ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ನಗನೂರ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ ಅದ್ಧೂರಿಯಾಗಿ ಆಚರಣೆ ಮಾಡಲಾಯಿತು.
ಈ ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ಶಾಂತಪ್ಪ ರಾಠೋಡ ಮುಖ್ಯ ಶಿಕ್ಷಕರು ಹಾಗೂ ಸಿ.ಆರ್.ಪಿ ತಿಪ್ಪಣ್ಣ ನಾಯಕ ಅತಿಥಿ ಸ್ಥಾನ ವಹಿಸಿದ್ದರು.೫೦ ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಶಾಲಾ ಅಭಿವೃದ್ಧಿ ಅಧ್ಯಕ್ಷರಾದ ಅನಂತರಡ್ಡಿ ಕೆಂಚಗೋಳ ಧ್ವಜಾರೋಹಣ ನೆರವೇರಿಸಿದರು ನಂತರ ರಾಷ್ಟ್ರಗೀತೆ ಹಾಗೂ ನಾಡ ಗೀತೆಯನ್ನು ಹಾಡಲಾಯಿತು ಶಾಲಾ ವಿದ್ಯಾರ್ಥಿಗಳಿಂದ ಸ್ವಾಗತ ಗೀತೆ ನಮ್ಮ ಚಲುವ ಕನ್ನಡ ನಾಡು ಗೀತೆಗೆ ೪ ನೇ ತರಗತಿ ಮಕ್ಕಳು ನೃತ್ಯ ಪ್ರದರ್ಶನ ಮಾಡಿದರು.
ತಿಪ್ಪಣ್ಣ ನಾಯಕ ಸಿ.ಆರ್.ಪಿ ಸುದೀರ್ಘವಾಗಿ ಕರ್ನಾಟಕ ಇತಿಹಾಸ ಹಾಗೂ ಕನ್ನಡ ನಾಡಿನ ಪರಂಪರೆ ಹಾಗೂ ಕರ್ನಾಟಕ ನಡೆದು ಬಂದ ದಾರಿಯ ಬಗ್ಗೆ ಸಂಪೂರ್ಣವಾಗಿ ಮಾಹಿತಿ ನೀಡಿದರು ನಮ್ಮ ಭಾಷೆಯ ಅಭಿಮಾನದ ಬಗ್ಗೆ ಶಾಲಾ ವಿದ್ಯಾರ್ಥಿಗಳಿಗೆ ಸವಿಸ್ತಾರವಾಗಿ ಮಾಹಿತಿ ನೀಡಿದರು ಮಲ್ಲಿಕಾರ್ಜುನ ಶಿಕ್ಷಕರಿಂದ ಕಾರ್ಯಕ್ರಮದ ನಿರೂಪಣೆ,ಬಸವರಾಜ ಶಿಕ್ಷಕರಿಂದ ವಂದನಾರ್ಪಣೆ ನಡಿಸಿ ಕೊಟ್ಟರು.ಈ ಸಂದರ್ಭದಲ್ಲಿ ನಗನೂರ ಗ್ರಾಮಸ್ಥರು ಹಾಗೂ ಅತಿಥಿ ಶಿಕ್ಷಕರು ಮತ್ತು ಮುದ್ದು ಮಕ್ಕಳು ಶಾಲೆಯ ಎಸ್.ಡಿ.ಎಂ.ಸಿ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ವರದಿ ರಾಜಶೇಖರ ಮಾಲಿ ಪಾಟೀಲ್
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.