ರಾಯಚೂರು:ಎಲೆಮರೆಕಾಯಿಯಂತೆ ಸದ್ದಿಲ್ಲದೇ ಕಾಯಕ ಮಾಡುತ್ತಿರುವ ಕಾಯಕ ಯೋಗಿ,ಪರಿಸರ ಪ್ರೇಮಿ,ಪ್ರಾಣಿ-ಪಕ್ಷಿಗಳ ರಕ್ಷಕ,ಬಿಸಿಲು ನಾಡನ್ನು ಹಸಿರು ನಾಡನ್ನಾಗಿ ಮಾಡಲು ನಿತ್ಯ ಪರಿಸರ ಸೇವೆ ಮಾಡುತ್ತಿರುವ ಸಿಂಧನೂರಿನ ವನಸಿರಿ ಫೌಂಡೇಶನ್ ಸಂಸ್ಥೆಗೆ ಕರ್ನಾಟಕ ಸರ್ಕಾರ 2023ರ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನೀಡುವ ಮೂಲಕ ಕಾಯಕಯೋಗಿಗಳನ್ನು ಗೌರವಿಸುವಂತಾಗಬೇಕು ಎಂದು ಒತ್ತಾಯಿಸಿದರು.
ಕಲ್ಯಾಣ ಕರ್ನಾಟಕದಾದ್ಯಂತ ಅತ್ಯಂತ ಹೆಚ್ಚು ಬಿಸಿಲನ್ನು ಹೊಂದಿದ್ದು,ಈ ಭಾಗದಲ್ಲಿ ಹಸಿರೀಕರಣ ಮಾಡಲು ಬಿಸಿಲಿನ ತಾಪವನ್ನು ಕಡಿಮೆಗೊಳಿಸಲು ಎಲೆಮರೆಯ ಕಾಯಿಯಂತೆ ಪರಿಸರ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಸಸಿಗಳನ್ನು ನೆಡುವುದು,ಇದ್ದ ಸಸಿಗಳಿಗೆ ನೀರುಣಿಸುವ ಮೂಲಕ ರಕ್ಷಣೆ ಮಾಡುವುದು,ಸಾರ್ವಜನಿಕರಿಗೆ ,ಶಾಲಾ ವಿದ್ಯಾರ್ಥಿಗಳಿಗೆ ವಿವಿಧ ರೀತಿಯಲ್ಲಿ ವಿವಿಧ ಕಾರ್ಯಕ್ರಮಗಳ ಮೂಲಕ ಸುಮಾರು 9 ವರ್ಷಗಳಿಂದ ದಿನನಿತ್ಯ ನಿರಂತರವಾಗಿ ಪರಿಸರ ಸೇವೆಯಲ್ಲಿ ತೊಡಗಿರುವ ವನಸಿರಿ ಫೌಂಡೇಶನ್ ಸಂಸ್ಥೆಗೆ ಕರ್ನಾಟಕ ರಾಜ್ಯ ಸರ್ಕಾರ 2023ರ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಬೇಕು ಎಂದು ಸಿಂಧನೂರಿನ ಬಾಳೆಹೊನ್ನೂರು ಶಾಖಾ ಮಠದ ಶ್ರೀ ಶ್ರೀ ಶ್ರೀ ಷ.ಬ್ರ.ಸೋಮನಾಥ ಶಿವಾಚಾರ್ಯ ಮಹಾಸ್ವಾಮಿಗಳು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.