ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.

ರಾಜ್ಯದ ರೈತರಿಗೆ ಉಚಿತ ಸೋಲಾರ್ ಪಂಪ್ ವಿತರಣೆಗೆ ಕೇಂದ್ರವೂ ಸಮನಾಗಿ ಹಣ ನೀಡಲಿ: ಎಎಪಿ ಚಾಮರಾಜನಗರ ಜಿಲ್ಲಾ ಅಧ್ಯಕ್ಷ ಹರೀಶ್ ಕೆ ಒತ್ತಾಯ

ಹನೂರು/ಚಾಮರಾಜನಗರ:ರಾಜ್ಯದ ರೈತರಿಗೆ ಉಚಿತ ವಿದ್ಯುತ್ ಪೂರೈಕೆ ಮಾಡಲು ರಾಜ್ಯ ಸರ್ಕಾರ ಪ್ರತಿವರ್ಷ 6,900 ಕೋಟಿ ರೂ.ಖರ್ಚು ಮಾಡುತ್ತಿದೆ.ರಾಜ್ಯದಲ್ಲಿ ಒಟ್ಟು 34 ಲಕ್ಷ ಪಂಪ್‌ಸೆಟ್‌ಗಳಿದ್ದು,ಇವುಗಳ ಅಳವಡಿಕೆಗೆ ಒಟ್ಟು 13,800 ಕೋಟಿ ರೂ. ಖರ್ಚಾಗುತ್ತದೆ ಎಂಬ ಎಂಬ ಅಂದಾಜಿದೆ ಇನ್ನುಳಿದ 6900 ಕೋಟಿ ರೂಪಾಯಿಗಳನ್ನು ಕೇಂದ್ರ ಸರ್ಕಾರವು ಭರಿಸುವ ಮೂಲಕ ಮೂಲಕ ಉಚಿತವಾಗಿ ಸರ್ಕಾರವೇ ಪ್ರತಿಯೊಬ್ಬ ರೈತರಿಗೂ ಸೋಲಾರ್ ಪಂಪ್ ವಿತರಿಸಿದರೆ ರೈತರಿಗೂ ಅನುಕೂಲವಾಗಲಿದೆ. ರಾಜ್ಯ ಸರ್ಕಾರಕ್ಕೂ ಪ್ರತಿ ವರ್ಷದ ಸಬ್ಸಿಡಿ ಖರ್ಚು ಉಳಿಯಲಿದೆ ಎಂದು ಆಮ್ ಆದ್ಮಿ ಪಕ್ಷದ ಜಿಲ್ಲಾ ಅಧ್ಯಕ್ಷ ಹರೀಶ್ ಹೇಳಿದರು.

ನಗರದ ಪಕ್ಷದ ಕಚೇರಿಯಲ್ಲಿ ಮಾತನಾಡಿದ ಅವರು,ಇಂಧನ ಇಲಾಖೆಯಲ್ಲಿ ದೊಡ್ಡ ಮಟ್ಟದ ಹಗರಣ ನಡೆಯುತ್ತಿದೆ ಎನ್ನುವ ಅನುಮಾನ ಇದೆ. ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಸಮ ಪ್ರಮಾಣದಲ್ಲಿ ಜಿಎಸ್‌ಟಿ ಪಡೆಯುತ್ತಿದೆ. ಆದರೆ, ರಾಜ್ಯದ ಅಭಿವೃದ್ಧಿಗೆ ಕೂಡ ಸಮನಾಗಿ ಬಂಡವಾಳ ಹಾಕಬೇಕು ಸೋಲಾರ್ ಪಂಪ್‌ಸೆಟ್‌ಗೆ ಶೇ 30ರಷ್ಟು ಸಹಾಯಧನ ನಾವು ಕೊಡುತ್ತೇವೆ.ಶೇ 50ರಷ್ಟು ಸಹಾಯ ಧನವನ್ನು ರಾಜ್ಯ ಸರ್ಕಾರ ಕೊಡಲಿ ಎನ್ನುವುದು ನ್ಯಾಯವಲ್ಲ.ಟ್ಯಾಕ್ಸ್ ಮಾತ್ರ ಸಮನಾಗಿ ತೆಗೆದುಕೊಳ್ಳುವವರು,ರಾಜ್ಯಕ್ಕೆ ಕೊಡುವಾಗಲೂ ಸಮವಾಗಿ ಕೊಟ್ಟರೆ ಒಕ್ಕೂಟ ವ್ಯವಸ್ಥೆ ಉಳಿಯುತ್ತದೆ ಎಂದು ಕೇಂದ್ರ ಸರ್ಕಾರವನ್ನು ಟೀಕಿಸಿದರು.

ದೇಶದಲ್ಲಿ 70 ರಷ್ಟು ರೈತರಿದ್ದು,ಕೇಂದ್ರ ಮತ್ತು ರಾಜ್ಯ ಸರ್ಕಾರ ಉಚಿತವಾಗಿ ಸೋಲಾರ್ ಪಂಪ್ ಸೆಟ್‌ ವಿತರಣೆ ಮಾಡಿದರೆ,ದೀರ್ಘಾವಧಿಯಲ್ಲಿ ಸರ್ಕಾರಗಳಿಗೂ ಲಾಭವಾಗಲಿದೆ.ಸರ್ಕಾರವು ಸರ್ಕಾರವು ಸೋಲಾರ್ ಪ್ಲಾಂಟ್ ಗಳನ್ನು ಅಳವಡಿಸಲು ನೀಡುತ್ತಿರುವ ನೂರಾರು ಕೋಟಿ ಹಣ ಉಳಿಯುತ್ತದೆ.ಇದಲ್ಲದೆ ಹೆಚ್ಚಿನ ವಿದ್ಯುತ್ತನ್ನು ಉತ್ಪಾದಿಸಿ ಪವರ್ ಗ್ರೀಡಿಗೆ ನೀಡಿದಲ್ಲಿ ರೈತರಿಗು ಸಹ ಸಾಕಷ್ಟು ಆರ್ಥಿಕ ಸಹಾಯವು ಆಗುತ್ತದೆ. ಇದುವರೆಗೂ ನಿರಂತರವಿದ್ಯುತ್ ಇಲ್ಲದೆ ಬೆಳೆ ನಾಶ ಆಗುತ್ತಿದ್ದು,ಸೋಲಾರ್ ಪಂಪ್‌ನಿಂದ ರೈತರಿಗೆ ಬೆಳೆ ಉತ್ಪಾದನೆ ಹೆಚ್ಚಾಗಲಿದೆ.ಇದು ಜಿಡಿಪಿ ಬೆಳವಣಿಗೆಗೆ ಕೂಡ ಸಹಕಾರಿಯಾಗಲಿದೆ ಎಂದು ಹೇಳಿದರು.

2013-14ರಲ್ಲಿ ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಮತ್ತು ಡಿಕೆ ಶಿವಕುಮಾರ್ ಇಂಧನ ಸಚಿವರಾಗಿದ್ದಾಗ ರಾಜ್ಯದ ರೈತರಿಗೆ ಸೋಲಾರ್ ವಿದ್ಯುತ್ ಉತ್ಪಾದನೆ ಮಾಡಲು ಸಹಾಯ ಮಾಡುತ್ತೇವೆ ಅವರಿಗೆ 24 ಗಂಟೆ ವಿದ್ಯುತ್ ಸಿಗುವಂತೆ ಮಾಡುತ್ತೇವೆ ಎಂದು ಹೇಳಿದ್ದರು. ಹೀಗೆ ಹೇಳಿ 10 ವರ್ಷವಾಗಿದೆ. ಆದರೆ, ಈವರೆಗೂ ರಾಜ್ಯದಲ್ಲಿ ಎಷ್ಟು ರೈತರಿಗೆ ಸೋಲಾರ್ ಪಂಪ್ ಸೆಟ್ ವಿತರಿಸಿದ್ದಾರೆ ಎಂಬುದಕ್ಕೆ ಉತ್ತರ ನೀಡಲಿ ಎಂದರು.

ಕೇಂದ್ರ ಸರ್ಕಾರ 2017ರಲ್ಲಿ ಕುಸುಮ್ ಯೋಜನೆ ಜಾರಿ ಮಾಡಿದ್ದು, ಕರ್ನಾಟಕ ರಾಜ್ಯಕ್ಕೆ 10,314 ಪಂಪ್‌ಸೆಟ್ ನೀಡಿದೆ. ಶೇ 30ರಷ್ಟು ಸಬ್ಸಿಡಿ ನೀಡುತ್ತೇವೆ ಎಂದು ಹೇಳಿತ್ತು. ಇದರಲ್ಲಿ ಕೇವಲ 314 ಪಂಪ್‌ಸೆಟ್ ಮಾತ್ರ ರಾಜ್ಯದಲ್ಲಿ ವಿತರಣೆಯಾಗಿದೆ. ಜನರ ಕಣ್ಣೊರೆಸಲು ಮಾತ್ರ ಯೋಜನೆಗಳನ್ನು ಜಾರಿ ಮಾಡಲಾಗಿದೆ. ಪ್ರಧಾನಿ ಮೋದಿ ಅವರು ಮಾಲಿನ್ಯ ಕಡಿಮೆ ಮಾಡಬೇಕು, ನೈಸರ್ಗಿಕ ಇಂಧನ ಉತ್ಪಾದಿಸಬೇಕು ಎಂದು ಖಾಲಿ ಭಾಷಣ ಮಾಡುತ್ತಾರೆ. ಆದರೆ, ದೇಶದಲ್ಲಿ ಅಂತಹ ಪ್ರಯತ್ನಗಳು ನಡೆಯುತ್ತಿಲ್ಲ ಎಂದು ಹೇಳಿದರು.
ಅದಾನಿ ಗ್ರೂಪ್‌ ಆಸ್ಟ್ರೇಲಿಯಾದಿಂದ ಕಲ್ಲಿದ್ದಲನ್ನು ಆಮದು ಮಾಡಿಕೊಂಡು ದೇಶದ ವಿದ್ಯುತ್ ಉತ್ಪಾದನಾ ಘಟಕಗಳಿಗೆ ಪೂರೈಕೆ ಮಾಡುತ್ತಿದ್ದು, ಇದರಲ್ಲಿ 50 ಪ್ರತಿಶತ ಆದಾಯ ಗಳಿಸಿದೆ ಎಂದು ವರದಿಯಾಗಿದೆ. ಇಂತಹವರಿಗೆ ಅನುಕೂಲ ಮಾಡಿಕೊಡಲು ಗ್ರೀನ್ ಎನರ್ಜಿ ಬಗ್ಗೆ ಕೇಂದ್ರ ಸರ್ಕಾರ ತಲೆ ಕೆಡಿಸಿಕೊಂಡಿಲ್ಲ ಎಂದು ಆರೋಪಿಸಿದರು.
ವರದಿ:ಉಸ್ಮಾನ್ ಖಾನ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ