ಸಿಂಧನೂರು ನಗರದ ಶ್ರೀ ದೇವರಾಜ ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯದಲ್ಲಿ ಇಂದು 11 ಸಸಿಗಳನ್ನು ನೆಡುವ ಮೂಲಕ ವನಸಿರಿ ಫೌಂಡೇಶನ್ ಮಸ್ಕಅಧ್ಯಕ್ಷರಾದ ರಾಜು ಬಳಗಾನೂರ ಅವರು ತಮ್ಮ ಹುಟ್ಟು ಹಬ್ಬವನ್ನು ಶಿಕ್ಷಕರು ಹಾಗೂ ವಿದ್ಯಾರ್ಥಿಗಳೊಂದಿಗೆ ಆಚರಿಸಿಕೊಂಡರು.
ಸಸಿನೆಟ್ಟು ನೀರುಣಿಸಿ ಮಾತನಾಡಿ ಪರಿಸರದ ಸಂರಕ್ಷಣೆ ಎಂಬುದು ನಮ್ಮೆಲ್ಲರ ಜವಾಬ್ದಾರಿ ಮಾತ್ರವಲ್ಲದೆ ಪ್ರತಿಯೊಬ್ಬರ ಹೊಣೆಗಾರಿಕೆಯೂ ಹೌದು.ಈ ನಿಟ್ಟಿನಲ್ಲಿ ಪರಿಸರ ಸಂರಕ್ಷಣೆಗೆ ವೈಯಕ್ತಿಕವಾಗಿ ನಾವುಗಳು ಹುಟ್ಟು ಹಬ್ಬ ಹಾಗೂ ಇನ್ನಿತರ ಸಮಾರಂಭಗಳಲ್ಲಿ ಸಸಿಗಳನ್ನು ನೆಟ್ಟು ಆಚರಿಸಿಕೊಳ್ಳಬೇಕು.
ನೆಮ್ಮದಿಯ ಜೀವನಕ್ಕೆ ಪರಿಸರ ಸಂರಕ್ಷಣೆ ಅತ್ಯಗತ್ಯ ಮಾನವ ಪರಿಸರ ಜೀವಿ.ಮನುಷ್ಯ ಬದುಕಲು ಅನಿವಾರ್ಯವಾಗಿರುವ ಮೂಲ ಆವಶ್ಯಕಗಳು ಸಿಗುವುದೇ ಪರಿಸರದಿಂದ ಎನ್ನುವ ಸತ್ಯ ನಮಗೆಲ್ಲಾ ತಿಳಿದೇ ಇದೆ.ನಮ್ಮ ಸುತ್ತಮುತ್ತಲಿನ ಪರಿಸರ ಚೆನ್ನಾಗಿದ್ದರೆ ಮಾತ್ರ ನಾವು ಚೆನ್ನಾಗಿರಲು ಸಾಧ್ಯ ಹಾಗಾಗಿ ನೆಮ್ಮದಿಯ ಹಾಗೂ ಆರೋಗ್ಯಕರ ಬದುಕಿಗೆ ಪರಿಸರವನ್ನು ಸಂರಕ್ಷಿಸುವುದು ಅತ್ಯಂತ ಅಗತ್ಯ.ಇದನ್ನು ಈಗಾಗಲೇ ನಮ್ಮ ವನಸಿರಿ ತಂಡ ಆದಷ್ಟೂ ಸಾರ್ವಜನಿಕರಿಗೆ ತಿಳಿಸುವ ಕಾರ್ಯದಲ್ಲಿ ತೊಡಗಿದೆ ಎಲ್ಲರೂ ವನಸಿರಿ ಫೌಂಡೇಶನ್ ಜೊತೆಗೆ ಕೈಜೋಡಿಸಿ ಪರಿಸರ ಸಂರಕ್ಷಣೆಗೆ ಮುಂದಾಗಬೇಕು ಎಂದರು.
ಈ ಸಂದರ್ಭದಲ್ಲಿ ವನಸಿರಿ ಫೌಂಡೇಶನ್ ಮಸ್ಕಿ ತಾಲೂಕ ಅಧ್ಯಕ್ಷರಾದ ರಾಜು ಬಳಗಾನೂರ,ವಾರ್ಡನ್ ಸುವರ್ಣ,ವನಸಿರಿ ಸದಸ್ಯರಾದ ಶಿವು,ಕಿರಣ ಪತ್ತಾರ,ದೇವರಾಜ ಎಲೆಕೂಡ್ಲಿಗಿ,ಶ್ರೀನಿವಾಸ,ಬಸವರಾಜ ಕಮತಗಿ,ಚನ್ನಪ್ಪ ಕೆ.ಹೊಸಹಳ್ಳಿ ಇನ್ನಿತರರು
ಹಾಜರಿದ್ದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.