ರಾಯಚೂರು ಜಿಲ್ಲೆಯ ಮಸ್ಕಿ ತಾಲ್ಲೂಕಿನ ಯರದೊಡ್ಡಿ ಗ್ರಾಮದಲ್ಲಿ ವಾಲ್ಮೀಕಿ ಜಯಂತಿ ಆಚರಣೆ ಮಾಡಲಾಯಿತು ಈ ಸಂದರ್ಭದಲ್ಲಿ ಮಸ್ಕಿ ತಾಲೂಕು ವಾಲ್ಮೀಕಿ ಸಂಘದ ಅಧ್ಯಕ್ಷ ಮೌನೇಶ್ ಮಾತನಾಡಿ ವಾಲ್ಮೀಕಿ ಸಮಾಜ ಕೇವಲ ಜಯಂತಿ ಆಚರಣೆಗೆ ಸೀಮಿತವಾಗದೆ ಶಿಕ್ಷಣ ಪಡೆದು ಸಂಘಟಿತರಾಗಿ ಹೋರಾಡುವ ಮೂಲಕ ಸಮಾಜಕ್ಕೆ ನ್ಯಾಯ ದೊರಕಿಸುವ ಕೆಲಸವಾಗಬೇಕು ಮಹಾನ್ ಕಾವ್ಯ ರಾಮಾಯಣ ರಚಿಸುವ ಮೂಲಕ ರಾಮ ಲಕ್ಷ್ಮಣ ಸೀತೆಯನ್ನು ಗುರುತಿಸಿದ ವಾಲ್ಮೀಕಿ ಇಂದು ಒಂದೇ ಸಮಾಜಕ್ಕೆ ಸೀಮಿತರಾಗಿದ್ದಾರೆ ಅವರ ಆದರ್ಶ ಆರ್ಥಿಕತೆ ಮಹಾನ್ ಚೇತನ ಸಾಹಿತ್ಯ ಎಲ್ಲಾ ಗುಣವನ್ನು ನಾವು ಅಳವಡಿಸಿಕೊಂಡು ಸಮಾಜದಲ್ಲಿ ಮುಖ್ಯ ವಾಹಿನಿಗೆ ಬರಬೇಕೆಂದು ಹೇಳಿದರು ಪತ್ರಕರ್ತ ದೇವಪ್ಪ ರಾಠೋಡ್, ಮಾತನಾಡಿ ವಾಲ್ಮೀಕಿ ಹಿಂದೂ ಗ್ರಂಥ ರಾಮಾಯಣ ಬರೆಯುವ ಮೂಲಕ ಇಂದು ರಾಷ್ಟ್ರವಾದ ಭಾರತಕ್ಕೆ ಒಂದು ಮೌಲ್ಯಯುತ ಗ್ರಂಥವನ್ನು ನೀಡಿದ್ದಾರೆ ಎಂದರು ಹಾಗೆಯೆ ಗ್ರಾಮ ಪಂಚಾಯಿತಿ ಸದಸ್ಯ ಮಾನ್ಸಿಂಗ್ ರಾಠೋಡ್ ಮಾತನಾಡಿದರು ಜಯಂತಿ ಅಂಗವಾಗಿ ಮಹಾಋಷಿ ವಾಲ್ಮೀಕಿಯ ಭಾವಚಿತ್ರವನ್ನು ತೆರೆದ ವಾಹನದಲ್ಲಿ ಪ್ರತಿಷ್ಠಾಪಿಸಿ ಗ್ರಾಮದ ಪ್ರಮುಖ ಬೀದಿಯಲ್ಲಿ ಮೆರವಣಿಗೆ ಮಾಡಿದರು ಮೆರವಣಿಗೆಯಲ್ಲಿ ಮಹಿಳೆಯರಿಂದ ತುಂಬಾ ಕಳಸ ಧ್ವಜಾರೋಹಣ ರಾರಾಜಿಸಿದವು ಕಾರ್ಯಕ್ರಮದ ವೇದಿಕೆಯಲ್ಲಿ ಶಂಭುಲಿಂಗಪ್ಪ ವಿಟ್ಲಾಪೂರ,ಛತ್ರಪ್ಪ ಹಿರೇಕೂರ,ಕನಕಪ್ಪ ತಲೆಖಾನ್,ಬಸವರಾಜ ಕೊಳಬಾಳ್,ದುರ್ಗೇಶ್ ನಂದಿಹಾಳ,ಶಿಕ್ಷಕ ಬಸವರಾಜ್ ಘೋಷ್,ಪರಸಪ್ಪ,ಹನುಮೇಶ್ ನಾಯಕ್,ಪರಸಪ್ಪ,ದೇವಪ್ಪ,ನಾಗಪ್ಪ,ಮಾರುತಿ ಬುದ್ದಿನ್ನಿ,ನಾಗಪ್ಪ ಕಡಗೂರು,ಇನ್ನಿತರ ಗಣ್ಯರು ಭಾಗಿಯಾಗಿದ್ದರು
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.