ಬೆಂಗಳೂರು
ನಗರದ ಕೆ.ಆರ್.ಪುರಂ ತೂಗು ಸೇತುವೆ ಮೇಲೆ ಹಾಕಿದ ರಾಷ್ಟ್ರ ಧ್ವಜವನ್ನು ಹರಿದು ರಾಷ್ಟ್ರ ಧ್ವಜಕ್ಕೆ ಅವಮಾನ ಎಸಗಿರುವವರ ವಿರುದ್ಧ ರಾಮಮೂರ್ತಿನಗರ ಪೋಲಿಸ್ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿದೆ
ಎಂದು ಸಾಮಾಜಿಕ ಹೋರಾಟಗಾರ ಸುಭಾಷ್ ಕರುನಾಡ ಕಂದ ಚಾನೆಲ್ ಗೆ ತಿಳಿಸಿದ್ದಾರೆ.ರಾಷ್ಟ್ರ ಧ್ವಜಕ್ಕೆ ಅವಮಾನ ಎಸಗಿರುವ ಘಟನೆ ನಡೆದಿರುವುದು ತಿಳಿದು ಬಹಳ ಬೇಸರವಾಗಿದೆ. ರಾಷ್ಟ್ರ ಧ್ವಜವನ್ನು ಸೂರ್ಯಾಸ್ತದ ಮುಂಚಿತವಾಗಿ ಗೌರವದಿಂದ ಕೆಳಗೆ ಇಳಿಸಿ ಮಡಚಿ ಇಡುವುದು ಪದ್ದತಿಯಾಗಿದೆ ತೂಗು ಸೇತುವೆಗೆ ಸಂಬಂಧಿಸಿದ ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಬೇಜವಾಬ್ದಾರಿತನ ವಹಿಸಿರುವುದೆ ಮುಖ್ಯಕಾರಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹಾಗೆಯೇ ಧ್ವಜ ಸಂಹಿತೆಯ ನಿಬಂಧನೆಗಳನ್ನು ಉಲ್ಲಂಘಿಸುವ ರೀತಿಯಲ್ಲಿ ಅದನ್ನು ಬಳಸುವುದು ಕಾನೂನಿನ ಪ್ರಕಾರ ಶಿಕ್ಷಾರ್ಹ ಅಪರಾಧವಾಗಿದೆ, ಧ್ವಜವನ್ನು ಶೀಘ್ರಗತಿಯಲ್ಲಿ ಏರಿಸಬೇಕು ಮತ್ತು ಇಳಿಸುವಾಗ ನಿಧಾನಗತಿಯಲ್ಲಿ ಇಳಿಸಬೇಕು ಎನ್ನುವುದು ನಿಯಮವಾಗಿದೆ.