ಲಿಂಗಸೂಗೂರು ನಗರದ ಶ್ರೀ ಈಶ್ವರ ದೇವಸ್ಥಾನದಲ್ಲಿ ಶ್ರೀಮದ್ ರಂಭಾಪುರಿ ವೀರಸಿಂಹಾಸನಾಧೀಶ್ವರ ಶ್ರೀ ಶ್ರೀ ಶ್ರೀ 1008 ಜಗದ್ಗುರು ಪ್ರಸನ್ನ ರೇಣುಕ ಡಾ.ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ಬಾಳೆಹೊನ್ನೂರು ಮಠ ಮಹಾಸ್ವಾಮಿಗಳವರನ್ನು ಪರಿಸರ ರಾಜ್ಯ ಪ್ರಶಸ್ತಿ ಪುರಸ್ಕೃತರು ಹಾಗೂ ವನಸಿರಿ ಫೌಂಡೇಶನ್ ರಾಜ್ಯಾದ್ಯಕ್ಷರಾದ ಅಮರೇಗೌಡ ಮಲ್ಲಾಪುರ ಮತ್ತು ವನಸಿರಿ ಫೌಂಡೇಶನ್ ತಂಡದ ಸದಸ್ಯರು ಭೇಟಿ ನೀಡಿ ಆರ್ಶೀವಾದ ಪಡೆದರು.
ಆರ್ಶೀವಚನ ನೀಡಿದ ಶ್ರೀಮದ್ ರಂಭಾಪುರಿ ವೀರಸಿಂಹಾಸನಾಧೀಶ್ವರ ಶ್ರೀ ಶ್ರೀ ಶ್ರೀ 1008 ಜಗದ್ಗುರು ಪ್ರಸನ್ನ ರೇಣುಕ ಡಾ.ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ಮಾತನಾಡಿ ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯ.ನಾವು ಧರ್ಮ ರಕ್ಷಣೆ ಜೊತೆಗೆ ಪರಿಸರ ರಕ್ಷಣೆ ಮಾಡುವ ಅನಿವಾರ್ಯತೆ ಇದೆ. ಧರ್ಮವನ್ನು ನಾವು ರಕ್ಷಣೆ ಮಾಡಿದರೆ ಧರ್ಮವು ನಮ್ಮನ್ನು ರಕ್ಷಣೆ ಮಾಡುತ್ತದೆ ಅದೇರೀತಿ ಪರಿಸರವನ್ನು ನಾವು ರಕ್ಷಣೆ ಮಾಡಿದರೆ ಪರಿಸರ ನಮ್ಮನ್ನು ರಕ್ಷಿಸುವುದರಲ್ಲಿ ಸಂಶಯವಿಲ್ಲ ಪರಿಸರ ರಕ್ಷಣೆಗೆ ತಾವುಗಳು ಮುಂದಾಗದಿದ್ದರೆ ದೇಶದಲ್ಲಿ ತಾಪಮಾನ ಏರಿಕೆ,ಚಂಡಮಾರುತಗಳಂತಹ ಪ್ರಕೃತಿ ವಿಕೋಪಗಳು ಉಂಟಾಗುತ್ತದೆ,ಬಿಸಿಲ ನಾಡಾದ ಕಲ್ಯಾಣ ಕರ್ನಾಟಕದಲ್ಲಿ ಪರಿಸರ ಸಂರಕ್ಷಣೆಯ ನಿಟ್ಟಿನಲ್ಲಿ ಪರಿಸರ ರಕ್ಷಣೆಯಲ್ಲಿ ತೊಡಗಿರುವ ವನಸಿರಿ ಫೌಂಡೇಶನ್ ತಂಡದ ಕಾರ್ಯ ತುಂಬಾ ಶ್ಲಾಘನೀಯ ಇವರ ಪರಿಸರದ ಕಾಯಕ ಸದಾಕಾಲ ನಿರಂತರವಾಗಿ ನೆರವೇರಲಿ ಪರಿಸರ ಬೆಳಸುವ ಕಾಯಕಕ್ಕೆ ಮಹಾದೇವ ಒಳ್ಳೆಯದು ಮಾಡಲಿ ಇದರಿಂದ ಈ ಭೂಮಂಡಲದ ಮೇಲಿನ ಸಕಲ ಜೀವರಾಶಿಗಳಿಗೆ ಮಹಾದೇವ ಒಳ್ಳೆಯದನ್ನು ಮಾಡಲಿ ಎಂದು ಆರ್ಶೀವಚನ ನೀಡಿದರು.
ಈ ಸಂದರ್ಭದಲ್ಲಿ ಶ್ರೀ ಷ.ಬ್ರ.ಸೋಮನಾಥ ಶಿವಾಚಾರ್ಯರು ಬಾಳೆಹೊನ್ನೂರು ಶಾಖಾಮಠ ಸಿಂಧನೂರು ಹಾಗೂ ಶ್ರೀ ರೌಡಕುಂದ ಶ್ರೀಗಳು, ಕರ್ನಾಟಕ ಪರಿಸರ ರಾಜ್ಯ ಪ್ರಶಸ್ತಿ ಪುರಸ್ಕೃತರು ಹಾಗೂ ವನಸಿರಿ ಫೌಂಡೇಶನ್ ರಾಜ್ಯಾದ್ಯಕ್ಷರಾದ ಅಮರೇಗೌಡ ಮಲ್ಲಾಪುರ,ನಾಗರಾಜ ಮಾಂಡ್ರೆ ಶಿಕ್ಷಕರು,ಅಮರಯ್ಯ ಸ್ವಾಮಿ ಪತ್ರಿಮಠ,ರಂಜಾನ್ ಸಾಬ್,ಚನ್ನಪ್ಪ ಕೆ ಹೊಸಹಳ್ಳಿ,ಇನ್ನಿತರರು ಇದ್ದರು
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.