ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಕೆಂಭಾವಿ ವ್ಯಾಪ್ತಿಯಲ್ಲಿ ಬರುವ ನಗನೂರ ಕೆಇಬಿ ಅಧಿಕಾರಿಗಳು ವಾಲ್ಮೀಕಿ ಜಯಂತಿ ಆಚರಣೆ ಮಾಡದೆ ಇರುವುದು ನಾಚಿಕೆಗೇಡಿನ ಸಂಗತಿ
ಕೆಇಬಿಯಲ್ಲಿದ್ದ ಸಿಬ್ಬಂದಿ ಮದ್ಯಾಹ್ನ
1 ಘಂಟೆಯಾದರೂ ಪೂಜೆ ಮಾಡದೆ ಇರುವ ಅಧಿಕಾರಿಗಳಿಗೆ ಕೂಡಲೇ ಜಿಲ್ಲಾಧಿಕಾರಿಗಳು ಅಮಾನತು ಮಾಡಿ ಆದೇಶ ನೀಡಬೇಕು ಎಂದು ನಗನೂರ ಗ್ರಾಮದ ಮುಖಂಡರಾದ ಹುಲುಗಪ್ಪ.ಎಮ್.ಹವಲ್ದಾರ ಆಗ್ರಹಿಸಿದರು.
ಅಧಿಕಾರಿಗಳು ಊರಿನ ಯುವಕರು ಕೆಇಬಿ ಅಧಿಕಾರಿಗಳಿಗೆ ಕೇಳಿದರೆ ಉತ್ತರ ನೀಡುತ್ತಿಲ್ಲ ಯಾಕೆ ರಾಜ್ಯ ಸರ್ಕಾರದ ಸುತ್ತೋಲೆ ಇದ್ದರೂ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ ಮಾಡದೆ ಇರುವ ಅಧಿಕಾರಿಗಳನ್ನು ಕೂಡಲೇ ಅಮಾನತು ಮಾಡಿ ಎಂದು ಗ್ರಾಮಸ್ಥರು ಹೇಳಿದರು ಮುಂದಿನ ದಿನಗಳಲ್ಲಿ ನಗನೂರ ಕೆಇಬಿ ಅಧಿಕಾರಿಗಳನ್ನು ಅಮಾನತು ಮಾಡದೆ ಇದ್ದರೆ ನಗನೂರ ಗ್ರಾಮಸ್ಥರು ಸೇರಿ ಉಗ್ರವಾದ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.
ವರದಿ:ರಾಜಶೇಖರ ಮಾಲಿ ಪಾಟೀಲ್
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.