ಕಲಬುರಗಿ:ನಗರದ ಖಾಜಾ ಬಂದಾನವಾಜ ವಿಶ್ವ ವಿದ್ಯಾಲಯದ ಇಂಗ್ಲೀಷ್ ವಿಭಾಗದಲ್ಲಿ ಬುಧವಾರ ಕವನ ವಾಚನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಭಾಷಾ ನಿಕಾಯದ ಡೀನ್ ಡಾ.ನಿಶಾತ ಆರೀಫ್ ಹುಸ್ಸೇನಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ವಿದ್ಯಾರ್ಥಿಗಳಲ್ಲಿ ಮತ್ತು ಅಧ್ಯಾಪಕರಲ್ಲಿ ಹೆಚ್ಚು ಸಾಹಿತ್ಯಾಸಕ್ತಿಯನ್ನು ಬೆಳೆಸುವುದು ಹಾಗೂ ಕವನ ರಚಿಸುವುದರ ಮೂಲಕ ಓದುವ ಹವ್ಯಾಸ ಉತ್ತೇಜಿಸುವುದು ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿತ್ತು.ಇಂಗ್ಲೀಷ್ ವಿಭಾಗದ ವಿದ್ಯಾರ್ಥಿಗಳು ತಮ್ಮ ಆಯ್ಕೆಯ ಕವನಗಳನ್ನು ವಾಚಿಸಿದರು ಆಯ್ದ ಕವಿತೆಗಳ ವಿಷಯವು ಸಮಕಾಲೀನ ಸಂದರ್ಭದ ವಸ್ತು ಸ್ಥಿತಿಯನ್ನು ಬಿಂಬಿಸುವ ಕಾವ್ಯಗಳಾಗಿದ್ದವು.
ವಿದ್ಯಾರ್ಥಿನಿ ಬುಶ್ರಾ ಕಮಲಾ ದಾಸ್ ಅವರ “ಲುಮಿನೋಲ್”,ಶಹಬಾಜ್ ಅವರು ಜಯಂತ ಮಹಾಪಾತ್ರ ಅವರ “ಹಸಿವು” ಕವನ ಓದಿದರು. ಇಕ್ರಾ ಮತ್ತು ಶಬ್ರಾ ಅವರು ಆದಿಲ್ ಜುಸ್ಸಾವಾಲಾ ಅವರ “ಕಾಣೆಯಾದ ವ್ಯಕ್ತಿ” ಮತ್ತು ಅರುಣ್ ಕೋಲಾಟ್ಕರ್ ಅವರ “ದಿ ಬಸ್” ಕವನಗಳನ್ನು ಪಠಿಸಿದರು.ವಾಚನದ ನಂತರ ಹಿರಿಯ ಕವಿ ಪ್ರೊ. ನಿಶಾತ್ ಇವರ ಸಂದರ್ಶನ ನಡೆಸಲಾಯಿತು. ಇವರು ರಚಿಸಿರುವ ವೈವಿಧ್ಯಮಯ ವಿಷಯಗಳ ಕುರಿತು ಬರೆದ ಕವನಗಳು,ಸಂಕಲನಗಳು ವಿವಿಧ ನಿಯತಕಾಲಿಕೆಗಳಲ್ಲಿ ಪ್ರಕಟ ವಾಗಿವೆ.ಪ್ರೊ.ನಿಶಾತ್ ಅವರು ವಿದ್ಯಾರ್ಥಿಗಳಿಗೆ ಜೀವನದಲ್ಲಿ ಕಾವ್ಯದ ಅಗತ್ಯ ಮತ್ತು ಕವನ ಬರೆಯುವ ಪ್ರಕ್ರಿಯೆಯ ಬಗ್ಗೆ ವಿವರಿಸಿದರು ಪ್ರೇಕ್ಷಕರಿಗೆ ಸಂಪನ್ಮೂಲ ವ್ಯಕ್ತಿಯೊಂದಿಗೆ ಸಂವಾದ ನಡೆಸಲಾಯಿತು.
ಉರ್ದು ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ. ಮೈಮೂನಾ ಸರಡಗಿ,ಇಂಗ್ಲೀಷ್ ವಿಭಾಗದ ಪ್ರಾಧ್ಯಪಕಿ ಡಾ.ಅತಿಯಾ ಸುಲ್ತಾನ ಹಾಗೂ ಡಾ. ಜೈನಬ ಸ್ವರಚಿತ ಕವನ ವಾಚಿಸಿದರು.
ಆಂಗ್ಲ ವಿಭಾಗದ ಸಹಾಯಕ ಪ್ರಾಧ್ಯಪಕಿ ಡಾ. ಜೈನಬ ಮುಖ್ಯ ಅತಿಥಿಗಳನ್ನು ಸ್ವಾಗತಿಸಿ ಸಮಕಾಲೀನ ಕಾವ್ಯದ ಮಹತ್ವವನ್ನು ವಿವರಿಸಿದರು. ಸಜಾವುದ್ದಿನ್ ಸಫಿ ಸಂದರ್ಶನ ಮಾಡಿದರೆ, ಡಾ.ಅಥಿಯಾ ಸುಲ್ತಾನ ವಂದಿಸಿದರು.
ಈ ಕಾರ್ಯಕ್ರಮದಲ್ಲಿ ಎಲ್ಲಾ ವಿಭಾಗದ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಹಾಜರಿದ್ದರು.
ವರದಿ:ಅಪ್ಪಾರಾಯ ಬಡಿಗೇರ
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.