ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರ ಶಿರವಾಳ ವ್ಯಾಪ್ತಿಯಲ್ಲಿ ಬರುವ ಉಪ ಕೇಂದ್ರ ಹೊತಪೇಟ, ಸುಮಾರು ತಿಂಗಳುಗಳಿಂದ ಆರೋಗ್ಯ ಕೇಂದ್ರ ತೆರೆಯದೆ ಇರುವ ಸಿಬ್ಬಂದಿಗಳ ಮೇಲೆ ಕಾನೂನು ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಡಿ.ಎಸ್.ಎಸ್ ತಾಲೂಕ ಅಧ್ಯಕ್ಷ ಬಸ್ಸು ನಟೇಕಾರ್ ಆಗ್ರಹಿಸಿದರು.
ಡಿ.ಎಸ್.ಎಸ್ ತಾಲೂಕ ಅಧ್ಯಕ್ಷ ಬಸ್ಸು ನಾಟೇಕಾರ್ ಅವರು ಮಾತನಾಡಿ ತಿಂಗಳುಗಳು ಕಳೆದರೂ ಶಿರವಾಳ ವ್ಯಾಪ್ತಿಯಲ್ಲಿ ಬರುವ ಪ್ರಾಥಮಿಕ ಆರೋಗ್ಯ ಕೇಂದ್ರ ಶಿರವಾಳ ಹೊತಪೇಟ ಉಪ ಕೇಂದ್ರ ತೆರೆಯದೆ ಇವರುವುದು ನಾಚಿಕೆಗೇಡಿನ ಸಂಗತಿ ಎಂದು ಹೇಳಿದರು ನಾವುಗಳು ಮೌಖಿಕವಾಗಿ ಅಧಿಕಾರಿಗಳಿಗೆ ಹೇಳಿದಾಗ ದಿನಾಂಕ 8/10/2023 ರಂದು ಹೊತಪೇಟೆ ಕೇಂದ್ರದ ಸಿಬ್ಬಂದಿಗಳಿಗೆ ಕಾರಣ ಹೇಳುವ ನೋಟಿಸ್ ನೀಡಿದ್ದೀರಿ ಆದರೆ ಇಲ್ಲಿಯವರೆಗೂ ಅವರ ಮೇಲೆ ಯಾವುದೇ ಶಿಸ್ತು ಕ್ರಮ ಕೈಗೊಳ್ಳದ ಕಾರಣ ಹಾಗೂ ಹಳ್ಳಿಯಲ್ಲಿ ಇರತಕ್ಕಂತಹ ಬಡ ಜನರು ಕೂಲಿ ಕಾರ್ಮಿಕರು ಉಪ ಕೇಂದ್ರ ಇದ್ದರೂ ತಾತ್ಕಾಲಿಕ ಚಿಕಿತ್ಸೆ ದೊರೆಯುತ್ತಿಲ್ಲ ಆದರೆ ನೀವು ನೀಡಿದ ನೋಟೀಸಿಗೆ ಬೆಲೆ ಕೊಡದ ಹೊತಪೇಟ ಉಪ ಕೇಂದ್ರದ ಸಿಬ್ಬಂದಿಗಳಿಗೆ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಆದರೆ
ಇಲ್ಲಿವರೆಗೂ ಯಾವುದೇ ಮನವಿ ಪತ್ರ ಕೊಟ್ಟರೂ ಸ್ಪಂದಿಸದೆ ಇರುವ ಅಧಿಕಾರಿಗಳಿಗೆ ಕೂಡಲೇ ಕ್ರಮ ಕೈಗೊಳ್ಳಬೇಕು ದಿನಾಂಕ 8/11/2023 ಒಳಗಾಗಿ ಸಿಬ್ಬಂದಿಗಳ ಮೇಲೆ ಶಿಸ್ತು ಕ್ರಮ ತೆಗೆದುಕೊಳ್ಳದಿದ್ದಲ್ಲಿ ದಿನಾಂಕ 15/11/2023 ರಂದು ತಮ್ಮ ಕಾರ್ಯಾಲಯದ ಮುಂದೆ ನಮಗೆ ನ್ಯಾಯ ಸಿಗೋವರೆಗೂ ಧರಣಿ ಸತ್ಯಾಗ್ರಹ ಮಾಡಬೇಕಾಗುತ್ತದೆ ಎಂದು ಡಿ.ಎಸ್.ಎಸ್ ತಾಲೂಕ ಅಧ್ಯಕ್ಷರಾದ ಬಸು ನಟೇಕಾರ್ ಎಚ್ಚರಿಕೆ ನೀಡಿದರು ಈ ಸಂದರ್ಭದಲ್ಲಿ ಜಿಲ್ಲಾ ಸಂಘಟನಾ ಸಂಚಾಲರಾದ ಎಚ್.ಆರ್.ಬಡಿಗೇರ್,ಜಿಲ್ಲಾ ಸಂಘಟನಾ ಸಂಚಲರಾದ ಭೀಮರಾಯ.ಆರ್.ಕರ್ಕೊಳಿ,ಸಂಘಟನಾ ಸಂಚಾಲಕರಾದ ಜಿಂದು ಹೋಲಿ ಸಾಬ್ ಇಬ್ರಾಂಪುರ್,ರಾಯಪ್ಪ ಕಂಚನಕವಿ,ಕಂಡಪ್ಪ ನಾಟೇಕರ್,ಭೀಮರಾಯ ರಾಜಾಪುರ,ಸುಭಾಷ್ ಹೊತಪೆಟ,ಅಯ್ಯಪ್ಪ ಅಚ್ಕೇರಿ,ಕಾರ್ಯಕರ್ತರು ಭಾಗವಹಿಸಿದ್ದರು.
ವರದಿ ರಾಜಶೇಖರ ಮಾಲಿ ಪಾಟೀಲ್
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.