ಸಿಂಧನೂರು:ಇದೇ ನವಂಬರ್1 ಕರ್ನಾಟಕ ಸರ್ಕಾರ ನಮ್ಮ ವಿಶ್ವಕರ್ಮ ಸಮಾಜದ ಪಂಚ ಕುಲಸುಬುಗಳಲ್ಲಿ ಚಿಕ್ಕ ವಯಸ್ಸಿನಿಂದಲೇ ರಥ ನಿರ್ಮಾಣ ಕಾರ್ಯದಲ್ಲಿ ತೊಡಗಿದ ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಕಸಬಾ ಲಿಂಗಸೂರಿನ ಕಾಳಪ್ಪ ವಿಶ್ವಕರ್ಮ ಅವರಿಗೆ ಅವರ ಕಟ್ಟಿಗೆಯಲ್ಲಿ ಕರಕುಶಲ ವಸ್ತುಗಳ ತಯಾರಿಕೆ,ಹಾಗೂ ವ್ಯವಸಾಯಕ್ಕೆ ಬೇಕಾದಂತಹ ಸಾಮಾಗ್ರಿಗಳ ತಯಾರಿಕೆ,ರಥಗಳು,ದೇವತಾ ಮೂರ್ತಿ,ಪಲ್ಲಿಕ್ಕಿ ತಯಾರಿಕೆ,ಹಾಗೂ ಮನೆಯ ಬಾಗಿಲು,ಅಂಕಣ ಕೆತ್ತನೆಯಲ್ಲಿ ಕೂಡಾ ಹೆಸರುವಾಸಿಯಾಗಿರುವುದನ್ನು ರಾಜ್ಯ ಸರ್ಕಾರ ಗುರುತಿಸಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ ರಾಜ್ಯೋತ್ಸವ ಪ್ರಶಸ್ತಿ ಸ್ವೀಕರಿಸಿದ ವಿಶ್ವಕರ್ಮ ಸಮಾಜದ ಹಿರಿಯರಾದ ಕಾಳಪ್ಪ ಕಸಬಾ ಲಿಂಗೂಗೂರು ಇವರಿಗೆ ಹಾಗೂ ವಿಶ್ವಕರ್ಮ ಸಮಾಜದ ಕರಕುಶಲ ತಯಾರಿಕೆಯನ್ನು ಗುರುತಿಸಿ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿ ಸಮಾಜವನ್ನು ಇಡೀ ರಾಜ್ಯವೇ ಗುರುತಿಸುವಂತೆ ಮಾಡಿದ ಕರ್ನಾಟಕ ಸರ್ಕಾರಕ್ಕೆ ಸಿಂಧನೂರು ತಾಲೂಕ ವಿಶ್ವಕರ್ಮ ಸಮಾಜದ ವತಿಯಿಂದ ಹೃತ್ಪೂರ್ವಕ ದನ್ಯವಾದಗಳು ಎಂದು ಸಿಂಧನೂರು ತಾಲೂಕ ವಿಶ್ವಕರ್ಮ ಸಮಾಜದ ತಾಲೂಕ ಅದ್ಯಕ್ಷ ಮೌನೇಶ ತಿಡಿಗೋಳ ಅವರು ಅಭಿನಂದನೆಗಳನ್ನು ತಿಳಿಸಿದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.