ಹೂವೇ
ಓ ನನ್ನ ಹೂವೇ ನೀನೆಷ್ಟು ಮುಗ್ಧ…
ಗಿಡದಿಂದ ಚಿವುಟಿದರೆಂಬ ನೋವಿಲ್ಲ ನಿನಗೆ
ಮುಂದೇನು ಎಂಬ ಅರಿವಿಲ್ಲ ನಿನಗೆ
ಅರಳಿದ ಪ್ರೀತಿಗಳಿಗೆ ಸಾಕ್ಷಿಯಾದೆ
ವಿರಹದಲ್ಲಿ ಕೊನೆಯಾದ ಪ್ರೀತಿಗಳ ಪರವಾಗಿ ವಿಧಿಗೆ ಶಾಪ ಹಾಕಿ ನೀ ಕಂಬನಿ ಮಿಡಿದೆ
ಎಲ್ಲೋ ಬೆಳೆದು ಯಾರ ಕೈಗೋ ಸೇರಿ ಯಾರದೋ ಮುಡಿ ಸೇರಿ ಗೋಧೂಳಿ ಸಮಯಕ್ಕೆ ಧೂಳಲ್ಲಿ ಸೇರಿ ಹೋಗುವ ಭಯವಿಲ್ಲ ನಿನಗೆ
ಓ ಹೂವೇ ನೀನೆಷ್ಟು ಮುಗ್ಧ…
-ಬಸವರಾಜ.ಎ.ಬಳಿಗಾರ