ಧಾರವಾಡ:ಇಡೀ ನಾಡಿನಾದ್ಯಂತ ಆಚರಣೆಯಲ್ಲಿರುವ ಹಾಗೂ ವಿಶ್ವವಿಖ್ಯಾತ ದಸರಾ ಹಬ್ಬ ಹಾಗೂ ಆಯುಧ ಪೂಜೆಯನ್ನು ರಾಜ್ಯದಲ್ಲಿ ಆಚರಿಸುತ್ತಿರುವಂತೆ ಇಲ್ಲೊಂದು ವಿದ್ಯಾರ್ಥಿಗಳ ಸಮೂಹ ಸೇರಿ ವಿಭಿನ್ನ ಮತ್ತು ವಿಶೇಷವಾಗಿ ಆಯುಧ ಪೂಜೆಯನ್ನು ಕವಿವಿ ಆವರಣದಲ್ಲಿರುವ ಶಾಲ್ಮಲಾ ವಿದ್ಯಾರ್ಥಿ ನಿಲಯದಲ್ಲಿ ಆಚರಿಸಲಾಯಿತು.
ಮುಖ್ಯವಾಗಿ ಪ್ರತಿಯೊಬ್ಬರ ಬದುಕನ್ನು ಕಟ್ಟಿಕೊಡುವಂತಹ ಹಾಗೂ ಜ್ಞಾನದ ಸಂಕೇತವಾಗಿರುವ ಲೇಖನಿ ಮತ್ತು ಪುಸ್ತಕಗಳೊಂದಿಗೆ ಬುದ್ಧ ಬಸವ ಅಂಬೇಡ್ಕರ್ ಮುಂತಾದ ದಾರ್ಶನಿಕರ ಪ್ರತಿಮೆಗಳನ್ನಿಟ್ಟು ಕರ್ನಾಟಕ ವಿಶ್ವವಿದ್ಯಾಲಯದ ಶಾಲ್ಮಲಾ ವಿದ್ಯಾರ್ಥಿ ನಿಲಯದ ವಿದ್ಯಾರ್ಥಿಗಳಾದ ನಾಗರಾಜ್ ಮಾದರ, ಮಂಜುನಾಥ ಮಾದರ,ರವಿಚಂದ್ರ ಮರಕುಂಬಿ, ಚರಣ್ ಕಾಳೆ,ಮುತ್ತು ದೊಡ್ಡಮನಿ,ದಿಲೀಪ್ ಯಾದವ್,ಹನುಮಂತ ಕರ್ಲವಾಡ್,ರಮೇಶ್ ಮತ್ತು ಅಮರೇಶ್ ಭಾಗಿಯಾಗಿದ್ದರು ಹಾಗೂ ಈ ರೀತಿ ವಿಭಿನ್ನವಾಗಿ ಆಚರಿಸಲು ನಿಲಯಪಾಲಕರಾದ ಡಾ.ಎನ್.ಎಸ್.ಮುಗದೂರ್ ಹಾಗೂ ಸಿಬ್ಬಂಧಿಗಳು ಉತ್ಸಾಹ ತೋರಿದ್ದಾರೆ.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.