಿ ತೊಂದರೆ ಕೊಡದ ಆಚರಣೆ ಮೌಢ್ಯವಲ್ಲ,ನಮ್ಮ ಸಂಸ್ಕೃತಿ,ಪರಂಪರೆ ಮುಂದುವರೆಯಬೇಕು ಆದರೆ ಒಬ್ಬರಿಗೆ ನೋವು ಕೊಡುವ ಆಚರಣೆ ನಿಲ್ಲಿಸಬೇಕು, ಯೋಗ,ಧ್ಯಾನ,ಪ್ರಾರ್ಥನೆಗಳನ್ನು ನಮ್ಮ ಜೀವನದಲ್ಲಿ ರೂಢಿಸಿಕೊಳ್ಳಬೇಕು ಎಂದರು.
ಇದೇ ವಿಷಯದ ಕುರಿತು ಬಸನವನಬಾಗೇವಾಡಿಯ ಬಿ ಎಲ್ ಡಿ ಇ ಕಾಲೇಜಿನ ಉಪನ್ಯಾಸಕಿ ಅರ್ಚನಾ ದಂಡಾವತಿ ಮಾತನಾಡಿದರು ಒಬ್ಬ ವ್ಯಕ್ತಿ ಶಿಕ್ಷಣದಿಂದ ಮಾತ್ರ ಯಶಸ್ವಿಯಾಗಲು ಸಾಧ್ಯ,ಸಾಕ್ಷರತಾ ಪ್ರಮಾಣ ಹೆಚ್ಚಿಸಲು ಸರ್ಕಾರ ಅನೇಕ ಯೋಜನೆಗಳನ್ನು ಹಾಕಿಕೊಂಡಿದೆ,ಸರ್ವ ಶಿಕ್ಷಣ ಅಭಿಯಾನ,ಮರಳಿ ಬಾ ಶಾಲೆಗೆ ಸಮುದಾಯದತ್ತ ಶಾಲೆ ಯೋಜನೆಗಳು ಶಿಕ್ಷಣ ಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿವೆ, ಅನಕ್ಷರಸ್ಥ ಪಾಲಕರು ತಮ್ಮ ಮಕ್ಕಳು ಶಿಕ್ಷಿತರಾಗಬೇಕೆಂದು ಬಯಸುತ್ತಿದ್ದಾರೆ ಶಿಕ್ಷಣ ಎಷ್ಟು ಮುಖ್ಯವೋ ಅಷ್ಟೇ ಮುಖ್ಯವಾಗಿ ಸಂಸ್ಕಾರವೂ ಬೇಕು ಎಂದರು.
ಶಿಬಿರಾಧ್ಯಕ್ಷ ಎಂ ಬಿ ವಗ್ಗರ ಮಾತನಾಡಿ ಉಪನ್ಯಾಸ ಹಾಗೂ ಗೀತಗಾಯನ ಕಾರ್ಯಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು ನಿಡಗುಂದಿಯ ಬಿ.ಎಂ.ಎಸ್ ಶಾಲೆಯ ಸಂಗೀತ ಶಿಕ್ಷಕ ಮಲ್ಲು ಗದ್ದಿ ವಚನ,ಜಾನಪದ ಹಾಗೂ ಭಾವಗೀತೆಗಳನ್ನು ಹಾಡಿ ಶಿಬಿರಾರ್ಥಿಗಳನ್ನು ರಂಜಿಸಿದರು.ಲಕ್ಷ್ಮಣ್ ಸುಭಾನಪ್ಪರ ಒಗಟು ಪ್ರಶ್ನೆಗಳನ್ನು ಕೇಳಿ ರಂಜಿಸಿದರು ಹಿರಿಯ ಉಪನ್ಯಾಸಕರಾದ ಜಿ.ಬಿ.ಹಿರೇಮಠ ಗುರುಗಳು,ಕರುನಾಡು ಸಾಹಿತ್ಯ ಪರಿಷತ್ತಿನ ಬಸವನಬಾಗೇವಾಡಿ ತಾಲೂಕಾ ಉಪಾಧ್ಯಕ್ಷೆ ಲಕ್ಷ್ಮೀ ಕಳ್ಳಿಗುಡ್ಡ ಉಪಸ್ಥಿತರಿದ್ದರು. ಶಿಬಿರಾರ್ಥಿಗಳು ಉಪನ್ಯಾಸಕರಿಗೆ ಅತಿಥಿಗಳಿಗೆ ಸನ್ಮಾಸಿದರು ಯರನಾಳ ಗ್ರಾಮದ ನಾಗರಿಕರು, ವಿದ್ಯಾರ್ಥಿಗಳು ಹಾಜರಿದ್ದರು.ಶಿಬಿರಾರ್ಥಿಗಳಾದ ಬೋರಮ್ಮ ಬಾಗೇವಾಡಿ ನಿರೂಪಿಸಿದರು.ರಜನಿ ಬೆಲ್ಲದ ಸ್ವಾಗತಿಸಿದರು.ಪವಿತ್ರಾ ಛಲವಾದಿ ವಂದಿಸಿದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.