ಯಾದಗಿರಿ ಜಿಲ್ಲೆಯ ಶಹಾಪುರ ಮತಕ್ಷೇತ್ರದಿಂದ ಬಿಜೆಪಿಯ ಶಹಾಪುರ ನಗರದ ಮಂಡಲ ಅಧ್ಯಕ್ಷರಾದ ದೇವಿಂದ್ರಪ್ಪ ಕೊನೇರ್ ಹಾಗೂ ಯಾದಗಿರಿ ಜಿಲ್ಲಾ ಶಿಕ್ಷಕರ ಪ್ರಕೋಷ್ಠದ ಸಂಚಾಲಕರಾದ ರಂಗಣ್ಣ ಜಿರ್ಲೆ ಇವರು ನವ ದೆಹಲಿಯಲ್ಲಿ ನಡೆಯಲಿರುವ ದೆಹಲಿಯ ಕರ್ತವ್ಯ ಪಥದಲ್ಲಿ ಹುತಾತ್ಮರಾದ ವೀರಯೋಧರ ಗೌರವಾರ್ಥವಾಗಿ ನಿರ್ಮಾಣ ವಾಗಲಿರುವ ಅಮೃತ ಉದ್ಯಾನವನಕ್ಕೆ ನಮ್ಮ ಯಾದಗಿರಿ ಜಿಲ್ಲೆಯಿಂದ ಅಂದರೆ ಶಹಾಪುರ,ಸುರಪುರ,ಗುರಮಿಟಕಲ್ ನಿಂದ ಪವಿತ್ರವಾದ ಮಣ್ಣು ತುಂಬಿದ ಅಮೃತ ಕಳಶವನ್ನು ಬೀಳ್ಕೊಡಲಾಯಿತು.ಇಂದು ಮಧ್ಯಾಹ್ನ 12:30 ಕ್ಕೆ ಶಹಾಪುರ ನಗರದ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಯಾದಗಿರಿ ಜಿಲ್ಲೆಯ ಎಲ್ಲಾ ತಾಲೂಕಿನ ಪವಿತ್ರವಾದ ಮಣ್ಣು ಪೂಜೆ ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ಶರಣು ಟೋಕಪುರ,ಸಾಗರ ಜೋಷಿ,ನಾಗೇಶ್ ಭಾಸುತ್ಕರ್, ವಿರೇಶ ಸುರಪುಕರ್ ಹಾಗೂ ಹಿರಿಯ ಮುಖಂಡರು ಹುತಾತ್ಮರಾದ ವೀರಯೋಧರಿಗೆ ಗೌರವ ಸಲ್ಲಿಸಿ ಈ ಕಾರ್ಯಕ್ರಮದಲ್ಲಿ ಬಿಜೆಪಿ ಕಾರ್ಯಕರ್ತರು ಹಾಗೂ ಮುಖಂಡರು ಭಾಗವಹಿಸಿದ್ದರು.
ವರದಿ ರಾಜಶೇಖರ ಮಾಲಿ ಪಾಟೀಲ್
